ನಾ ಕಂಡ ಕನಸು - ಕವನ
Thursday, December 31, 2020
Edit
ಮೋಕ್ಷ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಾಣಿಲ
ಬಂಟ್ವಾಳ ತಾಲೂಕು
ನಾ ಕಂಡ ಕನಸು - ಕವನ
ಕನಸೊಂದ ಕಟ್ಟಿರುವೆ ನಾ ಹೊಸ ವರುಷಕೆ
ಖುಷಿಯ ನೀಡಲಿಕ್ಕಾಗಿ ಎಲ್ಲರ ಮನಕೆ .
ಮಹಾಮಾರಿಯು ಬಂದು ಬೀರಿದೆ ತನ್ನ ಪ್ರಭಾವ
ಇದರಿಂದ ತಪ್ಪಿಸಲು ನಾ ನೀಡುವೆ ಎಚ್ಚರವ !
ಹೊರ ಹೋಗುವಾಗ ಬಳಸಬೇಕು ಮಾಸ್ಕ್
ಸ್ಯಾನಿಟೈಸರ್ ಗಳು !
ನಮ್ಮ ನಮ್ಮ ನಡುವೆ ಇರಲಿ ಅಂತರಗಳು
ವೈರಸ್ ನ ಬಗೆಗೆ ಚರ್ಚಿಸುವೆ ಮನೆಯೊಳಗೆ ಚರ್ಚಿಸಿದ ವಿಷಯವ ತಿಳಿಸುವೆ ಎಲ್ಲರಿಗೆ.....
ನಮ್ಮ ದೇಶವು ವೈರಸ್ ಗಳಿಂದ ಮುಕ್ತವಾಗಲಿ
ಹೊಸ ವರುಷಕೆ ಎಲ್ಲರ ಮುಖದಲ್ಲಿ ನಗೆ ಮೂಡಲಿ
ಇದೇ ನಾ ಕಂಡ ಕನಸು
ಹೊಸ ವರುಷದಲಿ ಇದಾಗಲಿ ನನಸು
ಮೋಕ್ಷ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಾಣಿಲ
ಬಂಟ್ವಾಳ ತಾಲೂಕು