ನಮ್ಮಯ ಶಾಲೆ - ಕವನ
Friday, December 11, 2020
Edit
ಫಾತಿಮತ್ ಇರ್ಷಾನ
9ನೇ ತರಗತಿ
ನಮ್ಮಯ ಶಾಲೆ - ಕವನ
ನಮ್ಮಯ ಶಾಲೆಗೆ ಬಂದರೆ ನೋಡಿರಿ
ಹಚ್ಚ ಹಸಿರಿನ ಕೃಷಿ ಇಲ್ಲಿ
ತೆಂಗಿನ ಕಂಗಿನ ಮಾವಿನ
ಮರವು ಕಂಗೊಳಿಸಿದೆ ಇಲ್ಲಿ
ಅಲಸಂಡೆಯೂ ಬೆಂಡೆಯೂ ತೊಂಡೆಯೂ
ಬೆಳೆಯುತ್ತಿವೆ ಇಲ್ಲಿ
ಮಾವು ಹಲಸು ನೇರಳೆ ಪೇರಳೆ
ಹಣ್ಣಾಗಿದೆ ಇಲ್ಲಿ
ನಮ್ಮಯ ಶಾಲೆಯ ಸುತ್ತಮುತ್ತಲೂ
ಹಚ್ಚ ಹಸಿರಿನಿಂದ ತುಂಬಿದೆ ಇಲ್ಲಿ
ಮರ ಗಿಡಗಳಿಂದ
ತಂಪಾದ ಗಾಳಿ ಬೀಸುತ್ತಿದೆ ಇಲ್ಲಿ
ಹಣ್ಣು ಹಂಪಲು ತಿಂದು ನಾವು
ಆರೋಗ್ಯವಾಗಿದ್ದೇವೆ ಇಲ್ಲಿ
ನಮ್ಮಯ ಶಾಲೆ ಅಭಿವೃದ್ಧಿಯತ್ತ
ಸಾಗುತ್ತಿದೆ ಇಲ್ಲಿ .
ಫಾತಿಮತ್ ಇರ್ಷಾನ
9 ನೇ ತರಗತಿ
ಸ. ಪ್ರೌಢಶಾಲೆ ಸುರಿಬೈಲು.