-->
ಹೇ ಮೇಘವೇ - ಕವನ

ಹೇ ಮೇಘವೇ - ಕವನ

ಶ್ರಾವ್ಯ 10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು

         ಹೇ ಮೇಘವೇ - ಕವನ

ಬಾನೆತ್ತರದಲಿ ಓಡಾಡುವ ಮೇಘ ದೂತನೇ 
ನಿನ್ನ ಕಂಡು ನಾ ನನ್ನೇ ಮರೆತೆನೆ !

ಅಲ್ಲಿ ಇಲ್ಲಿ ಅಲೆದಾಡುವ ಪಯಣ ನಿನ್ನದು
ನಿನ್ನ ನೋಡುತ ಕುಂತರೆ ಕಲ್ಪನೆಯ ಪಯಣ ನನ್ನದು ;

ಒಮ್ಮೆ ಸ್ಥಿರ ಬಂಡೆಯಂತೆ ನೀನು ,
ಇನ್ನು ಕೆಲವೊಮ್ಮೆ ಚಂಚಲತೆಯ ಪ್ರತೀಕ ನೀನು.

ಒಮ್ಮೆ ವಿಮಾನದಂತೆ ಕಂಡು
ಎತ್ತರ ಎತ್ತರಕೆ ಹಾರುವ ಕನಸನು ಚೆಲ್ಲುವೆ !
ಇನ್ನೊಂದೆಡೆ ಮೀನಾಗಿ ಕಂಡು
ನೀರಸವಾಗಿ ಈಜುವ ಆಸೆ ಮೂಡಿಸುವೆ !

ಪ್ರತಿ ನಿಮಿಷಕ್ಕೂ ಒಂದೊಂದು ಆಕಾರ 
ನೂರಾರು ಭಾವನೆ ಸೆರೆಯಾಗಿದೆ ನನ್ನಲ್ಲಿ ,
ನಿನ್ನ ನೋಡುತ ಅಲ್ಲಿ ಇಲ್ಲಿ .

ಹೇ ಮೇಘವೇ ಇದೆಷ್ಟು ಸಾರುವೆ ಸಂದೇಶ ;
ನೀನೊಂದು ಅಪರಿಮಿತ, ಅನಂತ ಮುಗಿಯದ ಕಥೆ............ 

                             ಶ್ರಾವ್ಯ 10 ನೇ ತರಗತಿ

Ads on article

Advertise in articles 1

advertising articles 2

Advertise under the article