
ಹೂವು - ಕವನ
Saturday, December 5, 2020
Edit
ಹೂವು - ಕವನ
ಧೃತಿ 8 ನೇ ತರಗತಿ
ಸರಕಾರಿ ಪ್ರೌಢ ಶಾಲೆ ಮಂಚಿ
ಕೊಳ್ನಾಡು ಬಂಟ್ಟಾಳ
ಹೂವು
ಹೂವೇ ನೀನು ಎಷ್ಟು ಚಂದ
ನಿನ್ನ ಚೆಲುವು ಮನಕೆ ಅಂದ
ನಿನ್ನ ಮುಡಿದ ನಾನು ಚೆಂದ
ಬಣ್ಣ ಬಣ್ಣದಲಿರುವೆ ನೀನು
ನೊಡಲು ನೀನು ಎಷ್ಟು ಚಂದ
ಮರೆಯಲಾರೆ ನಿನ್ನ ಎಂದು
ನೀನು ಬೇಕು ಪೂಜೆಗೆ
ನೀನು ಬೇಕು ದುಂಬಿಗೆ
ನಿನಗೆ ಯಾರು ಸಾಟಿಯೆ
ನಿನ್ನ ಘಮ ಘಮವಾದ ಸುವಾಸನೆ
ಎಲ್ಲರಿಗೂ ಹರಡುವೆ ನೀನು
ಭೇದ ಭಾವವಿಲ್ಲ ನಿನಗೆ
ಬಡವ ಶ್ರೀಮಂತ ಎಂದು
ಧೃತಿ 8 ನೇ ತರಗತಿ
ಸರಕಾರಿ ಪ್ರೌಢ ಶಾಲೆ ಮಂಚಿ
ಕೊಳ್ನಾಡು ಬಂಟ್ಟಾಳ