ಹದ್ದು ಮತ್ತು ಗಿಳಿ - ಕಥೆ
Saturday, December 5, 2020
Edit
ಹದ್ದು ಮತ್ತು ಗಿಳಿ-ಕಥೆ
3 ನೇ ತರಗತಿ
ಹದ್ದು ಮತ್ತು ಗಿಳಿ
ಒಂದು ಮರದಲ್ಲಿ ಹದ್ದು ಕುಳಿತಿತ್ತು. ಆಹಾರಕ್ಕಾಗಿ ಅತ್ತ ಇತ್ತ ನೋಡುತ್ತಿತ್ತು. ಆಗ ಆ ಮರದಲ್ಲಿ ಗಿಳಿಯೊಂದು ಗೂಡು ಕಟ್ಟುವುದನ್ನು ನೋಡಿತು. ಸ್ವಲ್ಪ ಸಮಯ ಕಳೆದ ಮೇಲೆ ಗಿಳಿಯು ಒಂದು ಮೊಟ್ಟೆ ಇಟ್ಟಿತು. ಸ್ವಲ್ಪ ಸಮಯ ಕಳೆದ ಮೇಲೆ ಮೊಟ್ಟೆಯಿಂದ ಮರಿ ಹೊರ ಬಂತು. ಮತ್ತೆ ಹದ್ದು ಆ ಮರಿಯನ್ನು ತಿನ್ನಲು ತುಂಬಾ ಪ್ರಯತ್ನಿಸಿತು. ಆದರೆ ಆಗಲಿಲ್ಲ. ಒಂದು ದಿನ ಗಿಳಿಯು ಆಹಾರ ಹುಡುಕಲು ಆಚೆ ಹೋಯಿತು. ಆಗ ಹದ್ದು ಗಿಳಿ ಮರಿಯನ್ನು ತಿಂದು ಹೊರಟು ಹೋಯಿತು.
ವೈಷ್ಣವಿ ವೈ.ಕೆ. ಅಗ್ರಬೈಲ್
3ನೇ ತರಗತಿ