-->
ಪ್ರತಿಭಾನ್ವಿತ ಮಕ್ಕಳು : ಐಶ್ವರ್ಯಾ ಮತ್ತು ಹವೀಶ್

ಪ್ರತಿಭಾನ್ವಿತ ಮಕ್ಕಳು : ಐಶ್ವರ್ಯಾ ಮತ್ತು ಹವೀಶ್

                ಪ್ರತಿಭಾನ್ವಿತ ಮಕ್ಕಳು
       ಐಶ್ವರ್ಯಾ ಆರ್ ಪೂಜಾರಿ ಮತ್ತು 
              ಹವೀಶ್ ಆರ್ ಪೂಜಾರಿ
ಪ್ರತಿಭಾನ್ವಿತ ಮಕ್ಕಳು : ಹವೀಶ್ ಆರ್ ಪೂಜಾರಿ 
           ಮತ್ತು ಐಶ್ವರ್ಯಾ ಆರ್.ಪೂಜಾರಿ

    ಮಕ್ಕಳು ಪ್ರತಿಭಾನ್ವಿತರಾಗಿರಬೇಕೆಂದು ಪ್ರತಿಯೊಬ್ಬ ತಂದೆ-ತಾಯಿಯೂ ಕನಸು ಕಾಣುತ್ತಾರೆ. ಹುಟ್ಟಿದ ಪ್ರತಿ ಮಗುವಿನಲ್ಲೂ ವಿಶೇಷ ಪ್ರತಿಭೆ ಅಡಗಿರುವುದು ಸಹಜ. ಮಕ್ಕಳ ಆಸೆ ಅಭಿರುಚಿಗಳನ್ನು ಪತ್ತೆಹಚ್ಚಿ ಸರಿಯಾದ ಮಾರ್ಗದರ್ಶನ ನೀಡಬೇಕಾದುದು ತಂದೆ-ತಾಯಿಯವರ ಕರ್ತವ್ಯ. ಮಕ್ಕಳು ಆ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಬೆಳೆದರೆ ಅದ್ಭುತ ಸಾಧನೆ ಮಾಡಲು ಅನುಕೂಲವಾಗುತ್ತದೆ. ಅಂತಹ ವಿಶಿಷ್ಟ ಸಾಧನೆ ಮಾಡುತ್ತಿರುವ ಒಂದೇ ಕುಟುಂಬದ ಇಬ್ಬರು ಮಕ್ಕಳಿದ್ದಾರೆ. ಕಾಲಿನ ಬೆರಳುಗಳಲ್ಲಿ ನೃತ್ಯ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿರುವ ಐಶ್ವರ್ಯ ಆರ್ ಪೂಜಾರಿ ಮತ್ತು ಹವೀಶ್ ಆರ್ ಪೂಜಾರಿ. ಇವರು ಮಂಗಳೂರು ಪಡೀಲಿನಲ್ಲಿರುವ ಕೊಡಕ್ಕಲ್ಲು ನೂಜಿಯ ನಿವಾಸಿಗಳಾದ ರಾಜೇಶ್ ಪೂಜಾರಿ ಮತ್ತು ಶ್ರೀಮತಿ ನಿರ್ಮಲಾ ಪೂಜಾರಿ ದಂಪತಿಗಳ ಮಕ್ಕಳು.  
             ನೃತ್ಯ ಹೆಣ್ಣು ಮಕ್ಕಳಲ್ಲಿ ಸಹಜವಾಗಿಯೇ ಅಂತರ್ಗತವಾಗಿರುವ ವಿದ್ಯೆ. ನೃತ್ಯವನ್ನು ಸವಾಲಾಗಿ ಸ್ವೀಕರಿಸಿ ಹೊಸತನದ ದಿಕ್ಕಿನಲ್ಲಿ ಕೊಂಡೊಯ್ಯುವುದು ವಿಶೇಷತೆ. ಪುಟಾಣಿ ಐಶ್ವರ್ಯ ಮಾಡಿದ್ದು ಇದನ್ನೇ. ಬಾಲ್ಯದಿಂದಲೇ ನೃತ್ಯದಲ್ಲಿ ವಿಶೇಷ ಆಸಕ್ತಿಯನ್ನು ತೋರುತ್ತಿದ್ದುದನ್ನು ಮನಗಂಡು ಗರೋಡಿ ಶಾಖೆಯ ಸೌರಭ ಕಲಾ ಪರಿಷತ್ತಿನಲ್ಲಿ ಗುರುಗಳಾದ ಡಾ. ಶ್ರೀವಿದ್ಯಾ ಮುರಳೀಧರ ಇವರಲ್ಲಿ ಭರತನಾಟ್ಯದ ತರಬೇತಿಗೆ ಸೇರಿಸಲಾಯಿತು. ಮೂರುವರೆ ವರ್ಷದಿಂದ ನೃತ್ಯಕ್ಕೆ ಒಗ್ಗಿಕೊಂಡ ಐಶ್ವರ್ಯ ತುಂಬಾ ಪ್ರತಿಭಾನ್ವಿತ ಬಾಲಕಿ. ಸಂಗೀತದಲ್ಲೂ ವಿಶೇಷವಾದ ಆಸಕ್ತಿಯನ್ನು ಮೈಗೂಡಿಸಿಕೊಂಡು ಕಲಿಯುತ್ತಿದ್ದಾಳೆ. ಮಂಗಳೂರು ಕುಲಶೇಖರದ ಸೇಕ್ರೆಡ್ ಹಾರ್ಟ್ ಸ್ಕೂಲ್ನಲ್ಲಿ ಎರಡನೇ ತರಗತಿಯಲ್ಲಿ ಕಲಿಯುತಿರುವ ಈಕೆ ಯಕ್ಷಗಾನದಲ್ಲಿಯೂ ಬಣ್ಣ ಹಚ್ಚಿದ್ದಾಳೆ.  
          ತನ್ನ ಏಳು ವರ್ಷ 11 ತಿಂಗಳ ಸಣ್ಣ ಹರೆಯದಲ್ಲಿ ನಿರಂತರ ಐದು ನಿಮಿಷಗಳ ಕಾಲ ಕಾಲಿನ ಬೆರಳುಗಳಲ್ಲಿ ನೃತ್ಯವನ್ನು ಮಾಡಿ ಇಂಡಿಯಾ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿರುವುದು ನಮ್ಮ ನಾಡಿಗೆ ಹೆಮ್ಮೆ ಇಂತಹ ವಿಶಿಷ್ಟ ಅಂತ ವಿಭಿನ್ನ ಪ್ರಯೋಗಗಳಲ್ಲಿ ತಂದೆ-ತಾಯಿಯ ಪ್ರೋತ್ಸಾಹದೊಂದಿಗೆ ಪಾಲ್ಗೊಳ್ಳುವುದು ಐಶ್ವರ್ಯನ ಆಸಕ್ತಿಗಳಲ್ಲಿ ಒಂದು.
      ಹವೀಶ್ ಆರ್ ಪೂಜಾರಿ ಐಶ್ವರ್ಯನಿಗೆ ಅಣ್ಣ. ಈತನು ಪ್ರತಿಭಾನ್ವಿತ ಬಾಲಕ. ತನ್ನ ಮೂರು ವರ್ಷದ ಹರೆಯದಲ್ಲೇ ವೇದಿಕೆಯನ್ನು ಹತ್ತಿ ಪ್ರತಿಭೆಯನ್ನು ಪ್ರದರ್ಶಿಸಿದವನು. ಕರಾಟೆ , ಯಕ್ಷಗಾನ ,ಸಂಗೀತ ಇವೆಲ್ಲ ಈತನ ಆಸಕ್ತಿಯ ಕ್ಷೇತ್ರಗಳು. ಕರಾಟೆಯಲ್ಲಿ ತರಬೇತಿ ಪಡೆಯುತ್ತಾ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಬಾಚಿಕೊಂಡವನು. ಯಕ್ಷಗಾನ ಕಲಾವಿದ ಜ್ಞಾನೇಂದ್ರ ತೀರ್ಥ ಇವರ ಗರಡಿಯಲ್ಲಿ ಯಕ್ಷಗಾನವನ್ನು ಕಲಿಯುತ್ತಿದ್ದು ಈಗಾಗಲೆ ಗೆಜ್ಜೆಕಟ್ಟಿ ಹಲವಾರು ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. 
      ಗಾಯನದಲ್ಲಿಯು ಆಸಕ್ತಿಯನ್ನು ಕಂಡುಕೊಂಡಿರುವ ಈತ ಸಂಗೀತ ಗುರುಗಳಾದ ರೇಖಾ ದಿನೇಶ್ ಮಂಜೇಶ್ವರ ಇವರಲ್ಲಿ ಸಂಗೀತಾಭ್ಯಾಸವನ್ನು ಮಾಡುತ್ತಿದ್ದಾನೆ. ಛದ್ಮವೇಷ ಆಟೋಟ ಸ್ಪರ್ಧೆ ಈತನ ಅಭಿರುಚಿಯ ಕ್ಷೇತ್ರಗಳು. ಮಂಗಳೂರು ಕುಲಶೇಖರದ ಸೇಕ್ರೆಡ್ ಹಾರ್ಟ್ ಹಾರ್ಟ್ ಶಾಲೆಯಲ್ಲಿ 4ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಕಲಿಕೆಯಲ್ಲಿ ಮುಂದಿರುವ ಈತ ಎಲ್ಲಾ ಚಟುವಟಿಕೆಯಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾನೆ.
        ಐಶ್ವರ್ಯ ಮತ್ತು ಹವೀಶ್ ತಮ್ಮ ಸಣ್ಣ ಹರೆಯದಲ್ಲಿಯೇ ವಿಶೇಷ ಸಾಧನೆಗಳನ್ನು ಮಾಡುತ್ತಾ ಬಹಳಷ್ಟು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ರೆಹಮಾನ್ ಕುಂಜತ್ ಬೈಲ್ ಸಾರಥ್ಯದಲ್ಲಿ ನಡೆಸುವ ರಂಗ ಸ್ವರೂಪದ ಬೇಸಿಗೆ ಶಿಬಿರಗಳಲ್ಲಿ ಪಾಲ್ಗೊಳ್ಳುತ್ತಾ ಬೆಳೆದ ಇವರು ತಂದೆ-ತಾಯಿಯ ಬೆಂಬಲದೊಂದಿಗೆ ಇನ್ನಷ್ಟು ಸಾಧನೆಯ ಗುರಿ ಹೊಂದಿದ್ದಾರೆ. ಬಹಳಷ್ಟು ಎತ್ತರಕ್ಕೆ ಏರಲಿರುವ ಈ ಇಬ್ಬರೂ ಮಕ್ಕಳ ಯಶಸ್ಸಿಗೆ ಮಕ್ಕಳ ಜಗಲಿಯ ಶುಭಹಾರೈಕೆಗಳು ಸದಾ ಇರುತ್ತದೆ.

Ads on article

Advertise in articles 1

advertising articles 2

Advertise under the article