
ಹೊಸ ವರ್ಷದಲ್ಲಿ ನನ್ನ ಕನಸು
Thursday, December 31, 2020
Edit
ಅನ್ವಿತ್, 4ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಕೊಮೆ , ತೆಕ್ಕಟ್ಟೆ, ಕುಂದಾಪುರ.
ಹೊಸವರ್ಷದಲ್ಲಿ ನನ್ನ ಕನಸು
2020ನೇ ವರ್ಷವು ಬಹಳ ಶೋಚನೀಯವಾಗಿತ್ತು. ಕೋವಿಡ್-19 ಮಹಾ ರೋಗವು ಇಡೀ ವಿಶ್ವವನ್ನೇ ಬುಡಮೇಲು ಮಾಡಿದಂತಿದೆ. ಜನಜೀವನ ತುಂಬಾ ಕಷ್ಟಕರವಾಗಿದೆ. ಇನ್ನು ಬರುವಂತಹ 2021 ನೇ ಇಸವಿಯಲ್ಲಿ ನನ್ನ ಕನಸು ಏನೆಂದರೆ ಕೋವಿಡ್- 19 ಮಹಾರೋಗದಿಂದ ನಾವೆಲ್ಲ ಪಾರಾಗಬೇಕು. ನಮ್ಮ ಹೆಮ್ಮೆಯ ಭಾರತ ದೇಶದ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಅನಾರೋಗ್ಯದಲ್ಲಿ ಇರುವವರು, ನಮ್ಮ ದೇಶವನ್ನು ಹಗಲಿರುಳು ಕಾಯುವ ಸೈನಿಕರು, ಪೊಲೀಸರು, ವೈದ್ಯರು ಮತ್ತು ಇತರ ಎಲ್ಲಾ ಜನರು ಸುಖ, ಶಾಂತಿ ಹಾಗೂ ಆರೋಗ್ಯದಿಂದ ಇರುವಂತೆ ಆಶೀರ್ವದಿಸಬೇಕೆಂದು ಸೂರ್ಯ, ಚಂದ್ರ ಹಾಗೂ ಪ್ರಕೃತಿಯಲ್ಲಿ ನಾನು ಬೇಡುತ್ತೇನೆ.
ಇದೇ ನನ್ನ ಕನಸು,
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ಅನ್ವಿತ್, 4ನೇ ತರಗತಿ