-->
ಹೊಸ ವರುಷ - ಕವನ

ಹೊಸ ವರುಷ - ಕವನ

 ಶ್ರಾವ್ಯ ಎನ್. ಭಟ್
 9ನೇ ತರಗತಿ
 ವಿಶ್ವಮಂಗಳ ಆಂಗ್ಲ ಮಾಧ್ಯಮ ಶಾಲೆ, 
 ಕೊಣಾಜೆ , ಮಂಗಳೂರು

ಹೊಸ ವರುಷ - ಕವನ
ಇದೋ ಬಂತು ಹೊಸ ವರುಷ;
ಎಲ್ಲೆಡೆ ತಂದಿತು ಹೊಸ ಹರುಷ.
2020ನ್ನು ಕೆಟ್ಟ ಕನಸೆಂದು ಭಾವಿಸು;
2021ರ ಅಮೃತವನ್ನು ಸೇವಿಸು.

ಕೊರೋನಾ ಬಂದು ಪಾಠವ ಕಲಿಸಿತು;
ನಮ್ಮ ಮನಸ್ಸಿನ ಕಸವ ಕಿತ್ತೆಸೆಯಿತು.
ಮರಳಿ ಬರಲಿ ಅಂದಿನ ಸಿಹಿ;
ಮರೆತು ಹೋಗಲಿ ಇಂದಿನ ಕಹಿ.

ನೀ ಮಾಡಿದ ಕರ್ಮವ ನೀನೇ ಅನುಭವಿಸು;
ವಿಧಿಯೇ ! ನಿನ್ನ ಆಟದ ಲೀಲೆಯ ತಿಳಿಸು.
ಸನ್ನಡತೆ, ಸನ್ಮಾರ್ಗದಲಿ, ಮುನ್ನಡೆಸು ನೀ;
ಕತ್ತಲಿನ ಮಬ್ಬಿನಿಂದ ಕೈ ಹಿಡಿದು ನಡೆಸು ನೀ.

ಭರವಸೆಯ ಸೇತುವೆಯ ನೀ ನಮಗೆ ಕಟ್ಟಿರಲು;
ಹೊಸ ಕನಸಿನ ಹೊಸ ಪೀಳಿಗೆಯ ಮಕ್ಕಳು ನಾವು ಜೊತೆಯಾಗಿರಲು, 
ಅಂಜಿಕೆ ಏಕೆ? ಸಂಶಯವೇಕೆ? ಧೃಡತೆ ಇರಲಿ ನಮ್ಮ ಗುರಿಯಲಿ;
ಸಾಗುವೆವು ಧೈರ್ಯದಿ, ಸ್ವಚ್ಛ ಹೊಂಗನಸುಗಳ ಹಾದಿಯಲಿ........
                      
                   ಶ್ರಾವ್ಯ ಎನ್. ಭಟ್

Ads on article

Advertise in articles 1

advertising articles 2

Advertise under the article