ದೀಪಿಕಾ ಭಟ್ - ಚಿತ್ರಕಲಾ ಕ್ಷೇತ್ರದಲ್ಲಿ ಅರಳುತ್ತಿರುವ ಪ್ರತಿಭೆ
Saturday, December 5, 2020
Edit
ದೀಪಿಕಾ ಭಟ್ - ಚಿತ್ರಕಲಾ ಕ್ಷೇತ್ರದಲ್ಲಿ
ಅರಳುತ್ತಿರುವ ಪ್ರತಿಭೆ
ದೀಪಿಕಾ ಭಟ್ - ಚಿತ್ರಕಲಾ ಕ್ಷೇತ್ರದಲ್ಲಿ
ಅರಳುತ್ತಿರುವ ಪ್ರತಿಭೆ.
ಚಿತ್ರಕಲಾ ಶಿಕ್ಷಣ ಮಗುವಿನ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಬಾಲ್ಯದಲ್ಲಿ ತನ್ನ ಭಾವನೆಗಳನ್ನು ಪ್ರಕಟಪಡಿಸಲು ಇರುವ ಏಕೈಕ ಮಾರ್ಗವೇ ಚಿತ್ರಕಲೆ. ಮಗು ತನ್ನ ಕೈಗೆ ಸಿಕ್ಕಿದ ಯಾವುದೇ ಕಡ್ಡಿಗಳಿಂದ ಗೋಡೆ ಮೇಲೆ ಗೀಚುವುದು ಸಹಜ. ಮಗುವಿನ ಮೇಲೆ ಯಾವುದೇ ನಿರ್ಬಂಧ ಹೇರದೆ ಮಕ್ಕಳಿಗೆ ಬಾಲ್ಯವನ್ನು ಸಹಜವಾಗಿ ಬಿಟ್ಟುಕೊಟ್ಟಾಗ ಅವರು ವಿಶೇಷವಾಗಿ ಬೆಳೆಯುತ್ತಾರೆ. ಮಕ್ಕಳು ಸಹಜ ಪ್ರಕ್ರಿಯೆಯಲ್ಲಿ ತಮ್ಮ ಪ್ರತಿಭೆಯನ್ನು ಹೊರ ಚೆಲ್ಲುತ್ತಾರೆ. ಅಂತಹ ಪ್ರತಿಭೆಯನ್ನು ಮೈಗೂಡಿಸಿಕೊಂಡು ಚಿತ್ರಕಲಾ ಕ್ಷೇತ್ರದಲ್ಲಿ ಅರಳುತ್ತಿರುವ ಬಾಲಕಿ ದೀಪಿಕಾ ಭಟ್.
ಉಡುಪಿಯ ಆರ್ಕಿಟೆಕ್ಟ್ ಲಕ್ಷ್ಮೀನಾರಾಯಣ ಭಟ್ ಮತ್ತು ಶ್ರೀಮತಿ ಪ್ರಿಯಾ ಭಟ್ ದಂಪತಿಗಳ ಪುತ್ರಿ ದೀಪಿಕಾ. ಬಾಲ್ಯದಲ್ಲೇ ಚಿತ್ರಕಲೆಯಲ್ಲಿ ಇದ್ದ ವಿಶೇಷ ಆಸಕ್ತಿಯನ್ನು ಮನಗಂಡು ಪ್ರೋತ್ಸಾಹ ನೀಡಲು ಆರಂಭಿಸಿದರು. ಉಡುಪಿಯ ಖ್ಯಾತ ಮಕ್ಕಳ ಚಿತ್ರಕಲಾ ಶಾಲೆ ದೃಶ್ಯ ಸ್ಕೂಲ್ ಆಫ್ ಆರ್ಟ್ ನಲ್ಲಿ ತರಬೇತಿಗೆ ಸೇರಿಸಲಾಯಿತು.
ಹೀಗೆ ಬಣ್ಣ ಕುಂಚದಲ್ಲಿ ಆಟವಾಡಲು ಪ್ರಾರಂಭಿಸಿದ ದೀಪಿಕಾ ಚಿತ್ರಕಲೆಯ ವಿವಿಧ ಆಯಾಮಗಳಲ್ಲಿ ಪರಿಣತಿ ಪಡೆದುಕೊಳ್ಳಬೇಕೆಂಬ ಆಸಕ್ತಿಯನ್ನು ಬೆಳೆಸಿಕೊಂಡಳು. ಚಿತ್ರಕಲೆಯ ಅಭ್ಯಾಸ ನಿರಂತರ ಸಾಗುತ್ತಿದೆ. ಹೊಸತನ್ನು ಕಲಿಯಬೇಕೆಂಬ ತುಡಿತವನ್ನು ಹೊಂದಿದ ದೀಪಿಕಾ ಬಹಳಷ್ಟು ಕಲಾಕೃತಿಗಳನ್ನು ರಚಿಸುತ್ತಿದ್ದಾಳೆ.
ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ದೀಪಿಕಾ ಯುಟ್ಯೂಬ್ ಚಾನೆಲ್ ನಲ್ಲಿ ಚಿತ್ರಕಲೆಯ ವೀಡಿಯೋಗಳನ್ನು ಪ್ರದರ್ಶಿಸುತ್ತಿದ್ದಾರೆ. ಉಡುಪಿಯ ಸೈಂಟ್ ಸಿಸಿಲಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏಳನೆಯ ತರಗತಿಯಲ್ಲಿ ಕಲಿಯುತ್ತಿದ್ದಾಳೆ.