ಹುಲಿ ಬಂತು ಹುಲಿ - ಕಥೆ
Thursday, December 17, 2020
Edit
ಆತ್ಮಿಕ ಪದ್ಯಾಣ
ಯು.ಕೆ.ಜಿ
ಹುಲಿ ಬಂತು ಹುಲಿ - ಕಥೆ
ಒಂದು ಕಾಡಿನಲ್ಲಿ ಒಂದು ಪಕ್ಷಿ ಇತ್ತು. ಅದರ ಜೊತೆಗೆ ನವಿಲು, ಮೊಲ ಕೂಡ ಇತ್ತು. ನಾವೆಲ್ಲ ಸೇರಿ ಓಟ ಓಡುವನ ಎಂದು ಪಕ್ಷಿ ಕೇಳಿತು. ಎಲ್ಲವೂ ಒಪ್ಪಿದವು. ಓಟದ ಸ್ಪರ್ಧೆ ಮಾಡಿದವು. ಹತ್ತಿರದ ಉದ್ಯಾನವನಕ್ಕೆ ಜೊತೆಯಲ್ಲಿ ತಲುಪಿದವು. ಸುಸ್ತಾಗಿ ನಿದ್ದೆ ಮಾಡಿದವು. ಆ ಹೊತ್ತಿಗೆ ಹುಲಿ ಬಂತು. ಹುಲಿ ಘರ್ಜಿಸಿದಾಗ ಪ್ರಾಣಿಗಳಿಗೆ ಭಯ ಆಯಿತು. ಅವು ಎಚ್ಚರಗೊಂಡವು. ಹುಲಿ ಬಂತು ಹುಲಿ ಎಂದು ಓಡಿ ಹೋದವು. ಅದೇ ಹೊತ್ತಿಗೆ ಹುಲಿಯ ಕಾಲಿಗೆ ಒಂದು ಮುಳ್ಳು ತಾಗಿತು. ಅದು ನೋವಿನಿಂದ ಗುಹೆಯ ಕಡೆಗೆ ಹೋಯಿತು. ಮೊಲ, ನವಿಲು ಪಕ್ಷಿಗಳೆಲ್ಲಾ ಹುಲಿ ಬರುತ್ತದಾ ಎಂದು ನೋಡಿದವು. ಇಲ್ಲ.. ಎಷ್ಟು ಹೊತ್ತಾದರೂ ಹುಲಿ ಬರಲಿಲ್ಲ ; ಎಂದು ಮತ್ತೆ ಖುಷಿಯಿಂದ ನಿದ್ದೆ ಮಾಡಿದವು. -ಆತ್ಮಿಕಾ ಪದ್ಯಾಣ, ಯು.ಕೆ.ಜಿ, ಸ.ಉ.ಹಿ. ಪ್ರಾ ಶಾಲೆ, ಚೆನ್ನೈ ತೋಡಿ, ಬಂಟ್ವಾಳ.