ಬೇಟೆಗಾರ ಮತ್ತು ಜಿಂಕೆ - ಕಥೆ
Thursday, December 17, 2020
Edit
ವೈಷ್ಣವಿ ವೈ . ಕೆ. ಅಗ್ರಬೈಲು
ಮೂರನೇ ತರಗತಿ
ಬೇಟೆಗಾರ ಮತ್ತು ಜಿಂಕೆ
ಒಂದು ದಟ್ಟವಾದ ಕಾಡು. ಅಲ್ಲಿ ಜಿಂಕೆಗಳ ಸಂಖ್ಯೆ ತುಂಬಾ ಹೆಚ್ಚಿತ್ತು. ಆದರೆ ಬೇಟೆಗಾರರು ತುಂಬಾ ಬರುತ್ತಿದ್ದರಿಂದ ಜಿಂಕೆಯ ಸಂಖ್ಯೆ ತುಂಬಾ ಕಡಿಮೆಯಾಗುತ್ತಿತ್ತು. ಆಗ ಬುದ್ಧಿವಂತ ಜಿಂಕೆಯು ಒಂದು ಉಪಾಯ ಮಾಡಿತು. ಒಂದು ಹೊಂಡದ ಹತ್ತಿರ ಇದ್ದ ಮರದ ಹಿಂದೆ ಬಚ್ಚಿಟ್ಟುಕೊಂಡು ಕಾಪಾಡಿ ಕಾಪಾಡಿ ಎಂದು ಕೂಗಿತು. ಆಗ ಬೇಟೆಗಾರ ಅತ್ತ ಇತ್ತ ನೋಡುತ್ತಾ ಹೋಗುತ್ತಿದ್ದ. ಆಗ ಬೇಟೆಗಾರ ಆ ಹಳ್ಳಕ್ಕೆ ಬಿದ್ದ. ಜಿಂಕೆ ಅದನ್ನು ನೋಡಿ ಓಡಿ ಹೋಯಿತು.
ವೈಷ್ಙವಿ ವೈ.ಕೆ. ಅಗ್ರಬೈಲ್