
ಡೌನ್ ಮಾಡಿದ ಲಾಕ್ ಡೌನ್ - ಲೇಖನ
Thursday, December 17, 2020
Edit
ಚಿರ ತನ್ಮಯಿ 6 ನೇ ತರಗತಿ
ಕುಂದಾಪುರ
ಡೌನ್ ಮಾಡಿದ ಲಾಕ್ ಡೌನ್ - ಲೇಖನ
ಮೊದ ಮೊದಲು ಈ ಕರ್ಫ಼್ಯೂ, ಲಾಕ್ ಡೌನ್, ಸೀಲ್ ಡೌನ್ ಎಲ್ಲಾ ಆರ್ಥವೇ ಆಗಿರಲಿಲ್ಲ. ನಿಜ ಹೇಳಬೇಕೆಂದರೆ ರಜೆ ಬೇಗ ಶುರುವಾಯ್ತಲ್ಲ ಅಂತ ಸಣ್ಣ ಖುಷಿನೂ ಆಗಿತ್ತು. ಆಮೇಲೆ ಗೊತ್ತಾಗಿದ್ದು ಈ ಕೊರೋನಾದ ರೌದ್ರಾವತಾರ.
ನ್ಯೂಸ್ ಗಳಲ್ಲಂತೂ, ' ಕರ್ನಾಟಕದಲ್ಲಿ ಕೊರೋನಾಘಾತ', ' ಕೊರೋನಾ ಮಹಾ ಸ್ಪೋಟ' ಶೀರ್ಷಿಕೆಗಳನ್ನು ನೋಡಿ ಬೇಸತ್ತು ಹೋಗಿದ್ದೆ.
ಇಂಥ ಸಮಯದಲ್ಲಿ ನಮ್ಮ ಶಿಕ್ಷಕರ ಹೋಮ್ ವಿಸಿಟ್ ಶುರು ಆಯ್ತು. ನಂತರ ವಾರಕ್ಕೊಂದು ದಿನ ಶಾಲೆ ಎಂದಾಯ್ತು. ಆದರೆ ಈ ಉತ್ಸಾಹದ ಆಯಸ್ಸೆಲ್ಲ ಒಂದೊಂದು ದಿನ ಮಾತ್ರ!. ಅದರ ವಧೆಯೂ ಆಗಿ ಮತ್ತೆ ಬೋರು ಹೊಡೆಯತೊಡಗಿತು.
ಇದರ ನಂತರ ವಠಾರ ಶಾಲೆ ಶುರುವಾಯ್ತು. ಮತ್ತೆ ಖುಷಿಯಾಯ್ತು. ಒಂದು ದಿನ ಅದರದ್ದೂ ಕೊಲೆ ಆಯ್ತು.
ದುರದೃಷ್ಟವೆಂದರೆ ನನ್ನ ಗೆಳತಿಯರ ಫ಼ೋನ್ ನಂಬರ್ ಇದ್ದ ಚೀಟಿಯೂ ಮಿಸ್ ಆಗಿತ್ತು. ಅಮ್ಮನ ಜೊತೆ ಸೇರಿ ವಿವಿಧ ಪಾಕ ಪ್ರಯೋಗಗಳನ್ನು ಮಾಡತೊಡಗಿದೆ. ಹಲವು ಮಕ್ಕಳ ಸಿನೆಮಾಗಳನ್ನು ನೋಡಿದೆ. ನಿಜ ಹೇಳಬೇಕೆಂದರೆ ನನ್ನನ್ನು ಬದುಕಿಸಿದ್ದೇ ಟಿ.ವಿ. ಯಲ್ಲಿ ಬರುತ್ತಿದ್ದ ರಾಮಾಯಣ, ಮಹಾಭಾರತ, ಸೀತೆಯ ರಾಮ ಹಾಗೂ ರಾಧಾಕೃಷ್ಣರು!.
ಇನ್ನು ಜೀವಮಾನವಿಡೀ ರಜೆಯೇ ಬೇಡ ಎನಿಸಿಬಿಟ್ಟಿದೆ. ಶಾಲೆ ಇದ್ದಾಗ ರಜೆಗೆ ಹಾತೊರೆಯುತ್ತಿದ್ದ ನನಗೆ ತಕ್ಕ ಶಾಸ್ತಿಯಾಗಿದೆ.
ಚಿರ ತನ್ಮಯಿ 6ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ಹೆಸ್ಕುತ್ತೂರು , ಕುಂದಾಪುರ
ಉಡುಪಿ ಜಿಲ್ಲೆ.