ನನ್ನೊಲವಿನ ಶಾಲೆ
Wednesday, November 11, 2020
Edit
ಮರುಗುತಿದೆ ಮನಸ್ಸು...
ಓ ಶಾಲೆಯೇ ನೀನೆಷ್ಟು
ನನ್ನಿಂದ ದೂರ...
ಸಹಿಸಲಾರೆ ಈ ಅಂತರ..,..,
ಶಾಲೆಯೇ ನಿನ್ನ ಬಳಿಬಂದು
ಸೇರೋ ಕಾತುರ.....
ನಿನ್ನ ಜ್ಞಾನ ದೇಗುಲದಲ್ಲಿ....
ಕಲಿಯುತ್ತಿರುವ ಮಗು ನಾನು....
ಈ ಹಾಳಾದ ರೋಗದಿಂದ..
ನಿನ್ನಿಂದ ದೂರವಾಗಿ ಒದ್ದಾಡುತ್ತಿರುವೆ ನಾನು.....
ಓ ಕೊರೋನ ಇನ್ನೇನು ಬೇಕು ನಮ್ಮಿಂದ....
ನನ್ನ ಸ್ನೇಹಿತರು,ಗುರುಗಳು, ನಮ್ಮ ಶಾಲೆಯನ್ನು
ಕಿತ್ತುಕೊಂಡೆಯಲ್ಲ ನೀನೆಂತ ಪಾಪಿ..
ನಿನ್ನಿಂದ ಸಾಯುವರು ಹಲವರು..
ಮರುಗುತಿದೆ ಸಾವಿರಾರು ಜೀವಗಳ ಕನಸುಗಳು...
ಓ ಕೊರೋನ ಇನ್ನಾದರೂ ಬಿಟ್ಟು ಹೋಗು ನಮ್ಮನ್ನ
ಮಾಡು ನಮ್ಮ ಜೀವನವನ್ನು ಪಾವನ..
ಕೊಡು ನನ್ನ ಸ್ನೇಹಿತರನ್ನು , ಶಿಕ್ಷಕರನ್ನು , ನನ್ನ ಶಾಲೆಯನ್ನು.....,
ಸಂತೋಷದಿಂದ ಕಳೆಯುವೆ ನನ್ನ ಜೀವನ....
ನನ್ನ ಮುದ್ದು ಶಾಲೆಯ ಅಂಗಳದಲ್ಲಿ....
ಪುಟ್ಟ ಮಗುವಾಗಿ,..ಕಲಿಯುವ ಆಸೆ ಚಿಗುರೊಡೆದಿದೆ...
ಅದು ನೆರವೇರುವ ಮೊದಲೇ ಸುಟ್ಟು ಹಾಕಬೇಡ....
ಭಾವನೆ ತುಂಬಿದ ಕಣ್ಣ ನೀರ ಹನಿಯು ಹರಿಯುತಿದೆ....
ನೀನೆಷ್ಟು ಕ್ರೂರಿ ಕೊರೋನ.....
ಇನ್ನಾದರೂ ಬಿಡು ನಮ್ಮ ಶಾಲೆಯನ್ನ
ನಾವಿಲ್ಲದೆ ಒಂಟಿಯಾಗಿರುವ ಆ ಜ್ಞಾನ ದೇಗುಲವನ್ನ.......
ನನ್ನ ಮುಗ್ಧ ಮನಸ್ಸು ಮರುಗುತಿದೆ ಮನೆಯಲ್ಲಿ...
ಶಾಲೆ ನೀನೆಷ್ಟು ಇಷ್ಟ ನಮ್ಮೀ ಮನಸ್ಸುಗಳಲ್ಲಿ .....
ಶಾಲೆ ನೀನೆಷ್ಟು ಇಷ್ಟ ನಮ್ಮೀ ಮನಸ್ಸುಗಳಲ್ಲಿ