
ಪ್ರಕೃತಿ
Wednesday, November 11, 2020
Edit
ಮುಂಜಾನೆಯ ಮೆಲುಗಾಳಿ ತಂಪಾದ ಹಿಮ ಮಂಜು
ಅಲ್ಲಲ್ಲಿ ಚಿಲಿಪಿಲಿ ಹಕ್ಕಿಯ ಕಲರವ
ಸಜ್ಜಾಗಿ ನಿಂತ ಅರಶಿನ ಕುಂಕುಮ ಬಣ್ಣದ ಆಕಾಶ
ಮೂಡಿದ ರವಿ ಮೂಡಣದಿ ಬೆಳಕಿನ ದೀಪವ ಹೊತ್ತು
ಪಸರಿತು ಅರಿತು ರವಿಯ ಕಿರಣವು ಎಲ್ಲೆಡೆ
ನಗು ನಗುತ್ತಾ ಅರಳಿತು ಕಮಲ ಮಲ್ಲಿಗೆ
ಹಾರಿ ಹಾರಿ ಬಂದಿತು ದುಂಬಿಯು ಅಲ್ಲಿಗೆ
ಹೀರಿ ಹೀರಿ ಕುಡಿಯಿತು ಮಕರಂದ ಮೆಲ್ಲಗೆ
ಇತ್ತ ರೈತ ಹೊರಟ ಗದ್ದೆಗೆ
ನೇಗಿಲ ಮೆಲ್ಲ ಏರಿ ಹೆಗಲಿಗೆ
ಬುತ್ತಿ ಗಂಟು ಹಾಕಿ ಕೊರಳಿಗೆ
ಎಸೆಯುತ ಕೂಳ ಪ್ರಾಣಿ-ಪಕ್ಷಿ ಗೆ
ಮಧ್ಯಾಹ್ನದ ಬಿಸಿ ಬೇಗೆಯ ಕಳೆದು
ಮುಸ್ಸಂಜೆಯ ತುಸು ತಂಪನು ಕಂಡು
ಓಡಾಡಿತು ಕಾಗೆ ಗಿಳಿಗಳ ದಂಡು
ಮನ ತುಂಬಿತು ಈ ಸುಂದರ ದೃಶ್ಯವ ಕಂಡು
ಸಜ್ಜಾದ ಪಡುವಣದಿ ರವಿಯು ದಿನದ ಅಂತ್ಯಕ್ಕೆ
ಮರೆಮಾಚಿತು ಬೆಳಕಿನ ಕಿರಣ
ಅರೆಬರೆ ತುಸು ಕತ್ತಲೆ ಆವರಣ
ಆಹಾ! ಎಂಥಾ ದಿನಚರಿ ರವಿಯೇ ಕಾರಣ...