ನನ್ನ ಶಾಲೆ
Wednesday, November 11, 2020
Edit
ಶಾಲೆಗೆ ಹೋದ ಮೊದಲ ದಿನ
ಅತ್ತೆನು ಕೂತು ಇಡೀ ದಿನ
ಕಳೆದು ಹೋಯಿತು ಒಂದು ದಿನ
ಮರೆಯಲಾಗದ ಆ ಕ್ಷಣಗಳ ದಿನ !
ಶುರುವಾಯಿತು ಸ್ನೇಹಿತರೊಂದಿಗೆ ಒಡನಾಟ
ಆಡಿದೆನು ಅದೆಷ್ಟೋ ಆಟ ಕಲಿತೆನು ಪಾಠ
ಆರಂಭವಾಯಿತು ಪರೀಕ್ಷೆಯೆಂಬ ಪರದಾಟ
ಅಂತ್ಯವಾಯಿತು ನಮ್ಮ ಒಂದೊಂದೇ ತುಂಟಾಟ !
ಕಳೆದು ಹೋಯಿತು ಹಲವು ವರುಷ
ದೊರಕಿತು ಕಲಿಯಲು ಹೊಸ ಹರುಷ
ಆಟ-ಪಾಠ ಮೌಲ್ಯಗಳ ಕಲಿಸುವ ಶಾಲೆ
ದೇಗುಲವಿದು ನಮ್ಮಯ ಶಾಲೆ...