ದೇವರು ಹೀಗಿರಬಹುದು
Wednesday, November 11, 2020
Edit
ದೇವರು ಗಾಳಿಯಂತೆ
ನೋಡಲು ಮುಟ್ಟಲು ಸಾಧ್ಯವಿಲ್ಲ
ಆದರೆ ಅದಿಲ್ಲದೆ ಬದುಕಲೂ ಸಾಧ್ಯವಿಲ್ಲ!
ದೇವರು ಗಾಳಿಯಂತೆ
ಜಾತಿ ಇಲ್ಲ ಬಣ್ಣವಿಲ್ಲ ರೂಪವಿಲ್ಲ
ಗಾಳಿಯಂತೆ ಎಲ್ಲಾ ಕಡೆ ಇರುವನು!
ದೇವರು ಗಾಳಿಯಂತೆ
ಸದಾ ನಮ್ಮೊಳಗೆ ಇರುವನು
ಅವನು ಹೊರಟು ನಿಂತರೆ ನಾವೆಲ್ಲ
ಈ ಭೂಮಿಯ ಮೇಲೆ ಇರುವುದಿಲ್ಲಾ!
ದೇವರು ಗಾಳಿಯಂತೆ
ನಮ್ಮನ್ನು ಸೇರಲು ಬಯಸುತ್ತಾನೆ
ಆಧುನಿಕತೆ ಮಿತಿಮೀರಿದೆ
ನಿತ್ಯ ಮನುಷ್ಯ ಎಡವುತ್ತಾನೆ!
ದೇವರು ಗಾಳಿಯಂತೆ
ಹುಟ್ಟಿಲ್ಲ, ಸಾವಿಲ್ಲ ಅನಾದಿಕಾಲದಿಂದ
ಅನಂತಕಾಲದವರೆಗೂ ಇರುತ್ತಾನೆ.
ದೇವರು ಗಾಳಿಯಂತೆ
ಎಲ್ಲಾ ಕಡೆ ಇರುವನು
ಅವನನ್ನು ಬಂಧಿಸಲು ಸಾಧ್ಯವೇ ?
ದೇವಸ್ಥಾನ ಮಸೀದಿ ಚರ್ಚುಗಳಲ್ಲಿ !
ದೇವರು ಬೆಳಕಿನಂತೆ
ಕರುಣೆಯ ಬೆಳಕನು ನೀಡುವನು.
ಭೇದ-ಭಾವ ಮರೆತು
ಜೊತೆಗೆ ಇರುವನು ...
ದೇವರೆಂದರೆ ಹೀಗಿರಬಹುದು
ದೇವರೇ ಜಗದಲ್ಲಿ ಎಲ್ಲಾ
ಅರಿತು ಬಾಳಿದರೆ
ಒಳಿತೇ ಎಲ್ಲಾ.....