ಮಳೆ
Wednesday, November 11, 2020
Edit
ಮುಗಿಲು ಓಡುತಿದೆ ದೂರ ದೂರ
ಮಳೆಬರುವ ಸಮಯವಿದು ಕ್ಷಣ ಕ್ಷಣ
ಮಳೆ ನಿಂತಾಗ ಕಾಣುವುದು ಮಳೆಬಿಲ್ಲು
ಮಳೆ ಮುಗಿಲು ಸಾಲು ದಿನಾ ದಿನ !
ಮುಗಿಲು ಓಡುತ್ತಲೇ ನಾ ನಿಂತೆ ಅಲ್ಲೇ
ಕಾರ್ಮೋಡಗಳ ಬೆರಗು ಕಂಡೆ ನಾನಲ್ಲೇ
ಬೆಟ್ಟಗುಡ್ಡಗಳ ನಡುವೆ ಅತಿರುವೆ ನೀನು
ನಿನ್ನ ನೋಡಲು ಬಯಸಿರುವೆ ನಾನು!
ಮೋಡಗಳು ತಾಗಿ ಮಳೆ ಬಂತಾಗ
ಇಳೆಯನು ಕಂಡು ಬೆರಗಾದೆ ನಾನಾಗ
ಮಳೆಹನಿಯ ಸದ್ದು ಕಿವಿಗೆ ಇಂಪಾದಾಗ
ಮಾರ್ದನಿಯ ಕೇಳಿ ಮರೆತೆ ನಾನೀಗ !