
ಗಡಿಯಾರ
Wednesday, November 11, 2020
Edit
ಗೋಡೆಯ ಮೇಲಿನ ಗಡಿಯಾರ
ಇರುವುದು ನಾನಾ ಆಕಾರ
ಮುಖದಲ್ಲಿ ತುಂಬಾ ಅಂಕೆಗಳು
ಸದಾ ತಿರುಗುವ ಮುಳ್ಳುಗಳು
ಟಿಕ್ ಟಿಕ್ ಶಬ್ದವ ಮಾಡುತಲಿ
ಸಮಯವ ನಮಗೆ ತೋರುತಲಿ
ಕೆಲಸವ ಮಾಡುವ ಯಂತ್ರಗಳು
ಗಂಟೆಯ ಹೊಡೆಯುವ ತಂತ್ರಗಳು
ಹುಟ್ಟಿದ ಮಗುವಿಗೆ ಜಾತಕ ಬರೆಯಲು
ನಿನ್ನಯ ಸಮಯವೇ ಆಧಾರ
ಶಾಲಾ-ಕಾಲೇಜು ಆಫೀಸುಗಳು
ಸಮಯದ ಒಳಗೆ ವ್ಯವಹಾರ
ಹೊತ್ತು ಮೀರಿ ಹೋದರೆ ಕೆಲಸ
ಆಗುವುದಿಲ್ಲ ಎಂದೆಂದಿಗೂ
ಹೊತ್ತಿಗೆ ಕೊಟ್ಟರೆ ನಿಮ್ಮಯ ಮನಸು
ಜಯಶಾಲಿಗಳು ನೀವೆಂದಿಗೂ