
ನಮ್ಮ ಶಾಲೆ - ಕವನ
Friday, November 13, 2020
Edit
ನಮ್ಮ ಶಾಲೆ
ನಮ್ಮ ಶಾಲಾ ಪರಿಸರ
ನೋಡಲು ತುಂಬಾ ಸುಂದರ
ಅದೇ ಅಲ್ಲಿನ ಸೊಬಗು
ಅಲ್ಲಿಗೆ ಅದೇ ಮೆರುಗು
ಹಚ್ಚ ಹಸುರಿನ ಪೈರು
ಅಲ್ಲಿದೇ ನಮ್ಮ ಉಸಿರು..
ಅಲ್ಲಿದೇ ನಮಗೆ ಶ್ರದ್ಧೆ
ಅಲ್ಲಿ ಕಲಿಸುತ್ತಾರೆ ನಮಗೆ ವಿದ್ಯೆ
ಅಲ್ಲಿ ಹೋದರೆ ಮನಸ್ಸು ಪ್ರಫುಲ್ಲ..
ಅಲ್ಲಿದೆ ಅವಕಾಶಗಳು ವಿಪುಲ
ನಮ್ಮಶಾಲಾ ಕೈತೋಟ
ನೋಡುಗರ ಕಣ್ಣು ಕುಕ್ಕುವ ನೋಟ !
ಪ್ರಶಾಂತವಾದ ವಾತಾವರಣ
ಹಕ್ಕಿಗಳ ಕುಹೂ ಕುಹೂ ಕೂಜನ !
ನಮ್ಮ ಶಾಲಾ ಕ್ರೀಡಾಂಗಣ
ನಮ್ಮೆಲ್ಲರ ಅಚ್ಚುಮೆಚ್ಚಿನ ತಾಣ
ಅಲ್ಲಿದೇ ನೋವು ನಲಿವುಗಳ ಮಿಲನ
ಪ್ರತಿನಿತ್ಯವೂ ವಿಭಿನ್ನತೆಯ ಚಲನ ವಲನ
ನಮ್ಮ ಶಾಲೆಯೆಂಬುದು ಒಂದು ಯಾನ
ನಮ್ಮ ಶಾಲೆಯ ಹೆಸರೇ ನಾರ್ಶ ಮೈದಾನ...
ರಚನೆ:- ನಾಗರಾಜ್ ಬಿ.ಎಸ್ .ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ