ಬಣ್ಣದ ಚಿಟ್ಟೆ - ಕವನ
Friday, November 13, 2020
Edit
ಬಣ್ಣದ ಚಿಟ್ಟೆ
ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ
ಹಿಡಿಯಲು ಬಂದಾಗ ಹಾರಿ ಬಿಟ್ಟೆ..
ನಿನ್ನಯ ರೆಕ್ಕೆ ಬಣ್ಣದ ಬಟ್ಟೆ
ಹಾರುವುದನು ನೋಡಿ ಖುಷಿಯನು ಪಟ್ಟೆ
ಮೊದಲು ನೀನು ಕಂಬಳಿ ಹುಳುವೆ
ನಂತರ ತೊಡುವೆ ಬಣ್ಣದ ಒಡವೆ !
ನೀನು ಹೀರುವೆ ಮಕರಂದ
ನೋಡಲು ನೀನು ಬಲು ಅಂದ ..
ಹೂವಿನಿಂದ ಹೂವಿಗೆ ಹಾರುವೆ ನೀನು
ಪರಾಗಸ್ಪರ್ಶವ ಮಾಡುವೆ ಏನು ?
ಮತ್ತೆ ಬರುವೆಯಾ ನೀನು?
ದಿನ ದಿನ ಕಾಯಲೇ ನಾನು?
ಸೃಜನಾದಿತ್ಯ ಶೀಲ
6 ನೇ ತರಗತಿ
ಸ.ಮಾ.ಹಿ.ಪ್ರಾ.ಶಾಲೆ ಸುಳ್ಯ.