ಬಾಲ್ಯದ ನೆನಪುಗಳು
Friday, November 13, 2020
Edit
ಬಾಲ್ಯದ ನೆನಪುಗಳು
ಕಳೆದು ಹೋಯಿತೇ ಬಾಲ್ಯ
ಅಮ್ಮನ ಬೆಚ್ಚಗಿನ ಮಡಿಲು ಸದಾ ಸಿಗುತ್ತಿಲ್ಲ
ಗುಮ್ಮನ ಭಯದ ಕಾಟದ ಆಟವೂ ಇಲ್ಲ
ಮರದಲ್ಲಿ ತೂಗಿ ಹಾಡುವ ಜೋಕಾಲಿ ಇಲ್ಲ
ಅಯ್ಯೋ ಕಳೆದು ಹೋಯಿತೇ ಬಾಲ್ಯ...
ಕದ್ದು ಕೊಯ್ಯುವ ಮಾವಿನ ಹಣ್ಣಿಲ್ಲ
ಅದಾದ ಮೇಲೆ ಓಡುವ ಓಟವಿಲ್ಲ
ಕದ್ದು ಸಿಕ್ಕಿಬಿದ್ದ ಮೇಲೆ ತಿನ್ನುವ ಪೆಟ್ಟಿಲ್ಲ
ಅಯ್ಯೋ ಕಳೆದುಹೋಯಿತೇ ಬಾಲ್ಯ...
ದಾರಿ ತುಂಬಾ ಓಡಾಡಿಸಿದ ತೂತು ಟಯರಿಗಳಿಲ್ಲ
ಮರಗಳಲ್ಲಿ ಹೊರಳಾಡುತ್ತಿದ್ದ ಚಡ್ಡಿದೋಸ್ತಿಗಳಿಲ್ಲ
ಚಿರಿಪಿರಿ ಮಳೆಗೆ ನೆನೆದು ನಡುಗುವ ಚಳಿ ಇಲ್ಲ
ಅಯ್ಯೋ ಕಳೆದು ಹೋಯಿತೇ ಬಾಲ್ಯ...
ಅಜ್ಜಿ ಹೇಳುತ್ತಿದ್ದ ನೀತಿ ಕಥೆಗಳಿಲ್ಲ
ಬಜ್ಜಿ ತಿನ್ನಿಸುತ್ತಿದ್ದ ಅಜ್ಜಿ ಬದುಕಿಲ್ಲ
ನಾಚಿಕೆ ಇಲ್ಲದೆ ಕೇಳುತ್ತಿದ್ದ ಅಪ್ಪನ ಬೈಗುಳಕ್ಕೆ ಕೊನೆಯೇ ಇರಲಿಲ್ಲ
ಅಯ್ಯೋ ಕಳೆದು ಹೋಯಿತೇ ಬಾಲ್ಯ...
ಶಾಲೆಯಲ್ಲಿ ಕಳೆಯುತ್ತಿದ್ದ ಅಮೂಲ್ಯ ಕ್ಷಣಗಳಿಲ್ಲ ಕೊಡೆಯಿಂದ ಚೀಲವನ್ನು ಎಳೆದು ಬೀಳಿಸುವ ತುಂಟತನವಿಲ್ಲ
ನೆರಳಿನಂತೆ ಹಿಂಬಾಲಿಸಿ ಪಡೆದುಕೊಳ್ಳುತ್ತಿದ್ದ ಟೀಚರ್ ನ ಪ್ರೀತಿ ಇಲ್ಲ
ಅಯ್ಯೋ ಕಳೆದು ಹೋಯಿತೇ ಬಾಲ್ಯ...
ಮುತ್ತಿನಂತಹ ಕ್ಷಣಗಳು ಕಳೆದು ಹೋಗಿದೆ
ಮತ್ತೆ ಸಿಗಲು ಸಾಧ್ಯವೇ...
ಪ್ರಶ್ನೆಯೇ ತುಸು ಕಷ್ಟ ಉತ್ತರವೇ ಸಿಗುತ್ತಿಲ್ಲ
ಅಯ್ಯೋ ಕಳೆದು ಹೋಗಬಾರದಿತ್ತು ಬಾಲ್ಯ...
ರಚನೆ: ಶೀತಲ್ 10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ಳಾಡು
ಬಂಟ್ವಾಳ ತಾಲೂಕು