ಆತುರಗಾರನಿಗೆ ಬಂದ ಆಪತ್ತು
Tuesday, November 17, 2020
Edit
ಕಥೆ : ನಾಗರಾಜ ಬಿ. ಎಸ್
8 ನೇ ತರಗತಿ
. ಆತುರಗಾರನಿಗೆ ಬಂದ ಆಪತ್ತು
ಒಂದು ಊರಿನಲ್ಲಿ ಚಂದ್ರಶೇಖರ್ ಮತ್ತು ಹೇಮ ದಂಪತಿಗಳಿಗೆ ರಾಜು ಎನ್ನುವ ಮಗನಿದ್ದನು. ರಾಜು ಹತ್ತನೆ ತರಗತಿ ಓದುತ್ತಿದ್ದನು . ಅವನು ಎಲ್ಲಾ ವಿಷಯದಲ್ಲೂ ಆತುರಪಡುತ್ತಿದ್ದನು. ಎಲ್ಲಾ ಕೆಲಸವನ್ನು ವೇಗವಾಗಿ ಮುಗಿಸಬೇಕೆಂದು ಅಂದುಕೊಳ್ಳುತ್ತಿದ್ದನು. ಒಂದು ದಿನ ಅವರ ಮನೆ ಪಕ್ಕದಲ್ಲಿ ಸ್ನೇಹಿತನ ಕುಂಟುಂಬ ಬಾಡಿಗೆ ಮನೆಯಲ್ಲಿ ಬಂದು ನೆಲೆಸುತ್ತಾರೆ. ಅವರಿಗೂ ಕೂಡ ಇವರಂತೆ ಒಬ್ಬ ಮಗನಿರುತ್ತಾನೆ . ಅವನ ಹೆಸರು ಸತೀಶ.
ಅವರಿಬ್ಬರೂ ಒಂದೇ ಶಾಲೆಗೆ ಹೋಗುತ್ತಿದ್ದರು. ಅವರು ಒಳ್ಳೆಯ ಮಿತ್ರರಾದರು. ಒಂದು ದಿನ ಶಾಲೆಯಲ್ಲಿ ಒಂದು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಂದಿತ್ತು . ಹಾಗು ಅದನ್ನು ಪೂರ್ತಿಗೊಳಿಸಿ ಅಂಚೆಯಲ್ಲಿ ಕಳುಹಿಸಬೇಕಾಗಿತ್ತು. ಉತ್ತರ ಕಳುಹಿಸಿ ಕೊಡಲು ಇಪ್ಪತ್ತು ದಿನಗಳ ವಿರಾಮ ಇತ್ತು. ಆದರೆ ಆತುರನಾದ ರಾಜು ಅದನ್ನು ವೇಗವಾಗಿ ತುಂಬಿಸಿ ಹಿಂದೆ ಮುಂದೆ ನೋಡದೆ ಕಳುಹಿಸಿ ಕೊಟ್ಟನು. ಆದರೆ ಸತೀಶನು ತಾಳ್ಮೆಯಿಂದ ತುಂಬಿಸಿಕೊಟ್ಟ.
ಫಲಿತಾಂಶ ಬಂದಾಗ ರಾಜು ಅನುತ್ತೀರ್ಣನಾಗಿದ್ದ. ಹಾಗು ಸತೀಶ ಉತ್ತಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದ.
ಒಂದು ದಿನ ಸತೀಶ ರಾಜುವಿಗೆ ಬುದ್ದಿ ಹೇಳಿದ.ರಾಜು ತನ್ನ ತಪ್ಪನ್ನು ತಿದ್ದಿಕೊಂಡ. ಮುಂದಿನ ಪರೀಕ್ಷೆಯಲ್ಲಿ ತಾಳ್ಮೆಯಿಂದ ಇದ್ದು ಸತೀಶನೊಂದಿಗೆ ರಾಜು ಕೂಡಾ ಪಾಸಾದ.
ಕಥೆ : ನಾಗರಾಜ್ ಬಿ ಎಸ್
8 ನೇ ತರಗತಿ ಸರ್ಕಾರಿ ಪ್ರೌಢಶಾಲೆ
ನಾರ್ಶ ಮೈದಾನ, ಬಂಟ್ಟಾಳ ತಾಲೂಕು.