-->
ದ್ವೀಪ ನಗರಿ - ಕಥೆ

ದ್ವೀಪ ನಗರಿ - ಕಥೆ


ಕಥೆ: ಲಾವಣ್ಯ 9ನೇ ತರಗತಿ
ಸರಕಾರಿ ಪ್ರೌಢ ಶಾಲೆ ಕಾಡುಮಠ 
ಬಂಟ್ಟಾಳ ತಾಲೂಕು.

                     ದ್ವೀಪ ನಗರಿ
ಅಲ್ಲೊಂದು ನದಿ ತನ್ನ ಸೆರಗನ್ನು ನೀಳವಾಗಿ ಹಾಸಿಕೊಂಡಿತ್ತು. ನದಿಯ ಮಗ್ಗುಲಲ್ಲಿ ಎಡದಂಡೆಯ ಮೇಲೊಂದು ಪುಟ್ಟ ಊರು. ಅದು ತನ್ನದೇ ಸೊಬಗ ಸೃಷ್ಟಿಸಿಕೊಂಡು ಧರೆಯೇ ನಾಚುವಂತೆ ಶೃಂಗಾರಗೊಂಡಿತ್ತು. ಹೊರ ಜಗತ್ತಿನ ಸಂಪರ್ಕ ಕಾಣದ ಮುಗ್ದ ಜನಗಳು ತಮ್ಮ ತಮ್ಮ ದಿನಚರಿಯನ್ನು ರವಿಯ ಆಗಮನದ ಜೊತೆ ಆರಂಭಿಸಿದ್ದರು.ಇಳೆಯ ಸೌಂದರ್ಯ ರಾಶಿಯ ಸೆರಗಲ್ಲಿ ಆ ಊರ ಮಕ್ಕಳು ಆಡುತ್ತಿದ್ದರು. 
        ಮೊಗದಲ್ಲಿ ತೇಜೋಪ್ರಭೆ, ತಾಳ್ಮೆ, ವಿಚಾರವಂತ ಮತ್ತು ವಿವೇಕಶಾಲಿ ಹುಡುಗನೊಬ್ಬ ಆ ಊರಲ್ಲಿ ಇದ್ದನು. ಮೊದಲ ನೋಟಕ್ಕೆ ಎಲ್ಲರನ್ನು ಸೆಳೆಯುವಂತಹ ಬಹಳ ಆಕರ್ಷಕ ಚಹರೆ ಆತನದಾಗಿತ್ತು !. ಅವನದು ಬಹಳ ಸಣ್ಣ ಜಗತ್ತು!ಆತನ ಜಗತ್ತಲ್ಲಿ ಅಪ್ಪ ಅಮ್ಮ ಅಕ್ಕ ಮತ್ತು ತಂಗಿ . ಈತ ಎಲ್ಲರಿಗೂ ಬಹಳ ಪ್ರಿಯ. ಈತನ ಹೆಸರೇ ಅಚ್ಚು.
              ಹೀಗೆ ಬದುಕು ಸಾಗ್ತಾ ಇದ್ದಂಗೆ ಬಿರುಗಾಳಿಯ ಹಾಗೆ ಮೆತ್ತಗೆ ಒಬ್ಬ ಅಧಿಕಾರಿ ಬರ್ತಾನೆ. ಅವ ಸರ್ವೇ ಅಧಿಕಾರಿ ಆಗಿರ್ತಾನೆ. ಖುಷ್ಕಿ ಭೂಮಿ, ಆ ಭೂಮಿ ಈ ಭೂಮಿ,  ಗೋಮಾಳ ಆ ಮಾಳ ಅಂತ ಟೇಪು ಗೀಪು ಇಡ್ಕೊಂಡು ಬಹಳ ವಿಚಿತ್ರವಾಗಿ ಇಂಗ್ಲಿಷ್ ನಾಗ ಟಸ್ ಪುಸ್ ಅಂತಿರ್ತಾನಾ.
        ಕಾಲಕ್ರಮೇಣ ಸುಂದರವಾದ ಊರು ಬರಡಾಗುತ್ತಾ ಬರುತ್ತದೆ. ಆಗ ಜನರಿಗೆ " ನಾವು ಆ ಅಧಿಕಾರಿಯನ್ನು ನಂಬಿ ಮೋಸ ಹೋಗಿದ್ದೇವೆ " ಅನ್ನುವುದು ಗೊತ್ತಾಯಿತು. ಹೀಗೆ ಸುಂದರವಾದ ಊರು ಬಂಜರಾಯಿತು.. ನದಿಯ ನಾಟ್ಯ ಮಾಯವಾಯಿತು...ಹಕ್ಕಿಗಳ ಕಲರವ ನಾಶ ವಾಯಿತು.
       ಆದರೆ ಅಧಿಕಾರಿ ಮಾತ್ರ ಯಾವುದರ ಚಿಂತೆಯಿಲ್ಲದೆ ಶ್ರೀಮಂತನಾಗಿ ಜೀವನ ನಡೆಸುತ್ತಿದ್ದ.
ಅಚ್ಚು ಕಂಡ ದ್ವೀಪ ನಗರಿ ಅನ್ನುವ ಊರು ಅದಾಗಲೇ ಬಂಜರ ಭೂಮಿಯಾಗಿತ್ತು. ಕಾಲಕ್ರಮೇಣ ಅವರಿಗೆ ತಿನ್ನುವುದಕ್ಕೂ ಒಂದು ಅನ್ನದ ಅಗಳು ಸಹ ಸಿಗಲಿಲ್ಲ.... 
     ಅಂತಹ ದುಸ್ಥಿತಿಗೆ ಆ ಊರಿನ ಜನರು ತಲುಪುತ್ತಾರೆ.. ಬೇರೆ ದಾರಿಯಿಲ್ಲದೆ ಯಾವುದು ಸಿಗುತ್ತೋ ಅದನ್ನು ತಿನ್ನುತ್ತಾರೆ... ಅವರು ಆ ಅಧಿಕಾರಿಯ ಮಾತು ನಂಬಿದ್ದರ ಫಲವಾಗಿ ಆಮಿಷಕ್ಕಾಗಿ ಒಂದು ಊರನ್ನೇ ಬಲಿ ತೆಗೆದುಕೊಂಡು ಬಿಟ್ಟಿತ್ತು. ಅಧಿಕಾರಿ ಕೇವಲ ನದಿಯ ಹರಿವನ್ನ ಬದಲಿಸಲಿಲ್ಲ. ಆತ ಒಂದು ಊರಿನ ಬದುಕನ್ನೇ , ಅದೆಷ್ಟು ಕಂಗಳ ಕನಸನ್ನು , ಅಚ್ಚುವಿನ ಹಾಗೆ ಇರುವ ಮಕ್ಕಳ ಆತ್ಮಶಕ್ತಿಯನ್ನು ಕೊಂದುಬಿಟ್ಟಿದ್ದನು.

   ನಮ್ಮ ಬದುಕೇ ಬಣ್ಣದ ಪ್ರಪಂಚ. ಒಬ್ಬೊಬ್ಬರದ್ದು ಒಂದೊಂದು ಬಣ್ಣ. ಆ ಬಣ್ಣ ನೋಡಿ ಮೋಸಕ್ಕೊಳಗಾಗುವವರು ಹಲವಾರು ಜನ. ಆ ಬಣ್ಣವನ್ನು ನಂಬದೇ ಬುದ್ಧಿವಂತಿಕೆಯಿಂದ ಬದುಕಬೇಕು.
 
            ಕಥೆ: ಲಾವಣ್ಯ 9ನೇ ತರಗತಿ
   DKZP Govt High School kolnadu kadumata -kolnad District Dakshina Kannada.
 Pin code:574323

Ads on article

Advertise in articles 1

advertising articles 2

Advertise under the article