ಹೆಣ್ಣು ಭ್ರೂಣ ಹತ್ಯೆ - ಲೇಖನ
Sunday, November 15, 2020
Edit
ಲಾವಣ್ಯ 9ನೇ ತರಗತಿ
ಸರಕಾರಿ ಪ್ರೌಢ ಶಾಲೆ , ಕಾಡುಮಠ
ಹೆಣ್ಣು ಭ್ರೂಣ ಹತ್ಯೆ
ಹೆಣ್ಣು ತಾಯಿಯಾಗಿ, ತಂಗಿಯಾಗಿ, ಮಡದಿಯಾಗಿ, ಅಕ್ಕನಾಗಿ, ಒಳ್ಳೆಯ ಸ್ನೇಹಿತೆಯಾಗಿ ತನ್ನ ಕಾರ್ಯನಿರ್ವಹಿಸುತ್ತಾಳೆ.
ಹೆಣ್ಣನ್ನು ತಾಯಿಯ ರೂಪವೆಂದು ಪೂಜಿಸುವ ಈ ನಾಡಲ್ಲಿ ಹೆಣ್ಣು ಭ್ರೂಣ ಹತ್ಯೆಯೇ ??
ಇದು ಮಹಾ ಪಾಪವಲ್ಲವೇ !??
ಜಗತ್ತನ್ನೇ ನೋಡದ ಆ ಪುಟ್ಟ ಕಂದಮ್ಮನನ್ನು ಬಲಿ ಕೊಡುವುದು ಯಾವ ನ್ಯಾಯ ??
ಜಗತ್ತಿನಲ್ಲಿ ಯಾರು ಯಾರನ್ನೂ ಸಾಯಿಸುವ ಹಕ್ಕು ಹೊಂದಿಲ್ಲ , ಆದರೂ ಏನೂ ತಪ್ಪು ಮಾಡದ ಆ ಪುಟ್ಟ ಕಂದಮ್ಮನನ್ನು ಬಲಿಕೊಡುವುದು ಸರಿಯೇ ?? .
....ಹೆರಿಗೆಯಾದ ತಾಯಿ ಕೇಳುವುದು , " ಡಾಕ್ಟರ್ ನನಗೆ ಹೆಣ್ಣುಮಗುವೇ... ಗಂಡುಮಗುವೇ ಎಂದು? ."
" ಹೆಣ್ಣು ಮಗು ಅಂದಕೂಡಲೇ ಸಾಕು, ಬೇಡ ಈ ಮಗುವನ್ನು ಎಲ್ಲಾದ್ರೂ ಬಿಸಾಕಿ ಬನ್ನಿ ಎಂದು ಹೇಳುವ ತಾಯಿಯಂದಿರು ಇನ್ನೂ ಇದ್ದಾರೆಯೇ ?? .
( ಹೆಣ್ಣಾದರೇನು ಗಂಡಾದರೇನು ಮಗು ಮಗುವೇ ತಾನೆ ಎಂದು ಹೇಳುವ ಪ್ರೀತಿಯ ತಾಯಿಯಂದಿರೂ ಇದ್ದಾರೆ).
ಆದರೆ ಹೆಣ್ಣು ಮಗುವೆಂದು ತಾತ್ಸಾರ ಮಾಡುವ ತಾಯಿ, ಅವಳು ಕೂಡ ಒಂದು ಹೆಣ್ಣಲ್ಲವೇ?? .
ಅವಳಿಗೂ ಮರೆತು ಹೋಯಿತೇ ತಾನೂ ಒಂದು ಹೆಣ್ಣು ಎಂದು. ಹೇಳುತ್ತಾರೆ, ತಾಯಿ ತ್ಯಾಗಮಯಿ, ಕರುಣಾಮಯಿ ಎಂದು. ಆದರೆ ಹೆಣ್ಣು ಮಗುವೆಂದು ತಾತ್ಸಾರ ಮಾಡುವ ತಾಯಿಯಂದಿರು ಇನ್ನೂ ಇದ್ದಾರೆಯೇ?? ಅವರಿಗೆ ಹೃದಯವೆನ್ನುವುದೇ ಇಲ್ಲವೇ.....??
ಭ್ರೂಣ ಹತ್ಯೆ ಮಹಾಪಾಪ
ಲಾವಣ್ಯ 9ನೇ ತರಗತಿ
DKZP Govt High School kolnadu kadumata -kolnad District
Dakshina Kannada.
Karnataka
Pin code:574323