
ಶಾಲೆ - ಕವನ
Sunday, November 15, 2020
Edit
ಶಾಲೆ
ವಿದ್ಯೆ-ಬುದ್ಧಿ ಕಲಿಯಲು ನಾವು
ಶಾಲೆಗೆ ಬೇಗನೆ ಹೋಗೋಣ
ಗೆಳೆಯರ ಜೊತೆಯಲಿ ಆಡಿ ನಲಿಯಲು
ಶಾಲೆಯ ಕಡೆಗೆ ಹೊರಡೋಣ.
ಆಟವ ಕಲಿಯುವ ಜೊತೆ ಜೊತೆಯಲಿ
ಆಟಗಳನ್ನೂ ಕಲಿಯೋಣ
ಯೋಗ ಧ್ಯಾನ ಕಲಿಕೆಗಳಿಂದ
ಮನದಲ್ಲಿ ನೆಮ್ಮದಿ ಪಡೆಯೋಣ.
ಗುರುಹಿರಿಯರಿಗೆ ವಿನಯದಿಂದ ಗೌರವ ತೋರಲು
ಗುರುಗಳು ನಮಗೆ ಕಲಿಸುವರು
ಜಾತಿ ಮತ ಭೇದವನು ಕಳೆಯಲು
ಗುರುಗಳು ನಮಗೆ ತಿಳಿಸುವರು
ನೂತನ ವಿಷಯವಾ ತಿಳಿಯುತ ನಾವು
ಜ್ಞಾನಾಮೃತವನು ಸವಿಯೋಣ
ಭಾರತ ದೇಶದ ಹಿರಿಮೆಯ ಸಾರಿದೆ
ವೀರರ ಧೀರರ ಅರಿಯೋಣ
ಮೇಲು-ಕೀಳು ಭೇದವ ಕಳೆದು
ಎಲ್ಲರೂ ಒಂದೇ ಎನ್ನೋಣ
ಭವ್ಯ ಭಾರತದ ರತ್ನಗಳೆನಿಸಿ
ಶಾಲೆಯ ಕೀರ್ತಿಯ ಸಾರೋಣ !
ರಚನೆ: ಧೃತಿ 8 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಡು
ಬಂಟ್ವಾಳ ತಾಲೂಕು