-->
ಪ್ರೀತಿಯ ಕಾಡು - ಕಥೆ

ಪ್ರೀತಿಯ ಕಾಡು - ಕಥೆ


                   ಪ್ರೀತಿಯ ಕಾಡು

      ಒಂದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಸುರೇಶ್ ಎಂಬ ಹುಡುಗ ತನ್ನ ತಂದೆ - ತಾಯಿಯೊಂದಿಗೆ ವಾಸವಾಗಿದ್ದನು. ಅವನು ದಿನಾಲೂ ಸಂಜೆ ಹಳ್ಳಿಯ ಪಕ್ಕದ ಕಾಡಿಗೆ ನಡೆದು ಹೋಗಿ ಬರುತ್ತಿದ್ದನು. ಹೀಗೆ ಅವನು ತುಂಬಾ ಪ್ರಾಣಿ-ಪಕ್ಷಿಗಳ ಜೊತೆಗೆ ತನ್ನ ಸ್ನೇಹವನ್ನು ಬೆಳೆಸಿದನು. ಒಂದು ದಿನ ಸುರೇಶ್ ಶಾಲೆಯಿಂದ ತುಂಬಾ ಬೇಜಾರಾಗಿ ಮನೆಗೆ ಹಿಂದುರುಗಿದ. ತನ್ನ ಮಗನ ಬೇಸರವನ್ನು ನೋಡಿ ಏನಾಯಿತು? ಮಗನೆ ಎಂದು ತಾಯಿ ಕೇಳಿದಳು. ಸುರೇಶ್ ,  "ಅಮ್ಮ ನಮ್ಮ ಕಾಡಿನ  ಮರಗಳನ್ನು ಕಡಿಯತ್ತಾರಂತೆ! ಕಾಡಿನ ಪ್ರಾಣಿ ಪಕ್ಷಿಗಳಿಗೆ ತೊಂದರೆ ಆಗುತ್ತದೆ. ಹಾಗಾಗಿ ನಾನು ಬೇಸರದಲ್ಲಿದಲ್ಲಿದ್ದೇನೆ " ಎಂದನು.ಅದಕ್ಕೆ ತಾಯಿ  " ನೀನು ನಿನ್ನ ಸ್ನೇಹಿತೆ ಪ್ರಿಯಾಳ ಜೊತೆ ಕಾಡಿಗೆ ಹೋಗಿ ನೋಡಿ ಬಾ ಏನು ವಿಷಯ ಎಂದು ಗೊತ್ತಗುವುದು"  ಎಂದಳು. ಸುರೇಶ್ ತನ್ನ ಗೆಳತಿ ಪ್ರಿಯಾಳ ಜೊತೆ ಕಾಡಿಗೆ ಹೋಗಿ , ತನ್ನ ಪ್ರೀತಿಯ ಸ್ಥಳವಾದ ಒಂದು ಬಂಡೆಯ ಮೇಲೆ ಕುಳಿತ. ಆಗ ಒಂದು ಜಿಂಕೆ ಅವನು ಕುಳಿತಿದ್ದ ಜಾಗಕ್ಕೆ ಓಡಿ ಓಡಿ ಬಂದಿತ್ತು. ಇದನ್ನು ನೋಡಿದ ಪ್ರಿಯಾ ಏಕೆ ? ನೀನು ಬೇಸರದಿಂದ ಇದ್ದೀಯಾ ಎಂದು ಕೇಳಿದಳು. ಅದಕ್ಕೆ ಜಿಂಕೆ ಈ ಕಾಡನ್ನು ಕಡಿಯುತ್ತಾರಂತೆ ನಮಗೆಲ್ಲರಿಗೂ ಭಯ ಉಂಟಾಗಿದೆ ಎಂದಿತು. ಹೇಗಾದರೂ ಮಾಡಿ ಕಾಡನ್ನು ಕಡಿಯುವುದನ್ನು ನಿಲ್ಲಿಸಬೇಕು ಮತ್ತು ಪ್ರಾಣಿ- ಪಕ್ಷಿಗಳಿಗೆ ಆಶ್ರಯವನ್ನು ನೀಡಬೇಕು ಎಂದು ಇಬ್ಬರು ನಿಶ್ಚಯಿಸಿ , ಕಾಡನ್ನು ಕಡಿಯಬಾರದು ಅದನ್ನು ಉಳಿಸಿಕೊಳ್ಳಬೇಕೆಂದು ಗ್ರಾಮದ ಅಧ್ಯಕ್ಷರಿಗೆ ಪತ್ರದ ಮೂಲಕ ಮನವಿಯನ್ನು ಮಾಡಿಕೊಳ್ಳುವ ಎಂದು ಇಬ್ಬರೂ ಯೋಚಿಸಿ ಪತ್ರವನ್ನು ಬರೆದರು. ಆ ಪತ್ರವನ್ನು ಓದಿದ ಗ್ರಾಮದ ಅಧ್ಯಕ್ಷರು- ಸದಸ್ಯರು ಮತ್ತು ಹಿರಿಯರು ಮಕ್ಕಳ ಕಾಡಿನ ಬಗ್ಗೆ ಇದ್ದ ಪ್ರೀತಿಯನ್ನು ಕಂಡು ಸಂತೋಷಪಟ್ಟರು. ಗ್ರಾಮದ ಎಲ್ಲರ ಅಭಿಪ್ರಾಯದಂತೆ ಕಾಡನ್ನು ಕಡಿಯಬಾರದು ಎಂದು ನಿರ್ಣಯ ಕೈಗೊಂಡು, ಕಾರ್ಯರೂಪಕ್ಕೆ ತಂದರು. ಇದರಿಂದ ಸುರೇಶನಿಗೆ ತುಂಬಾ ಖುಷಿಯಾಯಿತು.ನಂತರ ಅವರಿಬ್ಬರೂ ಸೇರಿ ಕುಣಿದಾಡಿ ಎಂದಿನಂತೆ ಕಾಡಿನ ಪ್ರಾಣಿ-ಪಕ್ಷಿಗಳ ನಡುವೆಯೇ ಆಟವಾಡುತ್ತಾ ಸಮಯ ಕಳೆದರು.

ನೀತಿ:- ಕಾಡನ್ನು ಎಂದೂ ಕಡಿಯಬಾರದು. ಕಾಡು ಬೆಳೆಸಿ- ನಾಡು ಉಳಿಸಿ.

          ಬರಹ : ಕೀರ್ತನಾ 9ನೇ ತರಗತಿ, 
 ಸರಕಾರಿ ಪ್ರೌಢಶಾಲೆ,ದರೆಗುಡ್ಡೆ. ತಾ //ಮೂಡಬಿದ್ರೆ. ದ.ಕನ್ನಡ

Ads on article

Advertise in articles 1

advertising articles 2

Advertise under the article