-->
ಕೋವಿಡ್ -19 ರ ಜಾಗೃತಿ - ಲೇಖನ

ಕೋವಿಡ್ -19 ರ ಜಾಗೃತಿ - ಲೇಖನ

ಕೃತಸ್ವರ ದೀಪ್ತ ಕೆ.
8 ನೇ ತರಗತಿ
ಸರಕಾರಿ ಪ.ಪೂ.ಕಾ. ಸುಳ್ಯ

           ಕೋವಿಡ್-19ರ ಜಾಗೃತಿ
     ಕೋವಿಡ್-19, ಇಂದು ಜಗತ್ತಿನೆಲ್ಲೆಡೆ ವ್ಯಾಪಿಸಿ ಜನಜೀವನ ಎಚ್ಚೆತ್ತುಕೊಳ್ಳುವಂತೆ ಮಾಡಿದ ರೋಗ. ಹಲವಾರು ಅಧ್ಯಯನಗಳು ತಿಳಿಸಿದಂತೆ, ಈ ರೋಗಕ್ಕೆ ಕಾರಣವಾಗಿರುವ ನೊವೆಲ್ ಕೊರೋನ ವೈರಾಣು, ಮುಖ್ಯವಾಗಿ, ಶ್ವಾಸಕೋಶ ಹಾಗೂ ಗಂಟಲಿಗೆ ಹಾನಿಯನ್ನುಂಟು ಮಾಡುತ್ತದೆ. ಅತಿಯಾಗಿ ಕೆಮ್ಮುವುದು, ವಾಂತಿ, ಉಸಿರಾಟದ ಸಮಸ್ಯೆ, ಕಾಲುಗಳಲ್ಲಿ ಗಾಯ, ಜ್ವರ ಮುಂತಾದ ಲಕ್ಷಣಗಳು ರೋಗ ನಿರೋಧಕ ಶಕ್ತಿಗೆ ಅನುಗುಣವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. 
            ಇದೇ ರೀತಿಯ ವೈರಸ್ ಈ ಹಿಂದೆ ಅಂದರೆ 2002ರ ನವೆಂಬರ 16ರಂದು, ಇದೇ ಚೀನಾದ ಗ್ಯಾಂಗ್ಡೋನ್ ಎಂಬ ಪ್ರದೇಶದ ಮಾಂಸದಂಗಡಿಯೊಂದರಲ್ಲಿ ಕಂಡುಬಂದಿತ್ತು. ಇದನ್ನು ‘ಸಾರ್ಸ್À ಕೋವಿಡ್ 1’ ಎಂಬ ಹೆಸರಿನಿಂದ ಕರೆಯಲಾಗಿದೆ. ನಾವು ಈಗ ಎದುರಿಸುತ್ತಿರುವ ಬಹುಪಾಲು ಸಮಸ್ಯೆಗಳನ್ನು ಸುಮಾರು 29 ದೇಶಗಳು 2004ರಲ್ಲೇ ಪಡೆದು, ನಂತರ ತಣ್ಣಗಾಗಿತ್ತು! ಅದಕ್ಕಿಂತಲೂ ಮೊದಲು, ಇದೇ ಕೋವಿಡ್Àನ ಮೂಲ 40-70 ವರ್ಷಗಳ ಹಿಂದೆಯೇ ಬಾವಲಿಗಳಲ್ಲಿ, ಅದರಲ್ಲೂ ‘ರೆನೋಲೋಪಸ್ ಅಫಿನಸ್’ ಎಂಬ ಪ್ರಭೇದದಲ್ಲಿ ಕಂಡುಬಂದಿತ್ತು. ಅದೇನೇ ಇದ್ದರೂ ಈಗ ನಮ್ಮ ಮುಂದಿರುವ ವೈರಸ್ ‘ಸಾರ್ಸ್ ಕೋವಿಡ್-2’ , ಆಗಿನ ವೈರಸ್‍ನ ಮುಂದುವರೆದ ಇನ್ನೊಂದು ರೂಪವಾಗಿದೆ. ಜಗತ್ತಿನೆಲ್ಲೆಡೆ ವ್ಯಾಪಿಸುತ್ತಾ ಕೊಟ್ಯಾಂತರ ಜನರಿಗೆ  ಜೀವ ಭಯ ಮೂಡಿಸುತ್ತಾ ಮುಖ್ಯವಾಗಿ ಅರ್ಥಿಕ, ಶೈಕಣಿಕ, ಸಾಂಸ್ಕøತಿಕ ಕ್ಷೇತ್ರಗಳಿಗೆ ದೊಡ್ಡ ಹೊಡೆತ ಕೊಡುತ್ತಾ ಬರುತ್ತಿದೆ. ಆದ್ದರಿಂದ ಆದಷ್ಟು ಬೇಗನೆ ಈ ರೋಗವನ್ನು ಕಡಿಮೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅದಕ್ಕಾಗಿ ನಾವೆಲ್ಲರು ಈ ವಿಧಾನಗಳನ್ನು ಪಾಲಿಸಲೇಬೇಕು ಎನ್ನುವ ಸೂಚನೆ ತಜ್ಞರದ್ದಾಗಿದೆ.
       ಮೂಲಭೂತವಾಗಿ ಅನುಸರಿಸಲೇಬೇಕಾದ ಮಾರ್ಗಗಳು: ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ, ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಮಾಡುವುದು, ಆಗಾಗ ಕೈ ಮುಖ ತೊಳೆಯುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಇತ್ಯಾದಿ ಮುಖ್ಯವಾದುದು. ಹಾಗೆಂದು ಇದು ಬಹಳ ಕಷ್ಟಕರ ಕೆಲಸವೇನೂ ಅಲ್ಲ. ಎಲ್ಲರೂ ಸುಲಭದಲ್ಲಿ ಅಳವಡಿಸಿಕೊಳ್ಳಬಹುದುದಾದ ಕೆಲಸ. ಅಭ್ಯಾಸ ಮಾಡಿಕೊಳ್ಳಬೇಕಷ್ಟೆ.
 ಲಸಿಕೆ : ಕಳೆದ ಬಾರಿ ಸಾರ್ಸ್ ಕೋವಿಡ್ 1 ವ್ಯಾಪಿಸುತ್ತಿದ್ದ ಸಂದರ್ಭ ಲಸಿಕೆ ಬರುವ ಮೊದಲೇ ಅದು ಕಡಿಮೆ ಆಗಿತ್ತು. ಕಾರಣ ಈಗಿನ ಕೋವಿಡ್ ವೈರಾಣುವು ಆಗಿನ ವೈರಸ್ಸಿನ ಶೇಖಡಾ 80ರಷ್ಟು ಮಾತ್ರ ವಂಶವಾಹಿ ಸಾಮ್ಯತೆ ಹೊಂದಿತ್ತು. ಇದರರ್ಥ ಆ ವೈರಸ್ ಈ ವೈರಸ್ಸಿನಷ್ಟು ತೀವ್ರತೆ ಹೊಂದಿರಲಿಲ್ಲ. ಹಾಗಾಗಿ ಲಸಿಕೆಯ ಅಗತ್ಯ ಅಷ್ಟಾಗಿ ಇರಲಿಲ್ಲ. ಆದರೆ ಈಗ ಹಾಗಲ್ಲ. ಈ ವೈರಸ್ ಇನ್ನೂ ತೀವ್ರವಾಗಿ ಇರುವ ಕಾರಣ ಲಸಿಕೆ ಅನಿವಾರ್ಯ. ಆದರೆ ಲಸಿಕೆ ತಯಾರಿಸುವುದು ಸುಲಭದ ಕೆಲಸವಲ್ಲ. ಹಲವಾರು ತಿಂಗಳುಗಳ ಕಾಲ ಬೇರೆಬೇರೆ ರೋಗಿಗಳಲ್ಲಿ ಪರೀಕ್ಷಿಸಿ, ಫಲಿತಾಂಶದ ಮೇರೆಗೆ ಮತ್ತೂ ಹಲವರ ಮೇಲೆ ಪ್ರಯೋಗಿಸಬೇಕು. ಇದಕ್ಕೆ ಕನಿಷ್ಟ ಒಂದು ವರ್ಷಗಳಾದರೂ ಬೇಕು. ಆದರೆ ಅದಕ್ಕಿಂತಲೂ ಮೊದಲು ನಮ್ಮ ದೇಹದಲ್ಲಿ ನಾವೇ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವುದು ಸುಲಭ ಸಾಧ್ಯ.
    ತಂತ್ರಜ್ಞಾನಗಳ ಬಳಕೆ: ಹೌದು, ಇತ್ತೀಚೆಗೆ ಮಂಗಳೂರಿನ ವನೋರಾ ರೋಬೋಟಿಕ್ಸ್ ಕಂಪೆನಿಯು ಒಂದು ಹೊಸ ರೋಬೋಟನ್ನು ಸಿದ್ಧ ಪಡಿಸಿದ್ದು, ಅದು ಹೊರ ಸೂಸುವ ನೇರಳಾತೀತ ಕಿರಣವು (ಯುವಿಸಿ) ವೈರಾಣು ಆಕ್ರಮಿಸಿರುವ ಜೀವಕೋಶವನ್ನು ಒಡೆದು ತೆಗೆಯುತ್ತದೆ. ಈ ಪ್ರಯೋಗ ಮೊದಲ ಬಾರಿಗೆ ನೆರೆಯ ಕಾಸರಗೋಡಿನಲ್ಲಿ ನಡೆದಿದ್ದು ಹಲವಾರು ರೋಗಿಗಳನ್ನು ಗುಣಪಡಿಸಲಾಗಿದೆ. ಆದರೆ ಈ ಪ್ರಯೋಗಕ್ಕೆ ತಗಲುವ ವೆಚ್ಚ ಮಾತ್ರ ಹೆಚ್ಚಿನದ್ದಾಗಿದೆ.
ಕ್ರಿಸ್ಪರ್ ಕಾಸ್-9: ಈ ಜೀನ್ ಎಡಿಟಿಂಗ್ ತಂತ್ರಜ್ಞಾನವನ್ನು ಕೊರೋನಾದ ಆರ್ ಎನ್‍ ಎ ಅನ್ನು ಕತ್ತರಿಸಲು ಇತ್ತೀಚೆಗೆ ಬಳಸಲಾಗಿದೆ. ಈ ರೀತಿ ಕತ್ತರಿಸುವುದರಿಂದ ಕೊರೋನಾ ಆರ್ ಎನ್ ಎ ಯನ್ನು ನಾಶಪಡಿಸಲಾಗುತ್ತದೆ. ಇದು ಇನ್ನೂ ಪ್ರಯೋಗ ರೂಪದಲ್ಲೇ ಇದೆ.
     ಒಟ್ಟಿನಲ್ಲಿ ಕೊರೋನಾ ಅನೇಕ ಹೊಸ ಸಂಶೋಧನೆಗಳಿಗೆ ದಾರಿ ಮಾಡಿಕೊಟ್ಟಿದೆ ಎನ್ನುವುದು ಸತ್ಯ. ಜೊತೆಗೆ ನಮ್ಮ ವೈದ್ಯಕೀಯ ಜಗತ್ತಿಗೆ ಸವಾಲಾಗಿರುವುದೂ ಹೌದು. ಆದರೆ ನಾವೆಲ್ಲರೂ ತಿಳದುಕೊಳ್ಳಬೇಕಾದ ಇನ್ನೊಂದು ಸತ್ಯವಿದೆ. ಅಂದರೆ ಪರಿಸರದ ಮೇಲೆ ಮನುಷ್ಯ ಮಾಡುವ ಅತಿಕ್ರಮಣಗಳಿಂದಾಗಿ ಇಂತಹಾ ಸಮಸ್ಯೆಗಳು ಹೆಚ್ಚು ಬಾಧಿಸುತ್ತವೆ. ಹಾಗಾಗಿ ಪರಿಸರದ ಸಮತೋಲನ ಎಲ್ಲಾ ಕಾರಣಗಳಿಗೂ ಅಗತ್ಯ. ಹಾಗೆಂದು ಈ ಸಮಸ್ಯೆ ಬಂದಾಗ ಅದನ್ನು ಮತ್ತು ಅವರನ್ನು ತಾತ್ಸಾರದಿಂದ ಕಾಣದೇ ಎಚ್ಚರದಿಂದಿರುವುದು ಬಹಳ ಅಗತ್ಯ. ಹಾಗಾದರೆ ಮಾತ್ರ ಇದಕ್ಕೆ ಬಹುಬೇಗ ಪರಿಹಾರ ದೊರಕಬಹುದು. 
            ಕೃತಸ್ವರ ದೀಪ್ತ . ಕೆ.
             8ನೇ ತರಗತಿ
      ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ

Ads on article

Advertise in articles 1

advertising articles 2

Advertise under the article