ಮಕ್ಕಳ ಕವನಗಳು : ಸಂಚಿಕೆ - 67, ಕವನ ರಚನೆ : ವಿದ್ಯಾ, 9ನೇ ತರಗತಿ
Monday, October 19, 2026
Edit
ಮಕ್ಕಳ ಕವನಗಳು : ಸಂಚಿಕೆ - 67
ಕವನ ರಚನೆ : ವಿದ್ಯಾ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮಣ್ಣು ಕೊಡುವುದು ಹಣ್ಣು
ಭೂಮಿತಾಯಿ ಒಬ್ಬಳು ಹೆಣ್ಣು
ಅವಳೇ ನಮ್ಮ ಕಣ್ಣು
ಬೆಳಸಬೇಕು ಹಸಿರು
ಅದುವೇ ನಮ್ಮ ಉಸಿರು
ಹಸಿರು ಬಿತ್ತ ಬೇಕು ಭೂಮಿಗೆ
ಒಳ್ಳೆಯದಾಗುವುದೆಮ್ಮ ನಾಡಿಗೆ
ಕಡಿಯಬಾರದು ಕಾಡುಗಳು
ಕಾಡುಗಳಳಿದರೆ ವಿಚಲಿತವಾಗುವುದು ಪ್ರಾಣಿಗಳು
ನಾವು ಬೆಳೆಸಿದರೆ ಮರ
ಗಾಳಿಯಾಗುವುದು ಅಮರ
ಬೆಳೆಸಬೇಕು ಗಿಡಗಳ ಸಾಲು
ಬಿಡಬೇಕು ದೊಡ್ಡಮಾಲು
ಮಳೆಯ ನೀರನ್ನು ಹೀರಿಕೊಳ್ಳುವುದು ಬೇರು
ಅಂತರ್ಜಾಲದಿಂದ ನಮಗೆ ಸಿಗುವುದು ನೀರು
ಮರವಿದ್ದರೆ ಬರುವುದು ಮಳೆ
ಮಳೆ ಬಂದರೆ ತಂಪಾಗುವುದು ಇದೆ
ಹಾಗಾಗಿ ಗಿಡ ಮರ ಬೆಳೆಸಿ
ಎಲ್ಲಾ ಜೀವರಾಶಿ ಉಳಿಸಿ.
................................................... ವಿದ್ಯಾ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************
ಎಳ್ಳು ಬೆಲ್ಲವ ತಿನ್ನುವ ಹಬ್ಬ ಸಂಕ್ರಾಂತಿ
ಎಲ್ಲರ ಮನದಲ್ಲಿ ಎದ್ದು ಕಾಣುತ್ತದೆ ಕಾಂತಿ
ಶಿವರಾತ್ರಿಯಂದು ನೆನಪು ಮಾಡುವರು ಶಿವನನ್ನು
ಶಿವನು ಆಶೀರ್ವದಿಸುವನು ಜನರನ್ನು
ಬೇವು ಬೆಲ್ಲವ ತಿನ್ನುವ ಹಬ್ಬ ಯುಗಾದಿ
ಬೇವು ಬೆಲ್ಲ ತಿಂದು ಒಳ್ಳೆ ಮಾತನಾಡಿ
ಎನ್ನುವರು ಮನದಿ
ನಂತರ ಬರುವ ಹಬ್ಬವೇ ಚೌತಿ
ಅಂದಿನ ಆರಾಧಿತ ದೇವರೇ ಮಹಾಗಣಪತಿ
ಆಶ್ವಿಜ ಮಾಸದಲ್ಲಿ ಬರುವುದು ನವರಾತ್ರಿ
ಹತ್ತನೆಯ ದಿನ ಹೇಳುವರು ಸಿದ್ಧಿಧಾತ್ರಿ
ಬೆಳಕಿನ ಹಬ್ಬ ದೀಪಾವಳಿ
ಅಂದು ದೀಪಗಳ ಆವಳಿ.
...................................................... ವಿದ್ಯಾ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************
ಯೋಚನೆ ಮಾಡಲು ಪರಿಸರ
ನದಿಯು ಹರಿಯುವುದು ಸರಸರ
ಪರಿಸರದ ಇನ್ನೊಂದು ಹೆಸರು ಪ್ರಕೃತಿ
ಪ್ರಕೃತಿಯಲ್ಲಿ ಕೆಲವೊಮ್ಮೆ ಆಗುವುದು ವಿಕೃತಿ
ನಾವು ಬೆಳೆಸಿದರೆ ಕಾಡು
ಉಳಿಯುವುದು ನಮ್ಮ ನಾಡು
ಸಸ್ಯಗಳಿಗೆ ಹಾಕಿದರೆ ಜಲ
ತಂಪಾಗುವುದು ನೆಲ
ವಾಯು ಮಾಲಿನ್ಯ ಮಾಡಿದರೆ ಧೂಳಿಯಿಂದ
ಸಾಯುವುದು ಜೀವಿಗಳು ಮಾಲಿನ್ಯ ಗಾಳಿಯಿಂದ
ಚಿಗುರಿಸಿದರೆ ಹಸಿರು
ಉಳಿಯುವುದು ನಮ್ಮ ಉಸಿರು.
................................................... ವಿದ್ಯಾ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************
ಹೇಳಬೇಕು ಎಂದಿಗೂ ಸತ್ಯ
ಸತ್ಯ ಹೇಳಿದರೆ ಗೆಲ್ಲುವೆವು ನಿತ್ಯ
ಇರಬೇಕು ಎಲ್ಲಾ ವಿಷಯದಲ್ಲೂ
ಪ್ರಾಮಾಣಿಕವಾಗಿ
ನಂತರ ಅದೇ ಕಾಣುವುದು
ದೊಡ್ಡ ಸಾಧನೆಯಾಗಿ
ಸುಮ್ಮನೆ ಹೇಳಬಾರದು ಸುಳ್ಳು
ಸುಳ್ಳೇ ಜೀವನದ ದೊಡ್ಡ ಮುಳ್ಳು
ಆಗುವುದು ಕೆಲವೊಮ್ಮೆ ಜೀವನದಲ್ಲಿ ಸೋಲು
ಸೋಲೇ ಮುಂದೆ ಬರುವ ಗೆಲುವಿನ ಮೆಟ್ಟಿಲು
ಅವಲಂಬಿತವಾಗಬಾರದು ಹಣವ
ಜೀವಿಸಬೇಕು ಪ್ರತಿ ಕ್ಷಣವ
ಹೀಗಿದ್ದರೆ ಜೀವನ ಪಾವನ
ಇದುವೇ ನನ್ನ ಚಿಕ್ಕ ಕವನ
...................................................... ವಿದ್ಯಾ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************
ಬದುಕಿನ ಮುಖ್ಯ ವಿಷಯ ಶಿಕ್ಷಣ
ಶಿಕ್ಷಣ ವಿದ್ದರೆ ಮಾತ್ರ ಬದುಕಲಾಗುವುದು
ಪ್ರತಿ ಕ್ಷಣ
ಜ್ಞಾನದಿಂದ ಮಾಡಬಹುದ ನಮ್ಮ ರಕ್ಷೆ
ಕಲಿಕೆ ಇಲ್ಲದೆ ತಪ್ಪು ಮಾಡಿದರೆ ಆಗುವುದು ಶಿಕ್ಷೆ
ಓದುವುದೇ ವಿದ್ಯಾರ್ಥಿಯ ಲಕ್ಷಣ
ಮುಂದೆ ಮನೆ ನೋಡಿಕೊಳ್ಳಲು
ಗಳಿಸಬಹುದು ಹಣ
ಶಿಕ್ಷಣದಿಂದ ಆಗುವುದು ಬುದ್ಧಿಯ ಪೋಷಣೆ
ಒಂದು ದಿನ ಆಗುವುದು ನಿಮ್ಮ
ಸಾಧನೆಯ ಘೋಷಣೆ
ಎಂದಿಗೂ ಮಾಡಬೇಡಿ ಕೆಲಸದ ಬಗ್ಗೆ ಆಲಸ್ಯ
ಆಲಸ್ಯ ಮಾಡದಿದ್ದರೆ ನಿಮ್ಮ ಬಗ್ಗೆ ಆಗದು ಹಾಸ್ಯ
ಯಾವಾಗಲೂ ಇರಬೇಕು ಓದುವ ಹಠ
ಇದು ಶಿಕ್ಷಣದ ಪಾಠ
..................................................... ವಿದ್ಯಾ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************
ಕೊಟ್ಟಳು ನಮಗೆ ಜನನ
ಮಾಡಬೇಕು ಅವಳಿಗೆ ನಮನ
ಕಣ್ಣಿಗೆ ಕಾಣುವ ದೇವರು ತಾಯಿ
ಜೀವನದಲ್ಲಿ ಅವಳೇ ಅದ್ಬುತ ಮಾಯೆ
ಬೆಳೆಸುವಳು ನಮ್ಮಲ್ಲಿ ಮಮಕಾರ
ಹೇಳುವಳು ಬೇರೆಯವರಿಗೆ
ಮಾಡಬೇಕು ಉಪಕಾರ
ಮುದ್ದು ಮಾಡುವಾಗ ಕೊಡುವಳು ಮುತ್ತು
ಪೋಷಿಸುವಳು ಕೊಟ್ಟು ಕೈತುತ್ತು
ಬುದ್ಧಿ ಹೇಳುವಳು ನಮಗೆ ಹೊಡೆದು ಬಡಿದು
ಅಮ್ಮನ ಪ್ರೀತಿ ಯಾವಾಗಲೂ ಅಮರವಾದದ್ದು
ಅಮ್ಮನಿಗೆ ನೀಡಿ ಗೌರವ ಪ್ರೀತಿ
ತಾಯಿಯ ಬಗೆ ಈ ರೀತಿ.
....................................................... ವಿದ್ಯಾ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************
ತಂದೆ ಪ್ರೀತಿಯಲ್ಲಿ ಸಹಕಾರ
ನಿರ್ಧಾರ ಮಾಡುವಾಗ ಒಳ್ಳೆಯ ಸಲಹೆಗಾರ
ಕುಟುಂಬಕ್ಕೆ ನೀಡುವರು ಪ್ರೀತಿ
ಹೇಳುವರು ಅದ್ಭುತ ನೀತಿ
ಮನೆಗಾಗಿ ಮಾಡುವರು ತ್ಯಾಗ
ನೀಡುವನು ಜೀವನ ದರ್ಶಕ ಮಾರ್ಗ
ಕಥೆಯ ಮೂಲಕ ಹೇಳುವರು ಪುರಾಣ
ಪೂಜಿಸಬೇಕು ಅಪ್ಪನ ಚರಣ
ಬಿಡಿಸುವರು ಒಳ್ಳೆಯ ಚಿತ್ರ
ಇವರೇ ನನ್ನ ಮೊದಲನೆಯ ಮಿತ್ರ
ಜನಕನ ಪ್ರೀತಿಗೆ ಹೋಲಿಸಲಾಗದು ಹಣವ
ಎಂದೂ ತೀರಿಸಲಾಗದು ತಂದೆಯ ಋಣವ.
................................................... ವಿದ್ಯಾ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************
ಕಣ್ಣಿಗೆ ಕಾಣುವ ಎರಡನೆಯ ದೇವರು ಗುರು
ಅಕ್ಷರ ಕಲಿಯುವುದರಿಂದ ಬದುಕು ಶುರು
ಗುರುಗಳು ನೀಡುವರು ಜ್ಞಾನ
ಅರಿವು ಮೂಡಿಸಿ ಅಳಿಸುವರು ಅಜ್ಞಾನ
ಶಿಕ್ಷಕರು ಮಾಡುವುದಿಲ್ಲ ಭೇದಭಾವ
ಹೇಳುವರು ನೋಯಿಸಬಾರದು ಯಾವುದೇ ಜೀವ
ಗುರುಗಳು ದೇವರ ಅದ್ಭುತ ಸೃಷ್ಟಿ
ಅಜ್ಞಾನ ಕತ್ತಲೆಗೆ ಜ್ಞಾನದ ದೃಷ್ಟಿ
ಕಲಿಸುವರು ಒಳ್ಳೆಯ ಬುದ್ದಿ
ಕಾಣುವುದು ಮಕ್ಕಳಲ್ಲಿ ಅಭಿವೃದ್ಧಿ
ಶಿಕ್ಷಕರಿಗೆ ಮಾಡಿ ವಂದನೆ
ಜಗತ್ತು ಕೊಡುವುದು ಒಳ್ಳೆಯ ಸ್ಪಂದನೆ.
9ನೇ ತರಗತಿ
ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************