-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 231

ಸ್ಫೂರ್ತಿಯ ಮಾತುಗಳು : ಸಂಚಿಕೆ - 231

ಸ್ಫೂರ್ತಿಯ ಮಾತುಗಳು : ಸಂಚಿಕೆ - 231
ಲೇಖಕರು : ರಮೇಶ  ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
                    
     

ಸನಾತನ ಸಾಹಿತ್ಯಗಳಲ್ಲಿ ವೇದಗಳಿಗೆ ಅಗ್ರಸ್ಥಾನ. ವೇದಗಳಲ್ಲಿ ನಾಲ್ಕು ವಿಧಗಳಿವೆ.
▪️ಋಗ್ವೇದ
▪️ಸಾಮವೇದ
▪️ಯಜುರ್ವೇದ
▪️ಅಥರ್ವವೇದ.
ಋಗ್ವೇದವು ಅತ್ಯಂತ ಪುರಾತನ ರೂಪ. ಸಾಮವೇದವು ಗಾಯನದ ಸ್ವರೂಪ ಪಡೆದಿರುವುದು. ಭಗವಂತನ ಆರಾಧನೆ ಪ್ರಾರ್ಥನೆ ಯಜುರ್ವೇದದಲ್ಲಿದೆ. ಇಂದ್ರಜಾಲ ಅಥವಾ ಮೋಡಿಗಳ ಬಗ್ಗೆ ವಿವರಿಸುವ ಸಾಮವೇದ ನಾಲ್ಕನೆಯ ಪ್ರಕಾರದ ವೇದ.

ವೇದಗಳಲ್ಲಿ ಮತ್ತೆ ವಿಭಾಗಗಳನ್ನು ಹೇಳುವುದಾದರೆ ವೇದಾಂಗಗಳು ಮತ್ತು ಉಪವೇದಗಳಿವೆ. ವೇದಾಂಗದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಬಗ್ಗೆ ವಿವರಿಸುವ ಸಾಹಿತ್ಯವನ್ನು ಕಲ್ಪಗಳು ಎನ್ನುವರು. ವೇದಾಂಗಗಳು ಆರು “ವೇದದ ಅಂಗಗಳು” ಆಗಿದ್ದು, ಉಪವೇದಗಳು ನಾಲ್ಕು “ವೇದದ ಉಪಯೋಗಶಾಸ್ತ್ರಗಳು” ಆಗಿವೆ. ವೇದಾಂಗಗಳು ವೇದಮಂತ್ರಗಳ ಶುದ್ಧ ಪಠಣ, ಅರ್ಥ, ವ್ಯಾಕರಣ, ಛಂದಸ್ಸು, ಯಜ್ಞವಿಧಿ ಮತ್ತು ಕಾಲಗಣನೆಗೆ ಸಂಬಂಧಿಸಿದವು; ಉಪವೇದಗಳು ಆಯುರ್ವೇದ, ಧನುರ್ವೇದ, ಗಾಂಧರ್ವವೇದ ಮತ್ತು ಅರ್ಥಶಾಸ್ತ್ರ — ಮಾನವ ಜೀವನದ ಪ್ರಾಯೋಗಿಕ ಕ್ಷೇತ್ರಗಳಿಗೆ ಸಂಬಂಧಿಸಿವೆ.

ಕಲ್ಪಗಳು ವೇದಾಂಗಗಳಲ್ಲಿ ಒಂದು ಪ್ರಮುಖ ವಿಭಾಗ. ಇವು ಯಜ್ಞ, ಹವನ, ಧಾರ್ಮಿಕ ಆಚರಣೆ, ಗೃಹಸ್ಥಾಶ್ರಮದ ನಿಯಮಗಳು ಮತ್ತು ಧರ್ಮಸೂತ್ರಗಳನ್ನು ವಿವರಿಸುವ ಶಾಸ್ತ್ರಗಳು. "ಕಲ್ಪ" ಎಂದರೆ ಸಮರ್ಪಕ ವಿಧಾನ ಅಥವಾ ನಿಯಮಬದ್ಧ ಆಚರಣೆ.

◾ಕಲ್ಪಸೂತ್ರಗಳನ್ನು ನಾಲ್ಕು ಮುಖ್ಯ ವಿಭಾಗಗಳಾಗಿ ವಿಂಗಡಿಸಲಾಗಿದೆ:
▪️ಶ್ರೌತ ಸೂತ್ರಗಳು : ವೇದಮೂಲಕ ಯಜ್ಞಗಳು, ಅಗ್ನಿಹೋತ್ರ, ಸೋಮಯಾಗ, ಅಶ್ವಮೇಧ ಮುಂತಾದ ಮಹಾಯಜ್ಞಗಳ ವಿಧಾನ.
▪️ ಗೃಹ್ಯ ಸೂತ್ರಗಳು : ಗೃಹಸ್ಥಾಶ್ರಮದ ಆಚರಣೆಗಳು: ವಿವಾಹ, ಉಪನಯನ, ಶ್ರಾದ್ಧ, ಸಂಸ್ಕಾರಗಳು.
▪️ಧರ್ಮ ಸೂತ್ರಗಳು : ಧರ್ಮ, ನೀತಿ, ಸಾಮಾಜಿಕ ನಿಯಮಗಳು, ಆಚಾರ-ವಿಚಾರಗಳು.
▪️ ಶುಲ್ಬ ಸೂತ್ರಗಳು : ಯಜ್ಞವೇದಿಗಳ ನಿರ್ಮಾಣ, ಜ್ಯಾಮಿತಿ, ಗಣಿತಶಾಸ್ತ್ರ, ಕಲ್ಪಗಳ ಮಹತ್ವ
▪️ಯಜ್ಞವಿಧಿ: ಶ್ರೌತ ಸೂತ್ರಗಳು ಯಜ್ಞವನ್ನು ಸರಿಯಾಗಿ ನಡೆಸಲು ಮಾರ್ಗದರ್ಶನ ನೀಡುತ್ತವೆ.
▪️ಸಂಸ್ಕಾರಗಳು: ಗೃಹ್ಯ ಸೂತ್ರಗಳು ಮಾನವನ ಜೀವನದ 16 ಸಂಸ್ಕಾರಗಳನ್ನು ವಿವರಿಸುತ್ತವೆ.
▪️ಸಾಮಾಜಿಕ ಧರ್ಮ: ಧರ್ಮಸೂತ್ರಗಳು ಸಮಾಜದ ನಿಯಮ, ನೀತಿ, ಕರ್ತವ್ಯಗಳನ್ನು ನಿರ್ಧರಿಸುತ್ತವೆ.
▪️ಗಣಿತಶಾಸ್ತ್ರ: ಶುಲ್ಬ ಸೂತ್ರಗಳಲ್ಲಿ ಪೈಥಾಗೋರಸ್ ತತ್ವದಂತೆಯೇ ಜ್ಯಾಮಿತಿಯ ನಿಯಮಗಳು ದೊರೆಯುತ್ತವೆ.
▪️ಕಾಲವನ್ನೂ ಕಲ್ಪ ಎನ್ನುವರು. ಬ್ರಹ್ಮನ ಒಂದು ದಿನ ಪ್ರಮಾಣಕ್ಕೆ ಕಲ್ಪವೆಂದು ಹೆಸರು. ಇದು ಕಾಲಚಕ್ರ. ಮನುಷ್ಯಮಾನದಿಂದ ಒಂದು ತಿಂಗಳಾಗುವ ಕಾಲ ಪಿತೃದೇವತೆಗಳ ಮಾನದಲ್ಲಿ ಒಂದು ದಿನ. ಮನುಷ್ಯಮಾನದ ೧೦೦೦ ಚತುರ್ಯುಗಗಳು (ಮಹಾಯುಗ) ಅಥವಾ ದೇವಮಾನದ ೧೦೦೦ ಯುಗಗಳು ಚತುರ್ಮುಖ ಬ್ರಹ್ಮನಿಗೆ ಒಂದು ಹಗಲು. ಚೈತ್ರ ಶುಕ್ಲ ಪಾಡ್ಯ ಭಾನುವಾರ ಪ್ರಥಮ ಕಲ್ಪ ಪ್ರಾರಂಭವಾದ ದಿನ. ಅಂದಿನಿಂದ ಬ್ರಹ್ಮ ಸೃಷ್ಟಿಗೆ ಪ್ರಾರಂಭಿಸಿದ. ಒಂದೊಂದು ಕಾಲದಲ್ಲಿ ಬೇರೆ ಬೇರೆ ಮನ್ವಂತರಗಳಿವೆ.

೮,೬೪,೦೦,೦೦,೦೦೦ ಸೌರವರ್ಷಗಳು ಕಳೆದರೆ ಬ್ರಹ್ಮನ ಒಂದು ದಿನವಾಗುತ್ತದೆ. ಬ್ರಹ್ಮನ ಒಂದೊಂದು ದಿನಕ್ಕೆ ಒಂದೊಂದು ಹೆಸರಿದೆ. ಅವುಗಳೆಂದರೆ ಶ್ವೇತವರಾಹ,  ನೀಲಲೋಹಿತ,  ವಾಸುದೇವ, ರಥಂತರ,  ರೌರವ,  ಪ್ರಾಣ,  ಬೃಹತ್, ಕಂದರ್ಪ, ಸದ್ಯ, ಈಶಾನ, ವ್ಯಾನ, ಸಾರಸ್ವತ, ಉದಾನ, ಗಾರುಡ, ಕೌರ್ಮ, ನಾರಸಿಂಹ, ಸಮಾನ, ಆಗ್ನೇಯ, ಸೋಮ, ಮಾನವ, ತತ್ಪುರುಷ, ವೈಕುಂಠ, ಲಕ್ಷ್ಮಿ, ಸಾವಿತ್ರಿ , ಘೋರ, ವಾರಾಹ, ವೈರಾಜ , ಗೌರಿ , ಮಾಹೇಶ್ವರ ಮತ್ತು ಪಿತೃ.

ಇವುಗಳಲ್ಲಿ ಮೊದಲ ಹದಿನೈದು ಕಲ್ಪಗಳಿಗೆ ಶುಕ್ಲ ಪಕ್ಷವೆಂದು, ಉಳಿದ ಹದಿನೈದು ಕಲ್ಪಗಳಿಗೆ ಕೃಷ್ಣಪಕ್ಷವೆಂದು ಹೆಸರು. ಈ ಒಟ್ಟು ಮೂವತ್ತು ಕಲ್ಪಗಳು ಕಳೆದರೆ ಬ್ರಹ್ಮನಿಗೆ ಒಂದು ತಿಂಗಳು. ಈ ವಿಧವಾದ ಹನ್ನೆರಡು ತಿಂಗಳು ಕಳೆದರೆ ಒಂದು ವರ್ಷ. ಬ್ರಹ್ಮನಿಗೆ ಈ ಪ್ರಮಾಣದ ನೂರು ವರ್ಷಗಳು ಆಯಸ್ಸು. ಪ್ರಕೃತ ನಡೆಯುತ್ತಿರುವುದು ಬ್ರಹ್ಮನ ಐವತ್ತೊಂದನೆಯ ವರ್ಷದ ದ್ವಿತೀಯ ಪರಾರ್ಧದ ಪ್ರಾರಂಭದಲ್ಲಿ ಮೊದಲನೆಯದಾದ ಶ್ವೇತವರಾಹ ಕಲ್ಪ

ನಾಲ್ಕು ಯುಗಗಳನ್ನು ಒಟ್ಟಾಗಿ ಮಹಾಯುಗ ಎನ್ನುವರು. ಎಲ್ಲ ಕಾಲಮಾನಗಳ ಹೆಸರು ವಾರದ ಹೆಸರಿನಂತೆ ನಿರ್ಧಿಷ್ಠ ಅವಧಿಗೆ ಸಂಬಂಧಿಸಿದೆ. ಇವುಗಳು ಪುನರಾವರ್ತನೆಯಾಗುತ್ತಾ ಬಳಕೆಯಾಗುತ್ತವೆ.
ಯುಗಗಳು
1. ಸತ್ಯಯುಗ = 17ಲಕ್ಷ 28ಸಾವಿರ ವರ್ಷಗಳು
2. ತ್ರೇತಾಯುಗ = 12ಲಕ್ಷ  96  ಸಾವಿರ ವರ್ಷಗಳು
3. ದ್ವಾಪರಯುಗ = ಎಂಟು ಲಕ್ಷ 64 ಸಾವಿರ ವರ್ಷ
4. ಕಲಿಯುಗ = 4 ಲಕ್ಷ 32 ಸಾವಿರ ವರ್ಷಗಳು

▪️ಮಹಾಯುಗ (ಚತುರ್ಯುಗ) = ನಾಲ್ಕು ಯುಗಗಳು ಸೇರಿ 43 ಲಕ್ಷ 20 ಸಾವಿರ ವರ್ಷಗಳು

▪️ಮನ್ವಂತರ = 71 ಮಹಾಯುಗಗಳು
ಕಲ್ಪ

▪️ಕಲ್ಪ = 14 ಮನ್ವಂತರ ಅಥವಾ 1000 ಮಹಾಯುಗಗಳು - 4 ಅಬ್ದ 32ಕೋಟಿ ವರ್ಷಗಳು (4320000000)

▪️ಬ್ರಹ್ಮದೇವರ ಜೀವನ : 100 ವರ್ಷಗಳು

▪️ಬ್ರಹ್ಮದೇವರ ಜೀವನದ 50 ವರ್ಷಗಳು ಮಹಾ ವಿಷ್ಣುವಿನ ಒಂದು ಕ್ಷಣ

▪️ವಿಷ್ಣುವಿನ 12 ಲಕ್ಷ ಕ್ಷಣಗಳು - ಮಹೇಶ್ವರನ ಅರ್ಧ ಸಮಯ

ಇದಾದ ನಂತರ ನೂತನ ಬ್ರಹ್ಮ ವಿಷ್ಣು ಮತ್ತು ಮಹೇಶ್ವರರ ನಿರ್ಮಾಣವಾಗುತ್ತದೆ
ಈಗ ಬ್ರಹ್ಮದೇವರ ಐವತ್ತು ವರ್ಷಗಳು ಪೂರ್ಣವಾಗಿವೆ ಅಂದರೆ ಒಂದು ಪರಾರ್ಧ ಮುಕ್ತಾಯಗೊಂಡಿದೆ (15,55,20,00,00,00,000 ವರ್ಷ)

ಈಗ ಐವತ್ತೊಂದನೇ ವರ್ಷದ ಮೊದಲನೇ ದಿನ ಅಂದರೆ ಶ್ವೇತವರಾಹ ಕಲ್ಪ ಪ್ರಾರಂಭವಾಗಿದೆ. ಈ ಶ್ವೇತವರಾಹ ಕಲ್ಪದ ಆರು ಮನ್ವಂತರಗಳು ಕಳೆದು, ಏಳನೇ ಮನ್ವಂತರ (ವೈವಸ್ವತ) ನಡೆಯುತ್ತಿದೆ.
ವೈವಸ್ವತ ಮನ್ವಂತರದಲ್ಲಿ ಎಪ್ಪತ್ತೊಂದು ಮಹಾಯುಗಗಳು ಇವೆ. ಇದರಲ್ಲಿ ಇಪ್ಪತ್ತೇಳು ಮಹಾಯುಗಗಳು ಪೂರ್ಣಗೊಂಡಿದ್ದು, ಇಪ್ಪತ್ತೆಂಟನೇ  ಮಹಾಯುಗ ನಡೆಯುತ್ತಿದೆ. ಈ ಮಹಾಯುಗದ ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಪೂರ್ಣಗೊಂಡಿದ್ದು, ಕಲಿಯುಗ ನಡೆಯುತ್ತಿದೆ.

ಈ. ಕಲಿಯುಗದ ಮೊದಲನೇ ಚರಣ (ಪ್ರಥಮ ಪಾದ) ನಡೆಯುತ್ತಿದ್ದು, ಐದು ಸಾವಿರದ ನೂರ ಹದಿನೈದು ವರ್ಷಗಳು ಪೂರ್ಣಗೊಂಡಿವೆ. 5116ನೆ ವರ್ಷ ಈ ಯುಗಾದಿಯಂದು ಸೂರ್ಯೋದಯದೊಂದಿಗೆ ಪ್ರಾರಂಭವಾಗಿದೆ. ಈ ಯುಗಾದಿಯಂದು ಪ್ರಾರಂಭವಾಗಲಿರುವ ವರ್ಷವನ್ನು ನಿಖರವಾಗಿ ಹೇಳುವುದಾದರೆ ಮೊದಲನೇ ಪರಾರ್ಧ + (6 (ಮನ್ವಂತರ) x 71 x ಮಹಾಯುಗದ ಸಮಯ) + (28 (ಮಹಾಯುಗಗಳು) x 43,20,000) + 3 ಯುಗಗಳು (ಸತ್ಯಯುಗ, ತ್ರೇತಾಯುಗ, ದ್ವಾಪರಯುಗ) + 5127

ಈಗಿನ ಕಾಲ ಮಾನ ಕಲಿಯುಗಾಬ್ದ 5128  ಶಾಲಿವಾಹನ ಶಕ 1949, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮಋತು, ನಿಜ ಜ್ಯೇಷ್ಠ-ಆಷಾಢ ಮಾಸ, ಕೃಷ್ಣಪಕ್ಷ, …. ತಿಥಿ, …….. ಮಹಾನಕ್ಷತ್ರ, ……. ನಿತ್ಯ ನಕ್ಷತ್ರ, ಶುಕ್ಲ ನಾಮ ಯೋಗ, ಭದ್ರೆ ಕರಣ, ಸೋಮವಾರ ದಿನಾಂಕ  ಜುಲೈ ತಾ 07 ಇಸವಿ 2026. ಮುಂದಿನ ಯುಗಾದಿಗೆ ಕಲಿಯುಗದ ಮೊದಲ ಪಾದದ 5128 ವರ್ಷ ಮುಗಿಯಲಿವೆ.
ಕೃಪೆ : ಅಂತರ್ಜಾಲ

............................. ರಮೇಶ  ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
*****************************************




Ads on article

Advertise in articles 1

advertising articles 2

Advertise under the article