-->
ಪ್ರೀತಿಯ ಪುಸ್ತಕ : ಸಂಚಿಕೆ - 231

ಪ್ರೀತಿಯ ಪುಸ್ತಕ : ಸಂಚಿಕೆ - 231

ಪ್ರೀತಿಯ ಪುಸ್ತಕ
ಸಂಚಿಕೆ - 231
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ    



                      ಸೂರ್ಯನನ್ನೇ ತಿಂದ ಮೈನಾ
ಪ್ರೀತಿಯ ಮಕ್ಕಳೇ... ಸೂರ್ಯನನ್ನು ಮೈನಾ ಹೇಗೆ ತಿಂದಿತಪ್ಪ? ಆಶ್ಚರ್ಯಕರವಾಗಿದೆ ಅಲ್ವೇ? ಆಹಾರ ಸರಪಳಿಯ ಬಗ್ಗೆ ಅರ್ಥಮಾಡಿಕೊಂಡರೆ ಉತ್ತರ ಸಿಕ್ಕಿ ಬಿಡುತ್ತದೆ. ಮುಂಜಾನೆ ಹೊತ್ತು. ಮೈನಾ ಆಹಾರ ಸೇವಿಸುವ ಸಮಯ. ಸೂರ್ಯನನ್ನೇ ತಿನ್ನಬೇಕು ಅನಿಸಿದೆ. ಆದರೆ ತುಂಬಾ ದೊಡ್ಡ.. ತುಂಬಾ ಬಿಸಿ.. ತುಂಬಾ ದೂರ.. ಆದರೆ ಉಪಾಯ ಹೊಳೆದಿತ್ತು. ಗಿಡಗಳು ಸೂರ್ಯರಶ್ಮಿಯನ್ನು ಎಲೆಗಳ ಮೂಲಕ ಕುಡಿಯುವವು ತಾನೆ. ಸೂರ್ಯನ ಒಂದು ಭಾಗ ಗಿಡಕ್ಕೆ ಸೇರಿದಂತೆ ತಾನೇ? ಗಿಡಗಳಿಂದ ಈ ಶಕ್ತಿ ಕಂಬಳಿ ಹುಳದಿಂದ ಹಿಡಿದು ತರಕಾರಿ ತಿನ್ನುವ ನಮಗೂ ಸಿಗುತ್ತದೆ ತಾನೇ? ಕಂಬಳಿ ಹುಳವನ್ನು ಅಥವಾ ಪತಂಗವನ್ನು ತಿನ್ನುವ ಹಲ್ಲಿಗೂ. ಹಲ್ಲಿಯನ್ನು ತಿನ್ನುವ ಮೈನಾಕ್ಕೂ ಸೂರ್ಯನ ಶಕ್ತಿ ಸಿಗುತ್ತದೆ ತಾನೇ? ಇದೇ ಮೈನಾ ಸೂರ್ಯನನ್ನು ತಿನ್ನುವ ಗುಟ್ಟು ಅಂದದ ಚಿತ್ರಗಳೊಂದಿಗೆ ಓದಿ ಖುಶಿಪಡಿ. 

ಲೇಖಕರು : ಲಬೋನಿ ರಾಯ್
ಅನುವಾದ: ದೀಪ್ತಿ ಬಿ 
ಚಿತ್ರಗಳು: ಲಬೋನಿ ರಾಯ್
ಪ್ರಕಾಶಕರು:: ಪ್ರಥಮ್ ಬುಕ್ಸ್ 
ಬೆಲೆ: ರೂ.55/  

ಪ್ರಥಮ್ ಪ್ರಕಾರ ಇದು 3ನೇ ಹಂತದ ಪುಸ್ತಕ. ಸ್ವ ಇಚ್ಛೆಯಿಂದ ಓದುವ ಮಕ್ಕಳಿಗಾಗಿ, ಇನ್ನೊಬ್ಬರ ಸಹಾಯ ಇಲ್ಲದೇ ತಾವೇ ಓದುವ ಮಕ್ಕಳಿಗಾಗಿ

◾ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 
ಪ್ರಥಮ್ ಬುಕ್ಸ್ 080 – 42052574/41159009; www.prathambooks.org; www.storyweaver.org.in.
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************



Ads on article

Advertise in articles 1

advertising articles 2

Advertise under the article