ಪ್ರೀತಿಯ ಪುಸ್ತಕ : ಸಂಚಿಕೆ - 228
Saturday, September 5, 2026
Edit
ಪ್ರೀತಿಯ ಪುಸ್ತಕ
ಸಂಚಿಕೆ - 228
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಹಳ್ಳಿಯ ಜೀವನ ನಿಮ್ಮಲ್ಲಿ ಅನೇಕರಿಗೆ ಗೊತ್ತಿರಬಹುದು. ಗೊತ್ತಿರುವವರಿಗೆ ಈ ಪುಸ್ತಕ ನಿಮ್ಮದೇ ಕಥೆಯಂತೆ ಅನಿಸಬಹುದು. ಈ ಪ್ರಪಂಚ ಗೊತ್ತಿಲ್ಲದವರಿಗೆ ಇದೊಂದು ಹೊಸ ಪ್ರಪಂಚ ತೆರೆಯಬಹುದು.
ಈ ದಿನಕರ ಹಳ್ಳಿಯ ಪರಿಸರದಲ್ಲಿ ಬೆಳೆದಿದ್ದಾನೆ, ದನಕರುಗಳೊಂದಿಗೆ – ಹೊಲಗದ್ದೆಗಳಲ್ಲಿ ಕೆಲಸ ಮಾಡುವ ಚುರುಕಾದ ಹುಡುಗ. ಅವನನ್ನು ದಡ್ಡ ಹುಡುಗ ಎಂದು ಮನೆಯವರು ತಿರಸ್ಕಾರದಿಂದ ಕಂಡಿದ್ದರು. ಶಾಲೆ ಬಿಡಿಸಿ ಹೊಲಕ್ಕೆ ಕಳುಹಿಸಿದ್ದರು. ಆದರೆ ಅವನು 2-3 ವರುಷಗಳಲ್ಲಿ ಬಹಳಷ್ಟು ತಿಳುವಳಿಕೆ ಪಡೆದುಕೊಂಡ. ದೊಡ್ಡವರಿಗಿಂತಲೂ ಜಾಸ್ತಿ ಅರಿತುಕೊಂಡ. ಅವನು ಮತ್ತು ಅವನ ಜೊತೆಗಾರರು ಅಲ್ಲದೆ ನಾಗಪ್ಪ ಕಾಕಾ ಸೇರಿಕೊಂಡರೆ ನೋಡಿ ಮರಗಳ ಹೆಸರಿನ ಬಂಡಿ ಉದ್ದಕ್ಕೆ ಓಡುತ್ತಿತ್ತು. ತರಕಾರಿ ಬಳ್ಳಿಗಳ ಹೆಸರು ಮತ್ತಷ್ಟು ಉದ್ದ.
ಈ ಪುಸ್ತಕ ಸುಂದರವಾದ ಹಳ್ಳಿ ಭಾಷೆಯಲ್ಲಿಯೇ ಬರೆದಿದ್ದಾರೆ. ದಿನಕರನ ಬದುಕನ್ನು ಹತ್ತಿರದಿಂದ ನೋಡಲು ಪುಸ್ತಕ ಎತ್ತಿಕೊಳ್ಳಿ..
ಲೇಖಕರು : ಡಾ.ಬಸು ಬೇವಿನ ಗಿಡ
ಚಿತ್ರಗಳು: ಮುರಳೀಧರ ಎನ್. ಜಿ (ಸ್ಕಂದ)
ಪ್ರಕಾಶಕರು:: ನವಕರ್ನಾಟಕ ಪ್ರಕಾಶನ
ಬೆಲೆ: ರೂ.90/
ಈ ಪುಸ್ತಕವನ್ನು ಓದಲು ಅಭ್ಯಾಸ ಇರುವ 7-8ನೇ ತರಗತಿಯ ಮಕ್ಕಳು ಓದಿ ಕೊಳ್ಳಬಹುದು. ಚಿಕ್ಕ ಮಕ್ಕಳಿಗೆ ಓದಿ ಹೇಳಬಹುದು.
◾ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ನವಕರ್ನಾಟಕ ಪ್ರಕಾಶನ, navakarnataka@gmail.com; www.navakrnataka.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
***************************************