ಪ್ರೀತಿಯ ಪುಸ್ತಕ : ಸಂಚಿಕೆ - 224
Friday, August 7, 2026
Edit
ಪ್ರೀತಿಯ ಪುಸ್ತಕ
ಸಂಚಿಕೆ - 224
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಭಾರತದ ಭತ್ತದ ತಳಿಗಳ ಜನಕ
ಪ್ರೀತಿಯ ಮಕ್ಕಳೇ... ಒಬ್ಬ ಪುಟ್ಟ ಬಾಲಕ, ತಂದೆಯ ಹೆಗಲ ಮೇಲೆ ಕುಳಿತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತು ಕೇಳಿಸಿಕೊಳ್ಳುತ್ತಿದ್ದ.. ಅದುವೇ ಅವನಿಗೆ ದೊಡ್ಡ ಪ್ರೇರಣೆಯಾಯಿತು. ಈ ಬಾಲಕ ವಿದರ್ಭ ಪ್ರಾಂತ್ಯದ ಸಣ್ಣ ಹಳ್ಳಿಯ ಮಹಾರ್ ಕುಟುಂಬದಲ್ಲಿ ಜನಿಸಿದ ದಾದಾಜಿ ರಾಮಾಜಿ ಖೋಬ್ರಡೆ.
ನಿಮಗೆ ಗೊತ್ತಿದೆಯೇ, ಅಂಬೇಡ್ಕರ್ ಅವರು ಕೂಡಾ ಮಹಾರ್ ಕಟುಂಬಕ್ಕೆ ಸೇರಿದವರು. ದಾದಾಜಿ ಅವರು ಮೂರನೇ ತರಗತಿವರೆಗೆ ತಮ್ಮ ಊರಿನಲ್ಲಿ ಓದಿದರು. ಜಾತಿ, ಅನಾರೋಗ್ಯದ ಕಾರಣಕ್ಕಾಗಿ ಹೆಚ್ಚು ಓದಲಾಗಲಿಲ್ಲ. ಆದರೂ ಅವರಲ್ಲಿ ಕಲಿಯುವ ಹೊಸತನ್ನು ಹುಡುಕುವ ಛಲವಿತ್ತು. ತಮ್ಮ ಕುಟುಂಬದ ಸಣ್ಣ ಜಮೀನಿನಲ್ಲಿ ಕೆಲಸ ಮಾಡಿದರು, ಅದೇ ಅವರಿಗೆ ಶಾಲೆ ಆಯಿತು. ಅದ್ಭುತವಾದ ಸಂಗತಿಯೆಂದರೆ ಅವರು ಭತ್ತದ ವಿವಿಧ ತಳಿಗಳನ್ನು ಕಂಡು ಹಿಡಿದು ಬೆಳೆಸತೊಡಗಿದರು. ಮನಸ್ಸು ಮಾಡಿ ತೊಡಗಿಸಿಕೊಂಡರೆ ಹೊಸದನ್ನು ಸಂಶೋಧಿಸಲು, ದೊಡ್ಡ ಕನಸು ಕಾಣಲು ಸಾಧ್ಯ ಎಂದು ತೋರಿಸಿಕೊಟ್ಟರು. ಇವರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ನಿಮಗೂ ಕುತೂಹಲ ಆಗಿರಬಹುದು ಅಲ್ಲವೇ?
ಲೇಖಕರು : ಯೋಗೇಶ್ ಮೈತ್ರೇಯ
ಅನುವಾದ: ಡಾ.ಕೆ ಪುಟ್ಟಸ್ವಾಮಿ
ಚಿತ್ರಗಳು: ಭಾರ್ಗವಿ ರುದ್ರರಾಜು
ಪ್ರಕಾಶಕರು:: ಪ್ರಥಮ್ ಬುಕ್ಸ್
ಬೆಲೆ: ರೂ.80/
ಪ್ರಥಮ್ ಪ್ರಕಾರ ಇದು 4ನೇ ಹಂತದ ಪುಸ್ತಕ. ಸುಲಭವಾಗಿ ಓದುವ ಸಾಮರ್ಥ್ಯವಿರುವ ಮಕ್ಕಳಿಗಾಗಿ; ವಿಶ್ವಾಸದಿಂದ ಓದಬಲ್ಲಂತಹ ದೊಡ್ಡ ಮಕ್ಕಳಿಗಾಗಿ
▪️ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಪ್ರಥಮ್ ಬುಕ್ಸ್ 080 – 42052574/41159009; www.prathambooks.org; www.storyweaver.org.in.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
***************************************