-->
ಜೀವನ ಸಂಭ್ರಮ : ಸಂಚಿಕೆ - 255

ಜೀವನ ಸಂಭ್ರಮ : ಸಂಚಿಕೆ - 255

ಜೀವನ ಸಂಭ್ರಮ : ಸಂಚಿಕೆ - 255
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                        
               

ಮಕ್ಕಳೇ, ಇಂದು ಕೆಲಸದ ಬಗ್ಗೆ ತಿಳಿದುಕೊಳ್ಳೋಣ. ಕೆಲಸ ಎಂದರೇನು?. ನಾವೆಲ್ಲ ಹಣ ಸಂಪಾದಿಸಲು ಮಾಡುವ ಶ್ರಮವೇ ಕೆಲಸ ಎಂದು ಭಾವಿಸಿದ್ದೇವೆ. ಆದರೆ ನಿಜವಾದ ಅರ್ಥ ಕೆಲಸ ಎಂದರೆ ದೇಹ, ಬುದ್ಧಿ, ಮನಸ್ಸು, ಇಂದ್ರಿಯ ಮತ್ತು ಅವಯವಗಳನ್ನು ಬಳಸುವುದನ್ನು ಕೆಲಸ ಎನ್ನುತ್ತೇವೆ. ಕಣ್ಣಿನ ಕೆಲಸ ನೋಡುವುದು. ಕಿವಿಯ ಕೆಲಸ ಕೇಳುವುದು. ಕೈ ಹಾಗೆ ಉಳಿದ ಇಂದ್ರಿಯಗಳ ಕೆಲಸ, ವಾಸನೆ, ರುಚಿ ಮತ್ತು ಸ್ಪರ್ಶ ತಿಳಿಯುವುದು. ಕೈಯಿಂದ ಹಿಡಿಯುವುದು. ಕಾಲಿನಿಂದ ನಡೆಯುವುದು. ಬುದ್ಧಿಯಿಂದ ತಿಳಿಯುವುದು. ಮನಸ್ಸಿನಿಂದ ಅನುಭವಿಸುವುದು. ಇದಕ್ಕೆ ಕೆಲಸ ಎನ್ನುವುದು. 

ಇದರಿಂದ ಆಗುವ ಲಾಭ ಏನು. ಇದರಿಂದ ಬದುಕು ಶ್ರೀಮಂತವಾಗುತ್ತದೆ... ಹೇಗೆ?. ಕಣ್ಣು ಬಳಸುವುದರಿಂದ ಸೌಂದರ್ಯ ಕಣ್ಣಿನ ಮೂಲಕ ಪ್ರವೇಶಿಸಿ ಮನಸನ್ನು ತುಂಬುತ್ತದೆ. ಕಿವಿಯಿಂದ ಮಧುರ ಶಬ್ದ ಆಲಿಸಿ ಮನಸ್ಸು ತುಂಬುತ್ತದೆ. ಹಾಗೆ ಮೂಗು. ನಾಲಗೆ. ಬಳಸುವುದರಿಂದ ಮಧುರತೆ ಸವಿ ಸುವಾಸನೆ ಮನಸ್ಸು ತುಂಬಿ ಮನಸ್ಸು ಶ್ರೀಮಂತವಾಗುತ್ತದೆ. ಬುದ್ಧಿ ಬಳಸುವುದರಿಂದ ಜಗತ್ತಿನ ಜ್ಞಾನ ಗಳಿಸಿ ಜ್ಞಾನದಲ್ಲಿ ಶ್ರೀಮಂತರಾಗುತ್ತೇವೆ. ಕೈ ಬಳಸುವುದರಿಂದ ಕುಶಲತೆ ಹೆಚ್ಚಿ ಕಾರ್ಯಾನುಭವ ಹೆಚ್ಚಾಗುತ್ತದೆ. ಹೀಗೆ ಯಾವ ಯಾವ ಇಂದ್ರಿಯ, ಅವಯವ ಬಳಸುತ್ತೇವೆಯೋ ಅವು ಹೆಚ್ಚು ಬಲಿಷ್ಠವಾಗುತ್ತವೆ. ಶ್ರೀಮಂತವಾಗುತ್ತದೆ. 

ಬದುಕು ಶ್ರೀಮಂತ ಅಂದರೆ ದೈಹಿಕವಾಗಿ, ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಶ್ರೀಮಂತವಾಗುವುದೆಂದು ಅರ್ಥ. ಆದರೆ ನಾವು ತಿಳಿದಂತೆ ಹಣ ಗಳಿಕೆಗಾಗಿ ಕೆಲಸ ಮಾಡಿದರೆ ಹಣ ಗಳಿಸಿ ವಸ್ತುಗಳನ್ನು ಖರೀದಿಸಬಹುದು. ವಸ್ತುಗಳು ಹೆಚ್ಚಾದರೆ ವಸ್ತುಗಳು ಇರುವ ಸ್ಥಳ ಶ್ರೀಮಂತವಾದಂತೆ. ನಮ್ಮ ಬದುಕು ಶ್ರೀಮಂತವಾದಂತೆ ಅಲ್ಲ. ಬದುಕು ಶ್ರೀಮಂತವಾಗಲು ಕೆಲಸ ಮಾಡಬೇಕು. ಅವುಗಳನ್ನು ಬಳಸದಿದ್ದರೆ ದುರ್ಬಲವಾಗುತ್ತದೆ ನಾಶವಾಗುತ್ತದೆ. 

ವಿದೇಶಿ ಲೇಖಕ ಹೇಳಿದ್ದು we have legs and arms. We use them otherwise lose them. ಬುದ್ಧಿ ಬಳಸಿ ಶ್ರೇಷ್ಠ ವಿಜ್ಞಾನಿಗಳು, ತಂತ್ರಜ್ಞಾನಿಗಳಾದರು. ಮನಸ್ಸು ಬಳಸಿ ಶ್ರೇಷ್ಠ ಕವಿಗಳಾದರೂ, ತತ್ವಜ್ಞಾನಿಗಳಾದರು. ಜಗತ್ತಿನಲ್ಲಿ ಶಾಂತಿ ಸಮಾಧಾನ ಹರಡಿದರು. ಬುದ್ಧ ಹೃದಯ (ಮನಸ್ಸು) ಬಳಸಿ ಶಾಂತಿ ಹರಡಿದನು. ಬುದ್ಧನ ಮಾತು ನೋಟ ಎಲ್ಲದರಲ್ಲೂ ಶಾಂತಿ ತುಂಬಿತ್ತು. ಬುದ್ಧ ಹೃದಯ ದುಡಿಸಿದನು. ಕಲಾಕಾರರು ಕಲೆ ಹರಡಿದರು. ಭೂಮಿ ಹದಗೊಳಿಸಿದವ ಒಕ್ಕಲಿಗ. ಕಲ್ಲಿನಲ್ಲಿ ಕಲೆ ಹರಳಿಸಿದ್ದು ಕಲಾವಿದ. ಶಿಲ್ಪಿ. ಈತ ಕೈಬಳಸಿದ ‌. ಐಹೊಳೆ, ಬಾದಾಮಿ, ಬೇಲೂರು ಹಳೇಬೀಡು ಇವೆಲ್ಲ ಕೈ ಕೆಲಸ. ಆಗಲಾರದವನು ಬಂದು ಶಿಲ್ಪ ನಾಶ ಮಾಡಿದರು. ಇದು ಕೈ ಕೆಲಸವೇ. ಕೆಲವರು ಹೂ ಬೆಳೆಸಿದರೆ. ಕೆಲವರು ಹೂ ತುಳಿಯುವವರು. ಕೆಲಸ ಸಾಧಕವಾಗಿರಬೇಕು ಬಾದಕವಾಗಿರಬಾರದು. 

◾ ಕೆಲಸದಲ್ಲಿ ಮೂರು ವಿಧ 
1. ಕಾರ್ಮಿಕ : ಈತ ದೇಹ ಕೈ ಬಳಸಿ ದುಡಿಯುವವನು. ಈತ ಮಾಲೀಕ ಹೇಳಿದಷ್ಟು ಕೆಲಸ ಮಾಡುತ್ತಾನೆ. ಕನಿಷ್ಠ ಮಟ್ಟದಲ್ಲಿ ಬುದ್ದಿ ಬಳಸುತ್ತಾನೆ. ಬರೀ ಕೆಲಸ ಇದೆ ಅಂತ ಕೆಲಸ ಮಾಡುವ ಈತ.

2. ಕುಶಲಕರ್ಮಿ : ಈಗ ದೇಹ ಬುದ್ದಿ ಬಳಸಿ ಕೆಲಸ ಮಾಡುವವನು. ಈತ ಕೈ ಮತ್ತು ಬುದ್ಧಿ ಬಳಸಿ ಕೆಲಸ ಮಾಡುತ್ತಾನೆ. ಇಲ್ಲಿ ಕುಶಲತೆ ಎದ್ದು ಕಾಣುತ್ತದೆ. ಇವರಿಗೆ ನುರಿತ ಕೆಲಸಗಾರ ಎನ್ನುತ್ತೇವೆ. ಆತನಲ್ಲಿ ಕೆಲಸದಲ್ಲಿ ತಜ್ಞತೆ ಇರುತ್ತದೆ.

3. ಕಲಾಕಾರ : ಈತ ದೇಹ, ಮನ ಮತ್ತು ಬುದ್ದಿ ಬಳಸಿ ಕೆಲಸ ಮಾಡುತ್ತಾನೆ. ಈತನ ಕೆಲಸದಲ್ಲಿ ಸೌಂದರ್ಯ ಮಾಧುರ್ಯ ವ್ಯಕ್ತವಾಗುತ್ತದೆ. ಇದು ನೋಡುವವನಿಗೆ ಮತ್ತು ಮಾಡಿದವನಿಗೆ ಆನಂದ ಕೊಡುತ್ತದೆ. ಈತ ಕಲೆಗಾರನಾಗುತ್ತಾನೆ. ಇಲ್ಲಿ ಕೆಲಸವನ್ನು ಭಾವ ತುಂಬಿ ಪ್ರೇಮದಿಂದ ಮಾಡುತ್ತಾನೆ. ನಾವು ಶ್ರೀಮಂತ ಸುಂದರ ಬದುಕು ಸಾಗಿಸಲು ಕಲಾಕಾರನಾಗಿ ಕೆಲಸ ಮಾಡಬೇಕು. ಕೆಲಸ ಕಲಾತ್ಮಕವಾಗಿತ್ತು ಅಂದರೆ ಸೌಂದರ್ಯ ಇರುತ್ತದೆ. ಯಾವುದೇ ಕೆಲಸ ಇರಲಿ ಅದು ಕಲಾತ್ಮಕವಾಗಿದ್ದರೆ ಬದುಕು ಸಂತೋಷ ಕೊಡುತ್ತದೆ. ಇದರಿಂದ ಬದುಕಿನ ಬೆಲೆ ಹೆಚ್ಚಾಗುತ್ತದೆ. ಹೀಗೆ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಕೆಲಸದಿಂದ ಬದುಕಿನ ಬೆಲೆ ಹೆಚ್ಚು. ಬದುಕು ಶ್ರೀಮಂತವಾಗುತ್ತದೆ. ಇದರಿಂದ ಜಗತ್ತು ಸುಂದರವಾಗುತ್ತದೆ, ಶ್ರೀಮಂತವಾಗುತ್ತದೆ, ನಲಿಯುತ್ತದೆ. ಜಗತ್ತು ಸ್ವರ್ಗವಾಗುತ್ತದೆ. ಇದೆಲ್ಲ ಆಗುವುದು ಕೆಲಸದಿಂದ. ಜೀವನದಲ್ಲಿ ಏನಾದರೂ ಸಾಧಿಸಬೇಕು ಅಂತ ಅನಿಸಿದರೆ ಕೆಲಸ ಮಾಡಬೇಕು. ಏನೇ ಮಾಡಿದರು ಉತ್ಸಾಹದಿಂದ, ಪ್ರೇಮದಿಂದ, ತನ್ಮಯವಾಗಿ ಮಾಡಬೇಕು. ಅಲ್ಲವೇ ಮಕ್ಕಳೆ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*****************************************


Ads on article

Advertise in articles 1

advertising articles 2

Advertise under the article