-->
ಜಗಲಿ ಕಟ್ಟೆ : ಸಂಚಿಕೆ - 78

ಜಗಲಿ ಕಟ್ಟೆ : ಸಂಚಿಕೆ - 78

ಜಗಲಿ ಕಟ್ಟೆ : ಸಂಚಿಕೆ - 78
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 


ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


ನಮ್ಮ ಮಕ್ಕಳ ಜಗಲಿಯಲ್ಲಿ ಪ್ರಕಟವಾಗುತ್ತಿರುವ ಮಕ್ಕಳ ವಿಜ್ಞಾನ ಅಂಕಣದಲ್ಲಿ ದಿವಾಕರ ಶೆಟ್ಟಿಯವರು ಎಲ್ ನಿನೋ ಬಗ್ಗೆ ಲೇಖನವೊಂದನ್ನು ಕೆಲವು ವಾರಗಳ ಹಿಂದೆ ಬರೆದಿದ್ದರು. ಆ ಲೇಖನದಲ್ಲಿ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಬಹುದೆನ್ನುವ ಸೂಚನೆಯನ್ನು ಕೊಟ್ಟಿದ್ದರು. ಅದರಂತೆಯೇ ಈ ಬಾರಿ ಮಳೆಯ ಇಳಿಕೆಯ ಪ್ರಮಾಣವನ್ನು ನಾವಿಂದು ಕಾಣುತ್ತಿದ್ದೇವೆ. ಹವಾಮಾನದ ವೈಪರೀತ್ಯದಿಂದಾಗಿ ಬರಗಾಲವನ್ನು ಎದುರು ನೋಡಬಹುದಾದ ಸಂಧಿಗ್ಧತೆಯಲ್ಲಿ ಇಂದು ನಾವಿದ್ದೇವೆ ಎಂದರೆ ತಪ್ಪಲ್ಲ.

ಇದಕ್ಕೆಲ್ಲ ನಾವೇ ಹೊಣೆಗಾರರೇ ಹೊರತು ಇನ್ನಾರು ಅಲ್ಲ. ಇಂದು ಅಂಗನವಾಡಿಯಿಂದ ಪದವಿವರೆಗಿನ ಶಿಕ್ಷಣದ ಪಠ್ಯದಲ್ಲಿ ಈ ಬಗ್ಗೆ ಕಾಳಜಿಯ ಕಲಿಕೆಯನ್ನು ನಾವು ಮಾಡಲೇ ಇಲ್ಲ. ಈ ನೆಲ ಮತ್ತು ಜಲದ ಬಗ್ಗೆ ಗಂಭೀರವಾಗಿ ಅರಿವನ್ನೇ ಮೂಡಿಸಿಕೊಂಡಿಲ್ಲ. ಇದೆರಡನ್ನು ಬಿಟ್ಟು ಉಳಿದೆಲ್ಲವುಗಳ ಬಗ್ಗೆ ತುಂಬಾ ಪಾಂಡಿತ್ಯವನ್ನೇ ಗಳಿಸಿಕೊಂಡಿದ್ದೇವೆ. ಈ ಭೂಮಿಯ ನಾಳೆಯ ಬಗ್ಗೆ ಯಾರೂ ಯೋಚನೆ ಮಾಡದ ರೀತಿಯಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದೇವೆ.

ನಮ್ಮ ಈ ನೆಲ ಮತ್ತು ಜಲದ ಬಗ್ಗೆ ಮನೆಯಲ್ಲಿ ಹಿರಿಯರಾದರೂ ಹೇಳಬೇಕಿತ್ತು. ಅವರೇ ಹೇಳಿಲ್ಲ ಅಂದ ಮೇಲೆ ಕಿರಿಯರಾದ ಮಕ್ಕಳಿಗಾದರೂ ಹೇಗೆ ಗೊತ್ತಾಗಬೇಕು..? ನಮ್ಮ ಸುತ್ತಮುತ್ತ ಗಿಡ ಮರಗಳನ್ನು ಬೆಳೆಸಬೇಕು. ನೀರು ಇಂಗಿಸುವ ತಂತ್ರವನ್ನು ಅಳವಡಿಸಿಕೊಳ್ಳಬೇಕು. ಪ್ಲ್ಯಾಸ್ಟಿಕ್ ಕಸಗಳನ್ನು ವಿಲೇವಾರಿ ಮಾಡುವ ವಿಧಾನ. ಹಸಿ ಕಸಗಳನ್ನು ಮನೆಯಲ್ಲಿ ಗೊಬ್ಬರವಾಗಿ ಹೇಗೆ ಬಳಸಿಕೊಳ್ಳಬಹುದು ಈ ರೀತಿಯ ಕಲಿಕೆ ತುಂಬಾ ಅಗತ್ಯವಾಗಿದೆ. 

ಈ ರೀತಿಯ ಅರಿವನ್ನು ಮಕ್ಕಳಿಗೆ ನೀಡಬೇಕೆನ್ನುವ ಉದ್ದೇಶದಿಂದ ನಮ್ಮ ಮಂಚಿ - ಕೊಳ್ನಾಡು ಪ್ರೌಢಶಾಲೆಯಲ್ಲಿ ಕಳೆದ 3 ವರ್ಷಗಳಿಂದ ಹಮ್ಮಿಕೊಂಡು ಬರುತ್ತಿರುವ ಮಳೆಹಬ್ಬ ಅನ್ನುವ ಕಾರ್ಯಕ್ರಮದಲ್ಲಿ ಜೋಡಣೆ ಮಾಡಿಕೊಂಡಿದ್ದೆ. ಮಳೆ ಹಬ್ಬ ಎನ್ನುವುದು ಶಾಲಾರಂಭದಲ್ಲಿ ಸಂಯೋಜಿಸುತ್ತಿರುವ ಕಾರ್ಯಕ್ರಮ. ಶಾಲೆಗಳು ವಿದ್ಯಾರ್ಥಿ ಸ್ನೇಹಿಯಾಗಿರಬೇಕು, ಮಕ್ಕಳು ಸಂಭ್ರಮದಿಂದ ಕಲಿಕೆಯಲ್ಲಿ ತೊಡಗಬೇಕೆನ್ನುವ ಮಹತ್ವಕಾಂಕ್ಷೆ ನಮ್ಮದು. ಬೇಸಿಗೆ ರಜೆಯ ಮಜಾವನ್ನು ಕಳೆದು ಸಪ್ಪೆ ಮೋರೆಯಲ್ಲಿ ಶಾಲೆ ಕಡೆ ಹೆಜ್ಜೆ ಹಾಕುವ ಅನೇಕ ಮಕ್ಕಳನ್ನು ನೋಡಿದ್ದೇವೆ. ಇಂತಹ ಮಕ್ಕಳು ಶಾಲೆಯಲ್ಲಿ ನಿತ್ಯದ ಪಾಠ, ನೋಟ್ಸ್ ಗಳಲ್ಲಿ ಒಗ್ಗಿಕೊಳ್ಳಲು ಸಮಯವಕಾಶವನ್ನು ತೆಗೆದುಕೊಳ್ಳುತ್ತಾರೆ. ಶಾಲಾ ಪಠ್ಯಕ್ಕೆ ಪೂರಕವಾಗಿ ಮಕ್ಕಳು ಸಂತಸದ ಕಲಿಕೆಯಲ್ಲಿ ಪಾಲ್ಗೊಳ್ಳುವಂತಾಗಬೇಕು ಮತ್ತು ಇಷ್ಟಪಟ್ಟು ಓದಿಕೊಳ್ಳುವಂತಾಗಬೇಕೆನ್ನುವ ಉದ್ದೇಶದಿಂದ ಮಂಚಿ - ಕೊಳ್ನಾಡು ಪ್ರೌಢಶಾಲೆಯಲ್ಲಿ ಮಳೆ ಹಬ್ಬವೆನ್ನುವ ಮಕ್ಕಳ ಕಲಿಕಾ ಚೈತನ್ಯ ಶಿಬಿರವನ್ನು ಆಯೋಜಿಸಲಾಗಿತ್ತು.

ಒಟ್ಟು ಮೂರು ದಿನಗಳ ಕಾಲ ನಡೆದ ಮಳೆಹಬ್ಬದಲ್ಲಿ ಅಂದಾಜು 300 ವಿದ್ಯಾರ್ಥಿಗಳು ಬಹಳ ಆಸಕ್ತಿಯಿಂದ ಭಾಗವಹಿಸಿದರು. ವಿವಿಧ ರೀತಿಯ ಜಾಗೃತಿ ಹಾಡುಗಳು, ಚಪ್ಪಾಳೆಗಳ ವೈವಿಧ್ಯತೆಗಳೊಂದಿಗೆ ಸಂಪನ್ಮೂಲ ವ್ಯಕ್ತಿಯಾದ ಮಕ್ಕಳ ರಂಗಭೂಮಿ ಕಲಾವಿದ ಕೃಷ್ಣಪ್ಪ ಬಂಬಿಲ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತರು. 

ಕತ್ತಲೆ ಹಾಡು ಖ್ಯಾತಿಯ ನಾದ ಮಣಿನಾಲ್ಕೂರು ವಿದ್ಯಾರ್ಥಿಗಳಲ್ಲಿ ಸಾಧನೆ ಮತ್ತು ಸಾಧ್ಯತೆಗಳ ಕುರಿತಾಗಿ ಅರಿವಿನ ಪಯಣದ ಬುತ್ತಿಯನ್ನು ಹಂಚಿದರು. ವಿವಿಧ ರೀತಿಯ ಹಾಡುಗಳು ಹಾಗೂ ಪ್ರಸಕ್ತ ಬದುಕಿನ ಸುಂದರ ಘಟನೆಗಳನ್ನು ಹೆಣೆಯುತ್ತಾ ವಿದ್ಯಾರ್ಥಿಗಳಿಗೆ ಅರಿವಿನ ಬೆಳಕನ್ನು ಚೆಲ್ಲಿದರು.

ಪರಿಸರ ತ್ಯಾಜ್ಯ ಮತ್ತು ಅದರ ನಿರ್ವಹಣೆ ಕುರಿತಾಗಿ ಹಸಿರು ದಳದ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಬಜಾಲ್ ಸುಂದರವಾದ ಮಾಹಿತಿಯನ್ನು ಒದಗಿಸಿದರು. ಮನೆಯೊಳಗಿನ ಕಸವನ್ನು ವಿಲೇವಾರಿ ಮಾಡುವ ಬಗೆ ಮತ್ತು ಪರಿಸರದ ಜೊತೆಗಿನ ನಮ್ಮ ನಿಲುವನ್ನು ಬಲಪಡಿಸಬೇಕೆನ್ನುವ ಮಾತುಗಳನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡರು.

ಪ್ರಕೃತಿಯ ಉಳಿವಿನಲ್ಲಿ ನಮ್ಮ ಪಾತ್ರದ ಅಗತ್ಯತೆಯನ್ನು ಪ್ರತಿಬಿಂಬಿಸುವ ನೀರು - ಬೇರು ವಿಷಯದ ಕುರಿತಂತೆ ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಾದ ರಮೇಶ್ ಬಾಯಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ತುಂಬಿದ ಮಾತುಗಳನ್ನಾಡಿದರು. ಸಣ್ಣ ಸಣ್ಣ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಅದರ ಮಹತ್ವದ ಅರಿವನ್ನು ಮೂಡಿಸಿದರು. 

ಮಳೆ ಹಬ್ಬ ಮಕ್ಕಳಲ್ಲಿ ಚೈತನ್ಯವನ್ನು ತುಂಬುವ ಶಿಬಿರವಾಗಿ ಮೂಡಿಬಂದಿತು. ಭಾವನೆಗಳನ್ನು ಅರಳಿಸುವ, ಶೈಕ್ಷಣಿಕ ವರ್ಷ ಆರಂಭವೆಂಬ ಒತ್ತಡದಿಂದ ಮುಕ್ತವಾಗಿ ಎಲ್ಲಾ ಮಕ್ಕಳೊಂದಿಗೆ ಕೂಡಿ ಕಲಿಯುವ ಸದಾವಕಾಶ ಇಲ್ಲಿ ದೊರೆಯಿತು. 
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


ಓದುಗರ ಮಾತುಕತೆ :

ಕಳೆದ ಸಂಚಿಕೆಯ ಜಗಲಿಕಟ್ಟೆ - 77 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ.... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಕಳೆದ ಕೆಲವು ವಾರಗಳಿಂದ ಪ್ರಕಟವಾದ ಜಗಲಿಯ ಬರಹಗಳ ಕುರಿತಾದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


ಎಲ್ಲರಿಗೂ ನಮಸ್ಕಾರಗಳು,
     ಸಂಗತ್ಯಾಗದಿಂದ ಮಾನವ ಹೇಗೆ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬಹುದು ಎಂಬುದನ್ನು ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರು ಬಹಳ ಸೊಗಸಾಗಿ ವಿವರಿಸಿದ್ದಾರೆ. ಉತ್ತಮ ಸಂಚಿಕೆ. ಧನ್ಯವಾದಗಳು ಸರ್.
     ಹುಟ್ಟುವುದರಿಂದ ತೊಡಗಿ ಸಾಯುವವರಿಗೆ ಮನುಷ್ಯನ ಸಂಗಾತಿಯಾಗಿ ನಿರಂತರವಾಗಿ ಹತ್ತಿಯ ಅವಶ್ಯಕತೆ ಮಾನವನಿಗೆ ಇದ್ದೇ ಇರುತ್ತದೆ. ಹತ್ತಿಯ ಕುರಿತಾದ ಮುಂದುವರಿದ ಲೇಖನ ಸೊಗಸಾಗಿತ್ತು. ಜೊತೆಗೆ ಇದು 200ನೇ ಸಂಚಿಕೆ ಕೂಡ ಹೌದು. ಅಭಿನಂದನೆಗಳೊಂದಿಗೆ ಧನ್ಯವಾದಗಳು ಸರ್.
     ತಾಮ್ರ ಪತ್ರೆ ಗಿಡದ ಪರಿಚಯ ಈ ವಾರದ ಸಂಚಿಕೆಯಲ್ಲಿ ಚೆನ್ನಾಗಿ ಮೂಡಿ ಬಂದಿದೆ.
     ಟಿಬೆಟಿಯನ್ ಸಂಸ್ಕೃತಿಯ ಪುಟ್ಟ ಊರು ಕೊಡಗಿನ ಕುಶಾಲನಗರದ ಬೈಲಕುಪ್ಪೆಯ ಪರಿಚಯ ಪಯಣ ಸಂಚಿಕೆಯಲ್ಲಿ ಸೊಗಸಾಗಿತ್ತು. ಧನ್ಯವಾದಗಳು ಸರ್..
      ಲಿಂಗತ್ವದ ಕುರಿತಾದ ಹುಡ್ಗಿನಾ ಹುಡ್ಗನಾ ಎನ್ನುವ ಪುಸ್ತಕದ ಪರಿಚಯ ಚೆನ್ನಾಗಿತ್ತು ವಾಣಿಯಾಕ್ಕ.
     ರಮೇಶ್ ರವರ ಪದದಂಗಳ ಸಂಚಿಕೆ ಉತ್ತಮವಾಗಿ ಮೂಡಿ ಬರುತ್ತಿದೆ.
      ಎಲ್ಲರಿಗೂ ವಂದನೆಗಳು.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*****************************************




ನಮಸ್ತೇ,
     ಸಜ್ಜನರ ಸಂಗವನು ಹೆಜ್ಜೇನು ಸವಿದಂತೆ ದುರ್ಜನರ ಸಂಗ ದೊಡನಾಟ ಒಚ್ಚಲ ರೊಚ್ಚಿನಂತಿಹುದು ಎಂಬುದನ್ನು ಸರ್ವಜ್ಞನೇ ತನ್ನ ವಚನದಲ್ಲಿ ತಿಳಿಸಿದಂತೆ ದುರ್ಜನರ ಸಂಗದ ದುಷ್ಪರಿಣಾಮಗಳನ್ನು ಸೊಗಸಾಗಿ ತಿಳಿಸಿದ್ದಾರೆ ಶಿಕ್ಷಣಾಧಿಕಾರಿಯವರಾದ ಜ್ಞಾನೇಶ್ ಸರ್ ರವರು.
     ಶ್ರದ್ಧೆಯಿಂದ ಮಾಡುವ ಕೆಲಸವೇ ತಪಸ್ಸು. ತಪಸ್ಸಿನ ಕುರಿತಾದ ಸುಂದರ ಲೇಖನ ರಮೇಶ್ ಬಾಯಾರ್ ರವರಿಂದ.
     ಈ ವಾರದ ವೈಜ್ಞಾನಿಕ ಸಂಚಿಕೆಯಲ್ಲಿ ಮಕ್ಕಳ ಆರೋಗ್ಯ ವೃದ್ಧಿಗೆ ನಿದ್ದೆ ಹೇಗೆ ಕಾರಣ ಎಂಬುದನ್ನು ಸೊಗಸಾಗಿ ವಿವರಿಸಿದ್ದೀರಿ. ಧನ್ಯವಾದಳು ಸರ್....
     ಬಹುಪಯೋಗಿ ಚೂರಿಮುಳ್ಳಿನ ಗಿಡದ ಚಂದದ ಪರಿಚಯ ಈ ವಾರದ ಸಂಚಿಕೆಯಲ್ಲಿ . ಧನ್ಯವಾದಗಳು ಮೇಡಂ...
    ರಮೇಶ್ ರವರ ಪಯಣ ಸಂಚಿಕೆಯಲ್ಲಿ ಕುಶಾಲ ನಗರದ ಬೈಲಕುಪ್ಪೆಯ ಪ್ರವಾಸಿ ತಾಣದ ಮತ್ತಷ್ಟು ಮಾಹಿತಿ ಸಿಕ್ಕಿತು.
     ಧರಣಿಯ ಕಥೆ ಅಂತರಿಕ್ಷ ಎನ್ನುವ ಪುಸ್ತಕದ ಪರಿಚಯ ಸೊಗಸಾಗಿತ್ತು ವಾಣಿಯಕ್ಕ.
     ರಮೇಶ್ ಉಪ್ಪುಂದರವರ ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿ ಬರುತ್ತಿದೆ. ಧನ್ಯವಾದಗಳು ಸರ್...
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*****************************************



ನಮಸ್ತೇ,
     ನಿಸರ್ಗ ನಮಗೆ ಎಲ್ಲವನ್ನು ಕೊಟ್ಟಿದೆ. ಇದನ್ನು ಉಪಯೋಗಿಸಿ ಆನಂದವಾಗಿ ಬದುಕುವ ಕಲೆಯ ಬಗ್ಗೆ ಶಿಕ್ಷಣಾಧಿಕಾರಿಯವರಾದ ಜ್ಞಾನೇಶ್ ಸರ್ ರವರು ಸುಂದರವಾಗಿ ವಿಶ್ಲೇಷಿಸಿದ್ದಾರೆ.
     ವೇದ ಉಪನಿಷತ್ ಗಳು ಬದುಕಿಗೆ ಹೇಗೆ ದಾರಿದೀಪ ಎನ್ನುವುದನ್ನು ಉಪನಿಷತ್ ನಲ್ಲಿ ಬರುವ ಶ್ಲೋಕದ ವಿಶ್ಲೇಷಣೆಯೊಂದಿಗೆ ಬಹಳ ಸೊಗಸಾಗಿ ತಿಳಿಸಿದ್ದೀರಿ. ಧನ್ಯವಾದಗಳು ರಮೇಶ್ ಸರ್....
     ನಿದ್ದೆಗೆ ಕಾರಣವಾಗುವ ಜೀವರಾಸಾಯನಿಕ ಕ್ರಿಯೆಯ ಕುರಿತಾಗಿ ವಿವರವಾದ ಮಾಹಿತಿ ಲಭಿಸಿತು. ಧನ್ಯವಾದಳು ಸರ್..
     ಹಿಂದಿನ ಕಾಲದಲ್ಲಿ ಕೃಷಿಕರು ಬಳಸುತ್ತಿದ್ದ ಇತ್ತೀಚೆಗಿನ ದಿನಗಳಲ್ಲಿ ಮರೆಯಾಗುತ್ತಿರುವ ಮಾದೇರಿ ಬಳ್ಳಿಯ ಸೊಗಸಾದ ಪರಿಚಯ ವಿಜಯಾ ಮೇಡಂ ರವರಿಂದ.
     ಪ್ರಸಿದ್ಧ ಪ್ರವಾಸಿ ತಾಣ ಮಲೆ ಮಹದೇಶ್ವರ ಬೆಟ್ಟದ ಕುರಿತಾದ ಮಾಹಿತಿ ಈ ವಾರದ ಪಯಣ ಸಂಚಿಕೆಯಲ್ಲಿ ಉತ್ತಮವಾಗಿ ಮೂಡಿ ಬಂದಿದೆ.
    ವಾಣಿಯಕ್ಕನವರ ಪುಸ್ತಕ ಪರಿಚಯ ಸಂಚಿಕೆಗೆ ಇನ್ನೂರರ ಸಂಭ್ರಮ. ತಮ್ಮ ಸಂಚಿಕೆಯ ಮೂಲಕ ಅನೇಕ ಉಪಯುಕ್ತ ಪುಸ್ತಕಗಳನ್ನು ಪರಿಚಯಿಸಿದ್ದೀರಿ. ಅಭಿನಂದನೆಗಳೊಂದಿಗೆ ಧನ್ಯವಾದಗಳು ಮೇಡಂ. ಚಂದಮಾಮ ಪುಸ್ತಕ ಹಳೆಯ ಕಾಲದ ಪುಸ್ತಕವಾದರೂ ತುಂಬಾ ಜನಪ್ರಿಯ ಪುಸ್ತಕಗಳಲ್ಲಿ ಒಂದು. ಈ ವಾರದ ಸಂಚಿಕೆಯಲ್ಲಿ ಈ ಪುಸ್ತಕದ ಕುರಿತಾದ ಪರಿಚಯ ಚೆನ್ನಾಗಿತ್ತು.
    ರಮೇಶ್ ಸರ್ ರವರ ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿ ಬರುತ್ತಿದೆ. ಧನ್ಯವಾದಗಳು ಸರ್..
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*****************************************


ನಮಸ್ತೇ,
     ಸಹಜ ಪ್ರೇಮವನ್ನು ಬೆಳೆಸಿ ಸಂತೋಷದಿಂದ ಬದುಕುವ ದಾರಿಯನ್ನು ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರು ಬಹಳ ಸುಂದರವಾಗಿ ನಿರೂಪಿಸಿದ್ದಾರೆ ಧನ್ಯವಾದಗಳು ಸರ್....
     ಪರೀಕ್ಷಾ ಪೂರ್ವ ತಯಾರಿಯಲ್ಲಿ ಗಣಿತದಲ್ಲಿ ಸುಲಭವಾಗಿ ಅಂಕ ತೆಗೆಯುವ ಕುರಿತಾಗಿ ಯೋಗೀಶ್ ಸರ್ ರವರು ವಿದ್ಯಾರ್ಥಿಗಳಿಗೆ ಉತ್ತಮವಾದ ಸಲಹೆಗಳನ್ನು ನೀಡಿದ್ದಾರೆ. ನಾನು ಮುಖ್ಯ ಶಿಕ್ಷಕನಾಗಿದ್ದಾಗ ಹಲವು ಬಾರಿ ನಮ್ಮ ಶಾಲೆಗೆ ಬಂದು ಮಕ್ಕಳಿಗೆ ಗಣಿತದ ಕುರಿತು ಮಾರ್ಗದರ್ಶನ ನೀಡಿದ್ದಾರೆ. ಓರ್ವ ಉತ್ತಮ ಶಿಕ್ಷಕ. ಧನ್ಯವಾದಗಳು ಸರ್.
      ದೇವರನ್ನು ಒಲಿಸಲು ಪೂಜೆ ಪುನಸ್ಕಾರಗಳೇ ಮುಖ್ಯವಲ್ಲ ಬದಲಾಗಿ ಅಶಕ್ತರು ಬಡವರು ಹಿರಿಯರು ಮುಂತಾದವರ ಸೇವೆಯಿಂದ ದೇವರು ಸಂತೃಪ್ತಗೊಳ್ಳುತ್ತಾರೆ ಎನ್ನುವುದನ್ನು ರಮೇಶ್ ಸರ್ ರವರು ಸುಂದರವಾಗಿ ವಿವರಿಸಿರಿದ್ದಾರೆ....
     ಜೈವಿಕ ಗಡಿಯಾರವೂ ಕೂಡ ನಿದ್ದೆಗೆ ಹೇಗೆ ಕಾರಣ ಎನ್ನುವ ಪ್ರಶ್ನೆಗೆ ಮುಂದಿನ ಸಂಚಿಕೆಗೆ ಕಾಯಬೇಕು ನಿದ್ದೆಯ ಕುರಿತಾದ ಮುಂದುವರಿದ ಲೇಖನ ಉತ್ತಮವಾಗಿತ್ತು.
     ನಿತ್ಯ ಹೂವಿನಿಂದ ತುಂಬಿರುವ ಅಲಂಕಾರಿಕ ಸಸ್ಯ ಥಾಮ್ಸೇನಿಯಾದ ಪರಿಚಯ ತುಂಬಾ ಸೊಗಸಾಗಿತ್ತು ಮೇಡಂ.
     ರಮೇಶ್ ರವರ ಪಯಣ ಸಂಚಿಕೆಯಲ್ಲಿ ಮಲೆಮಹದೇಶ್ವರ ಬೆಟ್ಟದ ಮಹದೇಶ್ವರ ಸ್ವಾಮಿ ದೇಗುಲದ ಕುರಿತಾದ ಮಾಹಿತಿ ಚೆನ್ನಾಗಿ ಮೂಡಿ ಬಂದಿದೆ.
     ವಾಣಿಯಕ್ಕನವರ ಪುಸ್ತಕ ಪರಿಚಯದಲ್ಲಿ ಕರಾಮತಿಲಾಲರ ಖಡ್ಗ ಪುಸ್ತಕದ ಪರಿಚಯ ಸೊಗಸಾಗಿತ್ತು.
     ಹಲವು ದಿನಗಳ ನಂತರ ಮತ್ತೆ ರಜೆಯ ಓದು ಸಂಚಿಕೆ. ಹ್ಯಾಚೆಟ್ ಮತ್ತು ಗ್ರೀನ್ ನೋವ್ ನ ಮಕ್ಕಳು ಎಂಬ ಎರಡು ಆಂಗ್ಲ ಕಾದಂಬರಿಗಳ ಕುರಿತು ಸೊಗಸಾದ ವಿಶ್ಲೇಷಣೆ.
     ರಮೇಶ್ ರವರ ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿ ಬರುತ್ತಿದೆ.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*****************************************



ನಮಸ್ತೇ,
     ಅಹಂಕಾರಕ್ಕೆ ಉದಾಸೀನವೇ ಮದ್ದು ಎನ್ನುವ ಗಾದೆ ಮಾತಿನಂತೆ ಯಾವುದಕ್ಕೆ ಉದಾಸೀನತೆಯನ್ನು ತೋರಿಸಬೇಕು ಎನ್ನುವುದರ ಕುರಿತು ಬೆಳಕು ಚೆಲ್ಲಿದ ಲೇಖನ ಶಿಕ್ಷಣಾಧಿಕಾರಿಯವಾದ ಜ್ಞಾನೇಶ್ ಸರ್ ರವರಿಂದ. ಧನ್ಯವಾದಗಳು ಸರ್.
     ಬಿಳಿಗಿರಿ ರಂಗನ ಬೆಟ್ಟದ ಕುರಿತಾದ ಮಾಹಿತಿಯ ಜೊತೆಗೆ ಪ್ರವಾಸದ ಪ್ರಯೋಜನಗಳನ್ನು ಹಂಚಿಕೊಂಡಿದ್ದೀರಿ ಧನ್ಯವಾದಗಳು ಸರ್...
     ನನ್ನ ಭಾವ ಎನ್ನುವ ಪುಸ್ತಕದ ಪರಿಚಯಕ್ಕಾಗಿ ಧನ್ಯವಾದಗಳು ವಾಣಿಯಕ್ಕ.
ಎಲ್ಲರಿಗೂ ವಂದನೆಗಳು.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*****************************************



ಎಲ್ಲರಿಗೂ ನಮಸ್ಕಾರಗಳು,
     ಜೀವನಕ್ಕಾಗಿ ಪಂಚಶಿಖಾಮುನಿಗಳ ಸೂತ್ರಗಳ ಕುರಿತಾಗಿ ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರ ಲೇಖನ ಸೊಗಸಾಗಿತ್ತು.
     ಚಂಚಲ ಮನಸ್ಸನ್ನು ನಿಯಂತ್ರಿಸುವ ವಿಧಾನಗಳನ್ನು ಸರಳವಾಗಿ ತಿಳಿಸಿದ್ದಾರೆ ರಮೇಶ್ ಬಾಯಾರ್ ಸರ್ ರವರು. ಉತ್ತಮ ಸಂಚಿಕೆ.
     ಮೆಲಟೋನಿನ್ ಹಾರ್ಮೋನ್ ನ ಕಾರಣದಿಂದ ಉಂಟಾದ ನಿದ್ದೆಯೇ ನಿಜವಾದ ನಿದ್ದೆ. ನಿದ್ದೆಯ ಕುರಿತಾದ ವಿವರವಾದ ಲೇಖನ. ಧನ್ಯವಾದಗಳು ಸರ್....
      ಮದ್ಯವ್ಯಸನ ಪಾಲಕರ ಮಕ್ಕಳ ಸಮಸ್ಯೆಗಳು ಹಾಗೂ ಅದಕ್ಕಿರುವ ಪರಿಹಾರಗಳನ್ನು ವಿವರವಾಗಿ ತಿಳಿಸಿದ್ದಾರೆ ಗಿರೀಶ್ ಸರ್ ರವರು. ಸಂದರ್ಭೋಚಿತ ಲೇಖನ. ಧನ್ಯವಾದಗಳು ಸರ್.
     ಎಲ್ಲರಿಗೂ ಚಿರಪರಿಚಿತವಾದ ಪಪ್ಪಾಯಿ ಗಿಡದ ಕುರಿತು ಅಗತ್ಯ ಮಾಹಿತಿಗಳು ಈ ಸಲದ ಸಂಚಿಕೆಯಲ್ಲಿ ಉತ್ತಮವಾಗಿ ಮೂಡಿ ಬಂದಿವೆ.
     ಎಸ್ ಎಸ್ ಎಲ್ ಸಿ ಯಲ್ಲಿ ಆಂಗ್ಲ ಭಾಷೆಯಲ್ಲಿ ಉತ್ತಮ ಅಂಕ ಗಳಿಸುವುದರ ಜೊತೆಗೆ ತೇರ್ಗಡೆ ಅಂಕಗಳನ್ನು ಸುಲಭವಾಗಿ ಹೇಗೆ ಪಡೆಯಬಹುದು ಎಂಬುದನ್ನು ಪ್ರೇಮಾ ಮೇಡಂರವರು ಬಹಳ ಚೆನ್ನಾಗಿ ತಿಳಿಸಿದ್ದಾರೆ.
     ಕೊಡಗು ಜಿಲ್ಲೆಯ ಮೃತ್ಯುಂಜಯ ಸ್ವಾಮಿ ದೇವಸ್ಥಾನದ ಸುಂದರ ಪರಿಸರದ ಸಂಪೂರ್ಣ ಮಾಹಿತಿ ಈ ಸಲದ ಪಯಣ ಸಂಚಿಕೆಯಲ್ಲಿ ಉತ್ತಮವಾಗಿತ್ತು. ಧನ್ಯವಾದಗಳು ಸರ್...
     ವಾಣಿಯಕ್ಕನವರ ಅಜ್ಜಮ್ಮನ ಅದ್ಭುತ ಯಂತ್ರಗಳು ಪುಸ್ತಕದ ಪರಿಚಯ ಸೊಗಸಾಗಿ ಮೂಡಿ ಬಂದಿದೆ.
     ರಮೇಶ್‌ರವರ ಈ ವಾರದ ಪದದಂಗಳ ಸಂಚಿಕೆ ತುಸು ಸುಲಭ ಅಂತ ಅನ್ನಿಸಿತು. ಸಂಚಿಕೆಗಾಗಿ ಧನ್ಯವಾದಗಳು ಸರ್....
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*****************************************



ನಮಸ್ತೇ,
     ಅತಿಯಾದರೆ ಅಮೃತವೂ ವಿಷ ಎಂಬಂತೆ ಎಲ್ಲವೂ ಹಿತಮಿತವಾಗಿದ್ದಾಗ ಜೀವನ ಸುಂದರ. ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರಿಂದ ಮಹಾಪಾಪ ಸುಂದರ ಲೇಖನ.
     ಮನೋಭಾವ ಅಥವಾ ಮನಸ್ಸಿನ ಶೌಚವೇ ಹೃದಯದ ಶೌಚ. ಶೌಚದ ವಿಧಗಳನ್ನು ಅರ್ಥವತ್ತಾಗಿ ತಿಳಿಸಿದ್ದೀರಿ. ಉತ್ತಮ ಲೇಖನ.
     ನಿದ್ದೆಯಲ್ಲಿ ಕನಸುಗಳು ಬೀಳಲು ಕಾರಣದ ಕುರಿತಾಗಿ ಬರೆಯಲು ಸರ್ ಗೆ ತಿಳಿಸಿದ್ದೆ. ಕನಸು ಬೀಳಲು ಕಾರಣ ಹಾಗೂ ಕನಸುಗಳ ವಿಧಗಳ ಕುರಿತಾಗಿ ವಿವರವಾಗಿ ತಿಳಿಸಿದ್ದೀರಿ ಧನ್ಯವಾದಗಳು ಸರ್...
     ಆತ್ಮೀಯ ಮಿತ್ರರಾದ ಪ್ರದೀಪ್ ಸರ್ ರವರು SSLC ಮಕ್ಕಳಿಗೆ ವಿಜ್ಞಾನ ವಿಷಯದ ಪರೀಕ್ಷಾ ತಯಾರಿಯ ಕುರಿತಾದ ಲೇಖನ ಅತ್ಯುತ್ತಮವಾಗಿತ್ತು ಧನ್ಯವಾದಗಳು ಸರ್.....
     ಅಬ್ಬಾ... ನೋಡಲು ಸಪೂರವಾದರೂ ಅದೆಷ್ಟು ಪೋಷಕಾಂಶಗಳ ಆಗರ ಈ ನುಗ್ಗೆಕಾಯಿ. ನುಗ್ಗೆಯ ಕುರಿತಾದ ಈ ವಾರದ ಲೇಖನ ಬಹಳ ಸೊಗಸಾಗಿತ್ತು ಮೇಡಂ.
     SSLC ಪರೀಕ್ಷೆಯಲ್ಲಿ ಕನ್ನಡದಲ್ಲಿ ಗರಿಷ್ಠ ಹಾಗೂ ಕನಿಷ್ಠ ಅಂಕಗಳನ್ನು ಪಡೆಯಲು ಕಿವಿಮಾತಿನಂತಿದೆ ತಮ್ಮ ಲೇಖನ. ಧನ್ಯವಾದಗಳು ಜ್ಯೋತಿ ಮೇಡಂ.
     ಬಂಡೀಪುರ ಅಭಯಾರಣ್ಯದ ಕುರಿತಾದ ವಿವರವಾದ ಮಾಹಿತಿ ಈ ಸಲದ ಪಯಣ ಸಂಚಿಕೆಯಲ್ಲಿ ಸೊಗಸಾಗಿ ಮೂಡಿ ಬಂದಿದೆ.
     ಗೊಗ್ಗಯ್ಯ ಎಲ್ಲಿ ಪುಸ್ತಕದ ಪರಿಚಯ ಉತ್ತಮವಾಗಿತ್ತು. ಧನ್ಯವಾದಗಳು ವಾಣಿಯಕ್ಕ.
     ಪದದಂಗಳ ಸಂಚಿಕೆಯ ಪದಗಳ ಹುಡುಕಾಟ ಚೆನ್ನಾಗಿ ಮುಂದುವರಿಯುತ್ತಿದೆ.
     ಶಿಕ್ಷಕರ ಡೈರಿಯಲ್ಲಿ ಕಲಿಸುವುದು ಮಾತ್ರವಲ್ಲ ಮಕ್ಕಳು ಕಲಿಯುವಂತೆ ಮಾಡುವುದು ಶಿಕ್ಷರ ಜವಾಬ್ದಾರಿ ಎನ್ನುವುದನ್ನು ಮಕ್ಕಳೊಂದಿಗೆ ಆದ ತಮ್ಮ ಅನುಭವದ ಮಾತುಗಳ ಮೂಲಕ ಸೊಗಸಾಗಿ ತಿಳಿಸಿದ್ದಾರೆ.
.................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*****************************************


ನಮಸ್ತೇ,
     ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ ಎನ್ನುವ ಸರ್ವಜ್ಞನ ನುಡಿಯಂತೆ ಬುದ್ಧನಂತಹ ಪವಿತ್ರ ಜ್ಞಾನಿಯಿಂದ ಪಟಾಚಾರ ತನ್ನ ಎಲ್ಲಾ ದುಃಖವನ್ನು ಮರೆತು ಹೇಗೆ ಜ್ಞಾನಿಯಾದಳು ಎನ್ನುವುದನ್ನು ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರು ಬಹಳ ಸುಂದರವಾಗಿ ತಿಳಿಸಿದ್ದಾರೆ.
     ಅಹಂಕಾರ ನಾಶಕ್ಕೆ ಮೂಲ. ಮನುಷ್ಯ ಸೊಕ್ಕಿನಿಂದ ತುಂಬಿದಾಗ ಆತ ಹೇಗೆ ಅಧೋಗತಿಗಿಳಿಯುತ್ತಾನೆ ಎಂಬುವನ್ನು ಬಹಳ ಸೊಗಸಾಗಿ ತಿಳಿಸಿದ್ದೀರಿ ಸರ್..... 
     ನಿದ್ದೆಯಲ್ಲಿ ನಡಿಗೆಗೆ ಕಾರಣ ತಿಳಿಯಿತು. ನಿದ್ದೆಯಲ್ಲಿ ಮಾತನಾಡುವ ಕುರಿತಾಗಿ ಮುಂದಿನ ಸಂಚಿಕೆಗೆ ಕಾಯುವಾ... ಉತ್ತಮ ಸಂಚಿಕೆ.
    ಗಜನಿಂಬೆ ಗಿಡದ ಕುರಿತಾದ ಮಾಹಿತಿ ಉತ್ತಮವಾಗಿತ್ತು ಮೇಡಂ.
     ಕೂಲ್ ಲಿಪ್ ನಿಂದ ಮಕ್ಕಳ ಮೇಲಾಗುವ ದುಷ್ಪರಿಣಾಮಗಳು, ಕಾರಣ ಹಾಗೂ ಪರಿಹಾರೋಪಾಯಗಳನ್ನು ವಿವರವಾಗಿ ನೀಡಿದ್ದಾರೆ ಗಿರೀಶ್ ಸರ್ ರವರು ತಮ್ಮ ಸಂಚಿಕೆಯಲ್ಲಿ. ಧನ್ಯವಾದಗಳು ಸರ್.
     ಪಯಣ ಸಂಚಿಕೆಯಲ್ಲಿ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಕುರಿತಾದ ಮಾಹಿತಿ ಚೆನ್ನಾಗಿ ಮೂಡಿ ಬಂದಿದೆ. ಧನ್ಯವಾದಗಳು ಸರ್..
     ಟಿಕೆಟ್ ಇಲ್ಲ ಪ್ರಯಾಣ ನಿಲ್ಲಲ್ಲ ಪುಸ್ತಕದ ಪರಿಚಯ ಸೊಗಸಾಗಿತ್ತು ವಾಣಿಯಕ್ಕ.
    ರಮೇಶ್ ಸರ್ ರವರ ಪದಗಳ ಹುಡುಕಾಟದ ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿ ಬಂದಿದೆ.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*****************************************



ನಮಸ್ತೇ,
     ನೈಜ ಪ್ರೇಮ ಪ್ರೀತಿ ಹಾಗೂ ಅಂತಃಕರಣ ತುಂಬಿದ ಮನಸು ನಿಜವಾದ ರಸಾನುಭವವನ್ನು ಹೊಂದಿರುತ್ತದೆ ಎಂಬುದನ್ನು ಸುಂದರವಾದ ಕಥೆಗಳ ಮೂಲಕ ಶಿಕ್ಷಣಾಧಿಕಾರಿಗಳಾದ ಶ್ರೀ ಜ್ಞಾನೇಶ್ ಸರ್ ಅವರು ಸೊಗಸಾಗಿ ನಿರೂಪಿಸಿದ್ದಾರೆ. ಧನ್ಯವಾದಗಳು ಸರ್.
     ಹೃದಯದೊಳಗೆ ಧರ್ಮ ಕ್ಷೇತ್ರದ ಬದಲು ಕುರುಕ್ಷೇತ್ರವನ್ನು ನಿರ್ಮಿಸಿದಾಗ ಆಗುವ ಅನಾಹುತಗಳ ಬಗ್ಗೆ ರಮೇಶ್ ಸರ್ ರವರು ಬಹಳ ಸುಂದರವಾಗಿ ವಿವರಿಸಿದ್ದಾರೆ.
    ಸೆವೆನ್ ಸ್ಟಾರ್ ಎನ್ನುವ ಕಳ್ಳಿ ಗಿಡದ ಸುಂದರ ಹೂವಿರುವ ಸಸ್ಯದ ಪರಿಚಯ ತುಂಬಾ ಸೊಗಸಾಗಿ ಮೂಡಿ ಬಂದಿದೆ ವಿಜಯ ಮೇಡಂ.
     ಉಡುಪಿ ಜಿಲ್ಲೆಯ ಕಾಜ್ರಳ್ಳಿ ವನದುರ್ಗಾ ದೇವಸ್ಥಾನದ ಸುಂದರ ಪರಿಚಯ ರಮೇಶ್ ಸರ್ ರವರಿಂದ ತಮ್ಮ ಪಯಣ ಸಂಚಿಕೆಯಲ್ಲಿ.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*****************************************




ಎಲ್ಲರಿಗೂ ನಮಸ್ಕಾರಗಳು,
     ಸಾಧನೆಯಿಂದ ಸಾಧ್ಯವಾಗದ್ದನ್ನು ಸಾಧಿಸಬಹುದು. 'ಸಾಧ್ಯ ಮತ್ತು ಸಾಧನೆ' ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರಿಂದ ಉತ್ತಮ ಲೇಖನ.
     ಮನೆಯಲ್ಲಿ ಬಡತನವಿದ್ದರೂ ಕಲಿಕೆಗೆ ಬಡತನವಿಲ್ಲ ಎಂಬುದನ್ನು ಬಾಂಧವಿ ಎನ್ನುವ ಬಾಲಕಿಯ ಉದಾಹರಣೆಯೊಂದಿಗೆ ಸೊಗಸಾಗಿ ನಿರೂಸಿದ್ದೀರಿ ಸರ್. ಈ ಲೇಖನ ಇತರ ವಿದ್ಯಾರ್ಥಿಗಳಿಗೂ ಅನುಕರಣೀಯವಾಗಲಿ ಎಂಬುದೇ ನನ್ನ ಆಶಯ.
     ಈ ವಾರದ ನಿಷ್ಪಾಪಿ ನಸ್ಥಗಳು ಸಂಚಿಕೆಯಲ್ಲಿ ಸ್ಪೈಡರ್ ಪ್ಲಾಂಟ್ ನ ಕುರಿತಾದ ಮಾಹಿತಿ ತುಂಬಾ ಯ ಖುಷಿ ನೀಡಿತು. ಧನ್ಯವಾದಗಳು ಮೇಡಂ.
     ಪಯಣ ಸಂಚಿಕೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶಿಲುಬೆ ಬೆಟ್ಟದ ಐತಿಹಾಸಿಕ ಮಾಹಿತಿ ಚೆನ್ನಾಗಿ ಮೂಡಿ ಬಂದಿದೆ.
     ದೇಶದ ವಿವಿಧ ರಾಜ್ಯಗಳ ಪ್ರದೇಶಗಳ ಕುರಿತಾದ ಪುಟಾಣಿ ಭಾರತೀಯರು ಸುಂದರ ಪುಸ್ತಕ ಪರಿಚಯ ಸೊಗಸಾಗಿತ್ತು. ವಾಣಿಯಕ್ಕ.
     ರಮೇಶ್ ರವರ ಪದದಂಗಳ ಸಂಚಿಕೆ ಉತ್ತಮವಾಗಿ ಮುಂದುವರಿಯುತ್ತಿದೆ. ಧನ್ಯವಾದಗಳು ಸರ್....
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*****************************************



ನಮಸ್ತೇ,
     ದೇವರು ನಮಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಅದನ್ನು ಸಂತೋಷದಿಂದ ಸ್ವೀಕರಿಸಿ ಬದುಕಲು ಕಲಿಯಬೇಕು. ಸುಂದರ ಕಥೆ ಹಾಗೂ ಉದಾಹರಣೆಗಳೊಂದಿಗೆ ಮನದಲ್ಲಿ ಶಾಂತಿಯಿಂದ ಬದುಕುವ ಬಗ್ಗೆ ಬಹಳ ಸುಂದರವಾಗಿ ತಿಳಿಸಿದ್ದೀರಿ. ಧನ್ಯವಾದಗಳು ಸರ್. 
     ಕಲ್ಪವೃಕ್ಷ - ತೆಂಗಿನಕಾಯಿಯ ಮಹತ್ವದ ಕುರಿತು ವಿವರವಾದ ಮಾಹಿತಿ ರಮೇಶ್ ಬಾಯಾರ್ ಸರ್ ರವರಿಂದ ಸೊಗಸಾಗಿ ಮೂಡಿ ಬಂದಿದೆ.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*****************************************




ನಮಸ್ತೇ,
     ದೇಹ, ಮನಸ್ಸು, ಬುದ್ಧಿ ಗಳಿಂದ ಜೀವನಾನುಭವ ಪಡೆಯುವ ಕಲೆಯ ಕುರಿತಾದ ಸುಂದರ ಲೇಖನ ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ್ ಸರ್ ರವರಿಂದ.
     ಡೆಸರ್ಟ್ ರೋಸ್ ಎನ್ನುವ ಮರುಭೂಮಿ ಗಿಡದ ಕುರಿತಾಗಿ ವಿವರವಾದ ಮಾಹಿತಿ ಈ ಸಲದ ನಿಷ್ಟಾಪಿಸಸ್ಯಗಳ ಸಂಚಿಕೆಯಲ್ಲಿ ಉತ್ತಮವಾಗಿ ಮೂಡಿ ಬಂದಿದೆ.
      ಬೃಹದಾಕಾರದ ಸಾಗರದ ರೀತಿಯಲ್ಲಿ ಕಂಡುಬರುವ ಹುಬ್ಬಳಿಯ ನೀರಸಾಗರ ಕೆರೆಯ ಕುರಿತಾದ ಉತ್ತಮ ಮಾಹಿತಿ ರಮೇಶ್ ರವರ ಪಯಣ ಸಂಚಿಕೆಯಲ್ಲಿ.
     ಹಾರು-ಬೀಳು ಕವನಗಳು ಎನ್ನುವ ಸುಂದರ ಕವನಗಳ ಪುಸ್ತಕದ ಪರಿಚಯಕ್ಕಾಗಿ ಧನ್ಯವಾದಗಳು ವಾಣಿಯಕ್ಕ.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*****************************************


ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ.. ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
*****************************************



Ads on article

Advertise in articles 1

advertising articles 2

Advertise under the article