-->
ಮಕ್ಕಳ ಕವನಗಳು : ಸಂಚಿಕೆ - 68, ಕವನ ರಚನೆ : ಬಾಲಕೃಷ್ಣ ಬಿ, ದ್ವೀತಿಯ ಪಿಯುಸಿ

ಮಕ್ಕಳ ಕವನಗಳು : ಸಂಚಿಕೆ - 68, ಕವನ ರಚನೆ : ಬಾಲಕೃಷ್ಣ ಬಿ, ದ್ವೀತಿಯ ಪಿಯುಸಿ

ಮಕ್ಕಳ ಕವನಗಳು : ಸಂಚಿಕೆ - 68
ಕವನ ರಚನೆ : ಬಾಲಕೃಷ್ಣ ಬಿ
ದ್ವೀತಿಯ ಪಿಯುಸಿ (ಗಣಕ ವಿಜ್ಞಾನ)
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು
ಸುಬ್ರಹ್ಮಣ್ಯ, ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

ಮೌನಿಯಾಗಿರುವೆ ಮಾನವ 
ಏಕೆಂದು ನಾ ಕೇಳಲೇ 
ಹೇಳುವೆಯಾ ನಿನ್ನ ಉತ್ತರ 
ನಾ ಕೇಳ ಬಯಸುವೆ 
ಒಂಟಿಯಾಗಿ ಕುಳಿತಿರುವೆ ಏನೆಂದು ಕೇಳಲೇ 
ಏನಾಯ್ತು ನಿನಗೆ 
ತುಂಬಾ ನೀ ಬೇಸತ್ತು ಹೋಗಿರುವೆ ||೧||

ಖುಷಿಯಲ್ಲಿ ತೇಲುತ್ತಾ ಇಲ್ಲವಲ್ಲ 
ದುಃಖದ ಕಡಲಲ್ಲಿ ಸಾಗುತ್ತಿರುವೆಯಲ್ಲ 
ಏನಾಯ್ತು ನಿನಗೆ ಏನೆಂದು ನಾ ಕೇಳಲೇ 
ಉತ್ತರವ ಕೊಡುವೆಯಾ ನೀ 
ತುಂಬಾ ದುಃಖದಲ್ಲಿರುವೆ ||೨||

ಒಂಟಿಯಾಗಿ ಕುಳಿತು ಏಕೆ ನೀ ಅಳುವೆ 
ಏನೆಂದು ನಾ ಕೇಳಲೇ
ಬಂದು ನೀ ದಯವಿಟ್ಟು 
ಎನ್ನ ಬಳಿ ಹೇಳುವೆಯಾ 
ಒಂಟಿಯಾಗಿರುವುದನ್ನು ನೀ ಬಿಡುವೆಯಾ||೩||
................................................ ಬಾಲಕೃಷ್ಣ ಬಿ
ದ್ವೀತಿಯ ಪಿಯುಸಿ (ಗಣಕ ವಿಜ್ಞಾನ)
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು
ಸುಬ್ರಹ್ಮಣ್ಯ, ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************

ಓ ಓ ಹಸಿರೇ ಕೇಳು ನನ್ನ ಉಸಿರೇ 
ಎಲ್ಲೆಲ್ಲಿಯೂ ನೀ ಇರುವೆ
ಕಣ ಕಣ ದಲ್ಲೂ ನೀ ಹಸಿರಸಿರಾಗಿರುವೆ

ಪ್ರಕೃತಿಯ ಸೊಬಗನ್ನು ನೀ ಧರಿಸಿರುವೆ
ಹೇ ಹಸಿರೇ ನೀ ಎಲ್ಲರಿಗೂ ಉಸಿರಾಗಿರುವೆ 

ಕಾಂತಾರದ ವೈಯಾರವು ನೀ ಆಗಿರುವೆ
ನೀ ಇಲ್ಲದೆ ಕಾಂತರವು ಕುರೂಪಾಗಿದೆ 

ಓ ಓ ಹಸಿರೇ ನೀ ನನ್ನ ಕವನದ 
ಶೀರ್ಷಿಕೆಯಾಗಿರುವೆ
ನಾ ನಿನ್ನ ಹೇಗೆ ವರ್ಣಿಸಲಿ ಅಷ್ಟು ನೀ ಚಂದವಾಗಿರುವೆ...!!
................................................ ಬಾಲಕೃಷ್ಣ ಬಿ
ದ್ವೀತಿಯ ಪಿಯುಸಿ (ಗಣಕ ವಿಜ್ಞಾನ)
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು
ಸುಬ್ರಹ್ಮಣ್ಯ, ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************

ಮೌನಿಯಾದ ಮನವು 
ಅಳಲು "ಪ್ರಾರಂಭಿಸಿತು"
ದುಃಖದ ಭಾವನೆಯು 
ಕಣ್ಣೀರಿನ ಸಾಗರದಲ್ಲಿ "ತೇಲಾಡುತ್ತಿತ್ತು"
ಒಂಟಿ ಮನಸು ಯೋಚಿಸಿತು 
ನಾ ಏಕೆ ಒಬ್ಬಂಟಿಯಾಗಿರುವೆ ??...
ಕಣ್ಣೊಂದು ಉತ್ತರಿಸಿತು  
ನೀ ತುಂಬಾ ಮೌನಿಯಾಗಿರುವೇ !!!...
ಒಂಟಿ ಮನವು ಕೇಳತೊಡಗಿತು
ನಾ ಯಾಕೆ ದುಖಿಸುತ್ತಿರುವೆ ??....
ಕಣ್ಣೊಂದು ಉತ್ತರಿಸಿತ್ತು 
ನಿನ್ನೊಂದಿಗೆ ಯಾರು ಇಲ್ಲಾಯೆಂದು 
ನೀ ತುಂಬಾ ನೊಂದಿರುವೆ !!....
ಒಂಟಿ ತನದಲ್ಲಿ ಬೇಸತ್ತು ಹೋದ ಮನ 
ಕಣ್ಣೀರಿನ ಸಾಗರದಲ್ಲಿ ಮುಳುಗಿದ ನಯನ
................................................ ಬಾಲಕೃಷ್ಣ ಬಿ
ದ್ವೀತಿಯ ಪಿಯುಸಿ (ಗಣಕ ವಿಜ್ಞಾನ)
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು
ಸುಬ್ರಹ್ಮಣ್ಯ, ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************

ಧೂಮಪಾನದಿಂದ ತೇಲಾಡುತ್ತಿರುವುದು  
ಮಾನವ ಸಂಕುಲ 
ಅದರ ಅರಿವು ಯಾಕೆ ಇಲ್ಲ ಜಗಕ್ಕೆಲ್ಲ...!!

ರೋಗಗಳ ಸಮುದ್ರವೇ ಬರುವುದು ಇದರಿಂದ 
ಅಪಾಯದ ಮಳೆಯು ಸುರಿಯುವುದು ಧೂಮಪಾನದಿಂದ....

ಬಿಟ್ಟು ಬಿಡು ಮನುಜ ಧೂಮಪಾನವನ್ನ 
ದುಃಖಿಸುತ್ತಿರುವರು ನಿನ್ನ ಕುಟುಂಬವು 
ಹೇಗೆ ಜೀವ ಉಳಿಸುವುದನ್ನ....!!?
................................................ ಬಾಲಕೃಷ್ಣ ಬಿ
ದ್ವೀತಿಯ ಪಿಯುಸಿ (ಗಣಕ ವಿಜ್ಞಾನ)
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು
ಸುಬ್ರಹ್ಮಣ್ಯ, ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************   

ಹೊಸ ವರುಷ ಎಂದೆಂದಿಗೂ ಬಾಳು ಹರುಷ
ಹೊಸ ವರುಷವು ಬರುತ್ತಿಹುದು 
ಹೊಸತನದ ಹರುಷ ತರುತ್ತಿಹುದು 
ಹಳೆತನದ ಬೇರಿಗೆ 
ಹೊಸ ತನದ ಚಿಗುರು ಮನೆಯಾಗಿರಲಿ 
ಹಳೆ ನೆನಪು, ಹಳೆ ದುಃಖಗಳಿಗೆ
ಹೊಸತನದ ವರುಷವು ಸಿಹಿಯಾಗಿರಲಿ|| ೧||

ಹೊಸತನದ ಹಚ್ಚ ಹಸಿರಿನಲ್ಲಿ 
ಹಳೆತನದ ಎಲೆಗಳು ಉದುರಲಿ 
ಬದುಕನ್ನು ಖುಷಿಯಿಂದ 
ನೀ ಸದಾ ಎದುರಿಸುತ್ತಿರಲಿ
ನೆನಪು ಮಾತ್ರ ಎಂದಿಗೂ ಶಾಶ್ವತವಾಗಿರಲಿ 
ದುಃಖಗಳನ್ನು ಮರೆತು 
ಆನಂದದ ಸಾಗರದಲ್ಲಿ ಮುಳುಗುತ್ತಿರಲಿ
ಎಂದೆಂದಿಗೂ ಬಾಳು 
ಬೆಳಗುತ್ತಿರಲಿ, ಬೆಳಗುತ್ತಿರಲಿ ||೨||

ಹೊಸ ವರುಷಕೆ ಕಾಲಿಟ್ಟು 
ಹಳೆ ನೆನಪುಗಳು ನೆನಪಾಗಿಟ್ಟು
ಹೊಸ ಬಾಳು ನಿನಗೆ ಸಂತೋಷವನ್ನು ಕೊಟ್ಟು
ನೀ ಕಳೆಯುವ ದಿನಗಳು ಶುಭವಾಗಿರಲಿ
ಎಲ್ಲರಿಗೂ ನೀ 
ಹರುಷವ ಕೊಡುತ್ತ ಬರುತ್ತಿರಲಿ ||೩||
................................................ ಬಾಲಕೃಷ್ಣ ಬಿ
ದ್ವೀತಿಯ ಪಿಯುಸಿ (ಗಣಕ ವಿಜ್ಞಾನ)
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು
ಸುಬ್ರಹ್ಮಣ್ಯ, ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************

ಮುಂಗಾರು ಮಳೆಯಲ್ಲಿ 
ತಂಗಾಳಿ ತಂಪಿನಲ್ಲಿ 
ಕುಳಿತೇ ನಾ ಆ ಉದ್ಯಾನವನದಲ್ಲಿ
ಎಂಥಾ ಅಂದದ ಸಮಯದಲ್ಲಿ ||೧||

ನಿಶಬ್ದ ಶಬ್ದದಲ್ಲಿ ಮನಸ್ಸು 
ತೇಲಾಡತೊಡಗಿತು ಆನಂದದಲ್ಲಿ
ಪ್ರಕೃತಿಯ ಸೊಬಗು ಕಾಣುತ್ತಿಹುದು ಅಲ್ಲಿ 
ಖುಷಿಯ ಭಾವನೆಯೂ ಉಕ್ಕಿ 
ಹರಿಯುತ್ತಿದೆ ಮನದಲ್ಲಿ||೨||

ಚಂದದ ಅಂದದಲ್ಲಿ ಕಂಗೊಳಿಸುತ್ತಿದೆ
ಚಿಟ್ಟೆಯ ಗುಂಪು ಅಲ್ಲಿ ಬರುತ್ತಿದೆ 
ಸುಂದರವಾದ ಚಿಟ್ಟೆಯು ಬಂದು 
ಕೈಯಲ್ಲಿ ಕುಳಿತಿದೆ 
ನಗುವೊಂದು ಎನ್ನ ಮೊಗದಲ್ಲಿ 
ಅದು ತರಿಸುತ್ತಿದೆ ||೩
................................................ ಬಾಲಕೃಷ್ಣ ಬಿ
ದ್ವೀತಿಯ ಪಿಯುಸಿ (ಗಣಕ ವಿಜ್ಞಾನ)
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು
ಸುಬ್ರಹ್ಮಣ್ಯ, ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************

ಬಣ್ಣ ಬಣ್ಣದ ಚಿಟ್ಟೆಯು ಹಾರುತ್ತಿದೆ
ಸೌಂದರ್ಯದ ಲೋಕದಲಿ 
ಅದರ ಚಂದವು ತೋರಿಸಿದೆ 
ಎಲ್ಲರ ಕಣ್ಣಂಚಿನಲಿ 
ಹಾರುತ ಹಾರುತ ನಲಿಯುತ ನಲಿಯುತ 
ಹಾರುತ್ತಿದೆ ಆ ಬಣ್ಣದ ಚಿಟ್ಟೆ 
ಹಿಡಿಯಲು ಹೋದರೆ ಕೈಜಾರಿ ಬಿದ್ದೆ 
ಎದ್ದು ನೋಡುವಷ್ಟರಲ್ಲಿ
ವಾಪಸು ಬಂದಿತು ಬಣ್ಣದ ಚಿಟ್ಟೆ
ಕೊನೆಗೂ ನಾ ಅದನ್ನು ಹಿಡಿದು ಬಿಟ್ಟೆ 
ಚಿಟ್ಟೆಯು ಸಿಕ್ಕಿದ ಖುಷಿಯಲ್ಲಿ ನಾ ಸಂತೋಷವಾಗಿಬಿಟ್ಟೆ....!!!
................................................ ಬಾಲಕೃಷ್ಣ ಬಿ
ದ್ವೀತಿಯ ಪಿಯುಸಿ (ಗಣಕ ವಿಜ್ಞಾನ)
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು
ಸುಬ್ರಹ್ಮಣ್ಯ, ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************

Ads on article

Advertise in articles 1

advertising articles 2

Advertise under the article