ಮಕ್ಕಳ ಕವನಗಳು : ಸಂಚಿಕೆ - 67, ಕವನ ರಚನೆ : ತ್ರಿಶಾ ವಿ. ಜಿ, 9ನೇ ತರಗತಿ
Thursday, July 9, 2026
Edit
ಮಕ್ಕಳ ಕವನಗಳು : ಸಂಚಿಕೆ - 67
ಕವನ ರಚನೆ : ತ್ರಿಶಾ ವಿ. ಜಿ
9ನೇ ತರಗತಿ
ಬೆಥನಿ ಪದವಿ ಪೂರ್ವ ಕಾಲೇಜು ನೂಜಿಬಾಳ್ತಿಲ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕೊಚ್ಚಿ ಹೋಯಿತು ಭೂಮಿಯ ಕಳೆ
ಹಗಲೆಲ್ಲ ಸುಡು ಬಿಸಿಲು
ರಾತ್ರಿಯಾಗುವಷ್ಟರಲ್ಲಿ ಮಿಂಚು ಸಿಡಿಲು
ಜೋರಾಗಿ ಬೀಸಿತು ತಂಪುಗಾಳಿ
ಸ್ನಾನದ ನಂತರ ತುಂಬ ಚಳಿ
ಕೆರೆಗಳಲ್ಲಿ ನೀರು ತುಂಬಿ ತುಳುಕಿತು
ನದಿಗಳಲ್ಲಿ ನೀರು ಹರಿಯಿತು
ಪರಿಶುದ್ಧ ವಾಯಿತು ಭುವನ
ಸಂತೋಷದೀ ಸಂಭ್ರಮಿಸಿತು ಕಾನನ
ಓಂ ದೇವ ವರುಣಾ
ನಿಮ್ಮ ಪಾದಗಳಿಗೆ ನನ್ನ ನಮನ
................................................ ತ್ರಿಶಾ ವಿ. ಜಿ
9ನೇ ತರಗತಿ
ಬೆಥನಿ ಪದವಿ ಪೂರ್ವ ಕಾಲೇಜು ನೂಜಿಬಾಳ್ತಿಲ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************
ವಿವಿಧ ಕಲೆಗಳ ಬೀಡು
ಸುತ್ತಮುತ್ತಲೂ ಕಾಡು
ಎಷ್ಟು ಚೆಲುವಿದೆ ನೋಡು
ಜಗತ್ಪ್ರಸಿದ್ಧ ಯಕ್ಷಗಾನ
ಜಗ ಮೆಚ್ಚಿದ ಹುಲಿ ನರ್ತನ
ದೇವಸ್ಥಾನಗಳೊಂದಿಗೆ ದೈವಸ್ಥಾನ
ಇದೇ ನಾಗದೇವರ ತಾಣ
ಶ್ರೀ ಮಂಗಳಾದೇವಿಯ ಮಡಿಲಿದೆ
ದೈವ ದೇವರ ಶಕ್ತಿಯಿದೆ
ಕಡಲ ಜನರ ಭಕ್ತಿಯಿದೆ
ಮೀನುಗಾರಿಕೆ ನಮ್ಮದೆ
ತುಳುವರಿಗೆ ವಿಶೇಷ ತಿಂಗಳು ಆಟಿ
ತುಳುನಾಡಿಗೆ ಯಾವುದು ಇಲ್ಲ ಸರಿಸಾಟಿ
ಶ್ರೀ ಪರಶುರಾಮನ ಆಶಿರ್ವಾದದಿ
ಬೆಳೆದು ನಿಂತ ಈ ಸಂಸ್ಕೃತಿ.
................................................ ತ್ರಿಶಾ ವಿ. ಜಿ
9 ನೇ ತರಗತಿ
ಬೆಥನಿ ಪದವಿ ಪೂರ್ವ ಕಾಲೇಜು ನೂಜಿಬಾಳ್ತಿಲ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************
ರಾಧಾ ರುಕ್ಮಿಣಿಯರ ಪ್ರಿಯನಾಗಿ
ದನಕಾಯೊ ಗೋಪಾಲಕನಾಗಿ
ನಾನು ಶರಣಾಗುವೆ ನಿನಗಾಗಿ
ವಸುದೇವ ದೇವಕಿಯ ಸುತನಾದೆ
ಮಾವ ಕಂಸನ ಮೃತ್ಯುವಾದೆ
ಹದಿನಾರು ಸಾವಿರ ಮಡದಿಯರ ವರಿಸಿದೆ
ಭಗವದ್ಗೀತೆಯ ಜಗಕೆ ಸಾರಿದೆ
ಗೆಳೆತನದ ಪ್ರತೀಕ ನಿನ್ನ ಸುಧಾಮರ ಬಂಧ
ಪ್ರೀತಿಯ ಸಂಕೇತ ರಾಧಾಕೃಷ್ಣರ ಸಂಬಂಧ
ಸಾಧುಗಳಿಗೆ ಕೇಳಿಸಿತು ಕೊಳಲಿನ ನಾದ
ದೈತ್ಯರಿಗೆ ಕೇಳಿಸಿತು ಪಾಂಚಜನ್ಯದ ನಾದ
ಪಾಂಡವ ರಕ್ಷಕ ಪಾಪ ವಿನಾಶಕನೇ
ಓ ನೀಲವರ್ಣನೇ
ನಾ ನಂಬಿರುವೆ ನಿನ್ನನೇ
ದಯೆತೋರಿ ರಕ್ಷಿಸು ಕರುಣಸಾಗರನೇ
................................................ ತ್ರಿಶಾ ವಿ. ಜಿ
9 ನೇ ತರಗತಿ
ಬೆಥನಿ ಪದವಿ ಪೂರ್ವ ಕಾಲೇಜು ನೂಜಿಬಾಳ್ತಿಲ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************
ನಿನ್ನ ನಡೆ ನುಡಿ ಅಂದ ಚೆಂದ
ಬೇಗ ಮಲಗು ಓ ಮುಕುಂದ
ನಾ ಲಾಲಿಸುವೆ ನಿನ್ನ ಮುದದಿಂದ
ನಿದ್ರಾದೇವಿಯು ಬರುತ್ತಿದ್ದಾಳೆ
ಹೊಸ ಸ್ವಪ್ನವ ತರುತ್ತಿದ್ದಾಳೆ
ಶ್ರೀ ದೇವಿಯೇ ಹೇಳುತ್ತಿದ್ದಾಳೆ
ಮಲಗು ಕಂದ ಇದ ಕೇಳುತ್ತಲೇ
ನನ್ನ ಜೋಗುಳವೇ ನಿನಗೆ ಸ್ಪೂರ್ತಿ
ತಂದೆ ತಾಯಿಗೆ ತಾ ನೀನು ಕೀರ್ತಿ
ಬೆನ್ನ ಹಿಂದೆ ಸದಾ ಇದ್ದಾನೆ ಮಾರುತಿ
ಸಿಗಲಿ ನಿನಗೆ ಶ್ರೀಕೃಷ್ಣನಂತಹ ಸಾರಥಿ
ಕತ್ತಲೆ ಕವಿದಿದೆ ಬಾನಿನಲಿ
ನಗುವಿದೆ ನೋಡು ಚಂದಮಾಮನ ಮುಖದಲ್ಲಿ
ನಿನ್ನ ಕನಸುಗಳು ನನಸಾಗಲಿ
ಎಂದು ಹಾಡುವೆ ಈ ಜೋಗುಳದಲಿ
9 ನೇ ತರಗತಿ
ಬೆಥನಿ ಪದವಿ ಪೂರ್ವ ಕಾಲೇಜು ನೂಜಿಬಾಳ್ತಿಲ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************