-->
ಪ್ರೀತಿಯ ಪುಸ್ತಕ : ಸಂಚಿಕೆ - 214

ಪ್ರೀತಿಯ ಪುಸ್ತಕ : ಸಂಚಿಕೆ - 214

ಪ್ರೀತಿಯ ಪುಸ್ತಕ
ಸಂಚಿಕೆ - 214
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ     


                  ಬಾರೋ ಬಾರೋ ಮಳೆರಾಯ
ಪ್ರೀತಿಯ ಮಕ್ಕಳೇ.. ನಿಮಗೆ ಪದ್ಯಗಳು ಇಷ್ಟವಾಗುತ್ತವೆಯೇ? ವೆಂಕಟೇಶ ಮೂರ್ತಿಯವರು ಮಕ್ಕಳಿಗಾಗಿ ಅದೆಷ್ಟೋ ಪದ್ಯಗಳನ್ನು ಕಥೆಗಳನ್ನು ಬರೆದಿದ್ದಾರೆ. ಈ ಪುಸ್ತಕದಲ್ಲಿ ಅವರು ಬರೆದ 140 ಪದ್ಯಗಳಿವೆ. ಅನೇಕ ವಿಚಾರಗಳ ಬಗ್ಗೆ ಇವೆ.  

“ಅಮ್ಮ ಅಮ್ಮ ಅಮ್ಮ ನಮ್ಮ ತೋಳಿಗೆ ರೆಕ್ಕೆ ಕಟ್ಟು, ಸೊಂಟಕೆ ಬೆಳ್ಳೆ ಪಟ್ಟಿ ಕಟ್ಟಿ ಹಕ್ಕಿ ಪುಕ್ಕ ಚುಚ್ಚು..” ಎಂಬ ಪದ್ಯ ಬಹಳ ಮಕ್ಕಳಿಗೆ ಪ್ರಿಯವಾಗಿತ್ತು. ಹಕ್ಕಿ ಪುಕ್ಕ ಚುಚ್ಚಿಕೊಂಡು ಮೇಲೆ ಮೇಲೆ ಹಾರುವ ಕನಸು ಕಾಣುವ ಮಗುವಿನ ಮಾತುಗಳಿವು. ಸುಂದರವಾಗಿ ರಾಗ ಹಾಕಿ ಹಾಡುವ ಹಾಗೆ ಇದೆ. ಈಗಾಗಲೇ ಇದು ಯೂಟ್ಯೂಬಿನಲ್ಲಿ ಸಿಗುತ್ತದೆ. ಇಂತಹ ಹಲವಾರು ಪದ್ಯಗಳಿಗೆ ರಾಗ ಹಾಕಬಹುದು ಕೂಡಾ. ತಮಾಷೆಯ ಹಾಡುಗಳೂ ಇವೆ. ಏನೋ ಹೊಸ ನೋಟ ಸಿಗವಂತಹ ಹಾಡುಗಳೂ ಇವೆ. ಮಕ್ಕಳು, ಪ್ರಾಣಿ, ಪಕ್ಷಗಳು ಹೇರಳವಾಗಿ ಇಲ್ಲಿವೆ. ಬೇರೆ ಬೇರೆ ಸಂದರ್ಭಕ್ಕೆ ನೀವು ಈ ಪದ್ಯಗಳನ್ನು ಬಳಸಬಹುದು. ಆನಂದಿಸಬಹುದು. 

ಲೇಖಕರು : ಎಚ್.ಎಸ್ ವೆಂಕಟೇಶಮೂರ್ತಿ
ಪ್ರಕಾಶಕರು: ಅಂಕಿತ ಪುಸ್ತಕ 
ಬೆಲೆ: ರೂ.120/- 

ಇದು 6-7 ತರಗತಿಯ ಮಕ್ಕಳು ಓದುವಂತಿದೆ. ಇತರ ಚಿಕ್ಕ ದೊಡ್ಡ ಮಕ್ಕಳಿಗೂ ಇಷ್ಟವಾಗಬಹುದು. 

ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಅಂಕಿತ ಪುಸ್ತಕ, ಬೆಂಗಳೂರು; ದೂರವಾಣಿ: 26617100/26617755; ankitapustaka@gmail.com
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
***************************************


Ads on article

Advertise in articles 1

advertising articles 2

Advertise under the article