-->
ಪ್ರೀತಿಯ ಪುಸ್ತಕ : ಸಂಚಿಕೆ - 213

ಪ್ರೀತಿಯ ಪುಸ್ತಕ : ಸಂಚಿಕೆ - 213

ಪ್ರೀತಿಯ ಪುಸ್ತಕ
ಸಂಚಿಕೆ - 213
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ     


                     ‘ಅಡಿ‘ ಎಂದರೆ ಎಷ್ಟುದ್ದ?   
ಪ್ರೀತಿಯ ಮಕ್ಕಳೇ... ಇದೊಂದು ವಿಶೇಷ ಕಥೆ. ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಮತ್ತು ರಾಣಿ ಇದ್ದರು. ರಾಣಿಯ ಜನುಮ ದಿನಕ್ಕೆ ಏನಾದರೂ ಉಡುಗೊರೆ ನೀಡಬೇಕು ಎಂದು ರಾಜನ ಆಸೆ. ಆಗ ಮಂಚ ನೀಡುವ ಯೋಚನೆ ಬಂತು. ಆದರೆ ಆ ಕಾಲದಲ್ಲಿ ಮಂಚದ ಬಗ್ಗೆ ಅದನ್ನು ತಯಾರಿಸುವ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಮಂಚ ಎಷ್ಟು ದೊಡ್ಡದಾಗಿರಬೇಕು ಎಂಬುದಂತೂ ಅಂದಾಜೇ ಇರಲಿಲ್ಲ. ಅಳತೆಯ ಕಲ್ಪನೆಯೇ ಇರಲಿಲ್ಲ. ಈಗ ನೀವು ಯೋಚಿಸಿ.. ಅವರು ಹೇಗೆ ಅಳತೆ ಗುರುತಿಸಿರಬಹುದು? ಪಾದದ ಹೆಜ್ಜೆ ಅಳತೆಯ ಆಧಾರದ ಮಂಚದ ಅಳತೆ ಗುರುತಿಸಿದರು. ಕತೆ ಓದಲು ಮಜಾವಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಈ ಕತೆ ಬರೆದಿದ್ದಾರೆ. ಸರಳವಾದ ಚಿತ್ರಗಳಿವೆ. 

ಲೇಖಕರು : ರೋಲ್ಫ್ ಮೈಲ್ಲರ್
ಅನುವಾದ: ಬಸವರಾಜ್ ಎಂ ಚಿಕ್ಕರೆಡ್ಡಿ
ಪ್ರಕಾಶಕರು: ಭಾರತ ಜ್ಞಾನ ವಿಜ್ಞಾನ ಸಮಿತಿ - ಕರ್ನಾಟಕ
ಬೆಲೆ: ರೂ.60/- 

ಇದು 6-7 ತರಗತಿಯ ಮಕ್ಕಳು ಓದುವಂತಿದೆ. ಇತರ ಚಿಕ್ಕ ದೊಡ್ಡ ಮಕ್ಕಳಿಗೂ ಇಷ್ಟವಾಗಬಹುದು. 
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಭಾರತ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು; bgvskarnataka@gmail.com
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
***************************************

Ads on article

Advertise in articles 1

advertising articles 2

Advertise under the article