-->
ಪ್ರೀತಿಯ ಪುಸ್ತಕ : ಸಂಚಿಕೆ - 211

ಪ್ರೀತಿಯ ಪುಸ್ತಕ : ಸಂಚಿಕೆ - 211

ಪ್ರೀತಿಯ ಪುಸ್ತಕ
ಸಂಚಿಕೆ - 211
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ     


                       ಪುಟಾಣಿ ಭಾರತೀಯರು 
ಪ್ರೀತಿಯ ಮಕ್ಕಳೇ... ದೇಶದ ವಿವಿಧ ಪ್ರದೇಶಗಳ ಕಥೆಗಳು ಮಾಹಿತಿಗಳು ತುಂಬಿಕೊಂಡಿವೆ ಈ ಪುಸ್ತಕದಲ್ಲಿ. ನೀವು ಮತ್ತೆ ಮತ್ತೆ ಪುಟ ತಿರುವಿ ನೋಡಬಹುದಾದ ಪುಸ್ತಕ ಇದು. ವೈವಿಧ್ಯಮಯ ಕಲೆ, ಸಂಗೀತ, ಇತಿಹಾಸದ ಸಂಗತಿಗಳು, ಪಾಕೃತಿಕ ಸಂಪನ್ಮೂಲಗಳು, ಜೀವನ ಶೈಲಿ, ಆಹಾರ ಕ್ರಮಗಳು, ಸಾಧನೆ ಮಾಡಿದವರು.. ಹೀಗೇ ಕುತೂಹಲ ಹುಟ್ಟಿಸುತ್ತಾ ಹೋಗುತ್ತದೆ. ನಿಮ್ಮನ್ನು ಭಾರತದ 16 ರಾಜ್ಯಗಳಲ್ಲಿ ಸುತ್ತಾಡಿಸುವ ಅನುಭವ ಸಿಗುತ್ತದೆ. ಅಂಡಮಾನ್ ನಿಕೋಬಾರಿನ ಜ್ವಾಲಾಮುಖಿಗಳು.. ಕರಾವಳಿಯ ತಿನಸುಗಳು.. ಒಡಿಶ್ಶಾದ ಚಿಲ್ಕಾ ಸರೋವರ ಮತ್ತು ಹಕ್ಕಿಗಳು.. ಉತ್ತರಖಂಡದ ಪರಿಸರ ಪ್ರೇಮಿ ಮಹಿಳೆಯರು.. ಎಲ್ಲಾ ಚಿತ್ರಗಳು ನಿಮ್ಮ ಕಣ್ಣ ಮುಂದೆ ಬರುತ್ತವೆ. 

ಲೇಖಕರು : ಪಿಕಾ ನಾನಿ (ದೀಪಿಕಾ ಮೂರ್ತಿ)
ಚಿತ್ರಗಳು: ಶ್ರೇಯಾ ಮೆಹ್ತಾ ಮತ್ತು ಭೀಮಸೇನ ನಾಯಿಕ
ಅನುವಾದ: ಡಾ. ಎಚ್.ವಿ. ಶ್ರೀನಿವಾಸ ಮೂರ್ತಿ ಮತ್ತು ಅಪೂರ್ವ ಬಿ.ಎ
ಪ್ರಕಾಶಕರು: ಅವ್ವಾ ಪುಸ್ತಕ
ಬೆಲೆ: ರೂ.265/-

ಇದು 10+ ವರುಷದ ಮಕ್ಕಳಿಗಾಗಿ ಇದೆ. ಚಿಕ್ಕವರಿಗೂ ಇನ್ನೂ ಸ್ವಲ್ಪ ದೊಡ್ಡವರಿಗೂ ಇಷ್ಟವಾಗಬಹುದು. 

ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಅವ್ವಾ ಪುಸ್ತಕ, awwabooks@gmail.com; www.awwabooks.com ಫೋನ್ ಸಂಖ್ಯೆ: +91 9739266465; 9945550869
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
***************************************

Ads on article

Advertise in articles 1

advertising articles 2

Advertise under the article