-->
ಪ್ರೀತಿಯ ಪುಸ್ತಕ : ಸಂಚಿಕೆ - 207

ಪ್ರೀತಿಯ ಪುಸ್ತಕ : ಸಂಚಿಕೆ - 207

ಪ್ರೀತಿಯ ಪುಸ್ತಕ
ಸಂಚಿಕೆ - 207
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ     


                       ದಿನಾಗ್ಲು ಕಾಗ್ದ ಆಕಜ್ಜಿ 
ಪ್ರೀತಿಯ ಮಕ್ಕಳೇ.. ನೀವು ಯಾರಿಗಾದರೂ ಕಾಗದ ಅಂದರೆ ಪತ್ರ ಬರೆದಿದ್ದೀರಾ? ನಾವು ಚಿಕ್ಕವರಿದ್ದಾಗ ಕಾಗದ ಬರೆಯುವುದು, ನಮಗೆ ಕಾಗದ ಬರುವುದು ಬಹಳ ಸಂಭ್ರಮದ ಸಂಗತಿಯಾಗಿತ್ತು. ಇಲ್ಲಿ ಬೆಂಗಳೂರಿನಲ್ಲಿ ಇರುವ ಮಕ್ಕಳು ದಂಡಿನ ಶಿಬಿರದಲ್ಲಿ ಇರುವ ಅಜ್ಜಿ ಊರಿಗೆ ಹೋಗುವ ಮಜದ ಅನುಭವವಿದೆ. ಅಜ್ಜಿಯ ಕಾಗದದ ಕರೆಗೆ ಓಗೊಟ್ಟು ಮಕ್ಕಳು ಅಮ್ಮನ ಜೊತೆ ಅರಸೀಕೆರೆ ಗಾಡಿಯಲ್ಲಿ ಅಮ್ಮಸಂದ್ರ ಸ್ಟೇಶನಿಗೆ ತಲಪಿದ್ದಾರೆ. ಅಲ್ಲಿ.. ”ಅಜ್ಜಿ ಕಾಯ್ತಾ ಇತ್ತು. ಅಜ್ಜಿ ಕಣ್ಣಿಗೆ ಬಿದ್ದಟ್ಗೆ ಎಲ್ಲವು ಒಂದೆ ಉಸ್ರಿಗೆ ಕೂಗಿದವು.” ಗಮನಿಸಿದಿರಾ. ಇದು ಹಳ್ಳಿ ಭಾಷೆ. ಈ ಪುಸ್ತಕದಲ್ಲಿ ನೀವು ಒಂದು ಚಂದದ ಕನ್ನಡ ಭಾಷೆ ಓದಬಹುದು. ಅಜ್ಜಿ ಮಕ್ಕಳಿಗಾಗಿ ಗಾಡಿಕಟ್ಟಿಸ್ಕೊಂಡು ಬಂದಿದ್ದರು. ಮಂಜನ ಗಾಡೀಲಿ ಕೂತ ಕೂಡಲೆ ಶುರುವಾಯ್ತು ಹಾಡು. ಅಜ್ಜಿ ಮನೆಯ ಸಂಭ್ರಮ ಓದಿದರೆ ನಿಮಗೂ ನಿಮ್ಮ ಅಜ್ಜಿ ಮನೆ ನೆನಪಾಗಬಹುದು. ಎಲ್ಲಾ ಮುಗಿಸಿ ಮತ್ತೆ ವಾಪಾಸು ಹೋಗುವಾಗ – ಮುದ್ದು ಮಾಡಿದ ಅಜ್ಜಿನ ಕೇಳೀದ್ಲು, “ಅಜ್ಜಿ, ಅಜ್ಜಿ ದಿನಾಗ್ಲೂ ಕಾಗ್ದ ಆಕಜ್ಜಿ, ದಿನಾಗ್ಲೂ ಬತ್ತಿವಿ”. 
ಪ್ರಕಾಶಕರು: ಅಭಿರುಚಿ ಪ್ರಕಾಶನ

ಲೇಖಕರು : ದು.ಸರಸ್ವತಿ
ಚಿತ್ರಗಳು: ಮಹೇಶ್ ಬಾಳಿಗಾ 
ಬೆಲೆ: ರೂ.70/-

ಇದು 6-7 ನೇ ತರಗತಿ ಮಕ್ಕಳಿಗಾಗಿ ಇದೆ. ಚಿಕ್ಕವರಿಗೂ ಓದಿ ಹೇಳಬಹುದು. ಇನ್ನೂ ಸ್ವಲ್ಪ ದೊಡ್ಡವರಿಗೂ ಇಷ್ಟವಾಗಬಹುದು. 
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಅಭಿರುಚಿ ಪ್ರಕಾಶನ, ಫೋನ್: 9980560013, abhiruchiprakashanamysore@gmail.com
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
*************************************** 



Ads on article

Advertise in articles 1

advertising articles 2

Advertise under the article