ಪ್ರೀತಿಯ ಪುಸ್ತಕ : ಸಂಚಿಕೆ - 206
Saturday, March 21, 2026
Edit
ಪ್ರೀತಿಯ ಪುಸ್ತಕ
ಸಂಚಿಕೆ - 206
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.. ಸೀರೆಯಲ್ಲಿ ನಮ್ಮಪ್ಪ – ಹೆಸರೇ ಕುತೂಹಲ ಹುಟ್ಟಿಸುವ ಹಾಗೆ ಇದೆಯಲ್ಲವೇ? ಇದು ಅಪ್ಪ ಮಗಳ ಆಟದ ಸಮಯ. ಎಷ್ಟು ಮಜಾ ಮಾಡ್ತಾರೆ ನೋಡಿ. ಅಮ್ಮ ಏನೋ ಕೆಲಸದಲ್ಲಿ ಇದ್ದರೆ, ಅಪ್ಪ ಮಗಳು ಅಮ್ಮನ ಬೀರುವಿಗೆ ಕೈ ಹಾಕುತ್ತಾರೆ. ಬಣ್ಣ ಬಣ್ಣದ ಸೀರೆಗಳ ರಾಶಿ ಹೊರತೆಗೆದರು.. ಅಪ್ಪ ಸೀರೆ ಉಡುವ ತರತರದ ಪ್ರಯೋಗಗಳು ನಡೆದವು. ಆಹಾ.. ಪುಸ್ತಕ ನೋಡುತ್ತಿದ್ದರೆ, ದಟ್ಟ ಬಣ್ಣಗಳು ಕಣ್ಣಿಗೆ ರಾಚುತ್ತವೆ. ನೀವೂ ಊಹಿಸಿ, ಮನೆಯವರ ಜೊತೆಗೆ ಇಂತಹ ಮಜಾ ಮಜಾ ಹೊಸ ಆಟಗಳನ್ನು ಆಡುವುದನ್ನು..
ಲೇಖಕರು : ಕವಿತಾ ಸಿಂಘ್ ಕಾಳೆ
ಅನುವಾದ: ಡಾ. ಎಚ್. ಎಂ. ಕುಮಾರಸ್ವಾಮಿ
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.80/-
ಪ್ರಥಮ್ ಪ್ರಕಾರ ಇದು 2ನೇ ಹಂತದ ಪುಸ್ತಕ. ಓದಲು ಕಲಿಯುತ್ತಿರುವ ಮಕ್ಕಳಿಗಾಗಿ; ಪದಗಳನ್ನು ಗುರುತಿಸಿ ಓದುವ, ಇತರರ ಸಹಾಯದಿಂದ ಹೊಸ ಪದಗಳನ್ನು ಓದುವ ಮಕ್ಕಳಿಗಾಗಿ ಇದೆ.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಪ್ರಥಮ್ ಬುಕ್ಸ್ 080 – 42052574/41159009; www.prathambooks.org; www.storyweaver.org.in.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
***************************************