ಪ್ರೀತಿಯ ಪುಸ್ತಕ : ಸಂಚಿಕೆ - 204
Saturday, March 7, 2026
Edit
ಪ್ರೀತಿಯ ಪುಸ್ತಕ
ಸಂಚಿಕೆ - 204
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ನೀವು ಮಕ್ಕಳು.. ಊಟ ಮಾಡದಿದ್ದರೆ ಮನೆಯಲ್ಲಿ ಏನು ಹೇಳಿ ಹೆದರಿಸುತ್ತಾರೆ? “ಗುಮ್ಮ ಬರುತ್ತದೆ.. ಗೊಗ್ಗಯ್ಯ ಬರುತ್ತಾನೆ..” ಇದೊಂದು ಥರಾ ಭಾವನೆ. ಗೊಗ್ಗಯ್ಯ ಅಂದರೆ ಭಯವೂ ಹೌದು. ಆದರೆ ನೋಡಬೇಕು ಅನ್ನುವ ಕುತೂಹಲವೂ ಇರುತ್ತದೆ. ಕನಸಲ್ಲೆಲ್ಲಾ ಬರುತ್ತಾನೆ. ಹಾಗೇನೇ ಈ ಪುಸ್ತಕದಲ್ಲೂ ಪುಟ್ಟಿಗೆ ಗೊಗ್ಗಯ್ಯನನ್ನು ನೋಡುವ ಕುತೂಹಲ. ಮನೆಯಲ್ಲಿ ಹೇಳುತ್ತಿರುತ್ತಾರೆ, “ಹಟ ಮಾಡುವ ಮಕ್ಕಳು ಗೊಗ್ಗಯ್ಯನಿಗೆ ಇಷ್ಟ.. ಗೊಂಬೆ ಹಾಳು ಮಾಡುವವರು ಗೊಗ್ಗಯ್ಯನಿಗೆ ಇಷ್ಟ.. ನಿದ್ರೆ ಮಾಡದ ಮಕ್ಕಳೂ ಇಷ್ಟ..” ಅಣ್ಣನನ್ನು ಪೀಡಿಸುತ್ತಿರುತ್ತಾಳೆ. ಗೊಗ್ಗಯ್ಯನನ್ನು ನೋಡಬೇಕು ಅವಳಿಗೆ. ಅಣ್ಣ ಏನೋ ತೋರಿಸುತ್ತಾನೆ.. ಸ್ವಲ್ಪವೇ ಅಕ್ಷರಗಳ ಜೊತೆಗೆ ದೊಡ್ಡ ದೊಡ್ಡ ಚಿತ್ರಗಳ ಪುಸ್ತಕ ನೋಡುವುದಕ್ಕೆ ಚಂದ.. ಹಾಗೆಯೇ ನೀವೂ ನಿಮ್ಮ ಕಲ್ಪನೆಯ ಗೊಗ್ಗಯ್ಯನ ಚಿತ್ರ ಮಾಡಿ ನೋಡಿ.
ಲೇಖಕರು : ಕೊಳ್ಳೇಗಾಲ ಶರ್ಮ
ಚಿತ್ರಗಳು: ಗೀತಾಂಜಲಿ ಅಯ್ಯರ್
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.80/-
ಪ್ರಥಮ್ ಪ್ರಕಾರ ಇದು 2ನೇ ಹಂತದ ಪುಸ್ತಕ. ಓದಲು ಕಲಿಯುತ್ತಿರುವ ಮಕ್ಕಳಿಗಾಗಿ; ಪದಗಳನ್ನು ಗುರುತಿಸಿ ಓದುವ, ಇತರರ ಸಹಾಯದಿಂದ ಹೊಸ ಪದಗಳನ್ನು ಓದುವ ಮಕ್ಕಳಿಗಾಗಿ ಇದೆ.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಪ್ರಥಮ್ ಬುಕ್ಸ್ 080 – 42052574/41159009; www.prathambooks.org; www.storyweaver.org.in.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
***************************************