-->
ಪ್ರೀತಿಯ ಪುಸ್ತಕ : ಸಂಚಿಕೆ - 203

ಪ್ರೀತಿಯ ಪುಸ್ತಕ : ಸಂಚಿಕೆ - 203

ಪ್ರೀತಿಯ ಪುಸ್ತಕ
ಸಂಚಿಕೆ - 203
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ     

                 ಅಜ್ಜಮ್ಮನ ಅದ್ಭುತ ಯಂತ್ರಗಳು
ಪ್ರೀತಿಯ ಮಕ್ಕಳೇ... ಸೂರಜ್ ಮತ್ತು ಅಜ್ಜಮ್ಮನ ಕಾರುಬಾರು ಗೊತ್ತಾಗಬೇಕಾದರೆ ಈ ಪುಸ್ತಕ ಓದಲೆ ಬೇಕು. ಇಬ್ಬರಿಗೂ ಹೊಸದೇನಾದರೂ ಮಾಡಬೇಕು. ಈಗ ಕೊಬ್ಬರಿ ಮಿಠಾಯಿ ಮಾಡಲು ಹೊರಟಿದ್ದಾರೆ. ತೆಂಗಿನ ಕಾಯಿ ಕೊಯ್ಯಬೇಕಲ್ಲಾ.. ಕೊಯ್ಯಲು ಜ್ಯೂಂಯ್ ಅಂತ ಮೇಲೇರಲು ಒಂದು ಯಂತ್ರ.. ನಾರು ತೆಗೆಯಲು ಪಚಕ್.. ಕರಕ್.. ಅಂತ ಸದ್ದು ಮಾಡುವ ಒಂದು ಯಂತ್ರ.. ಕಟಕ್ ಅಂತ ಸೀಳಲು ಒಂದು ಯಂತ್ರ.. ತು..ರ್..ರ್..ರ್.. ಅಂತ ತುರಿಯಲು ಒಂದು ಯಂತ್ರ.. ಯಂತ್ರಗಳ ಚಿತ್ರಗಳೇ ಭರ್ಜರಿಯಾಗಿ ಇವೆ. ಚಿತ್ರಗಳನ್ನು ನೋಡಿಕೊಂಡೇ ಕಥೆ ಹೇಳಬಹುದು. ಆಮೇಲೆ ತುಪ್ಪದ ಜೊತೆಗೆ ಬಾಣಲೆಗೆ ಸುರಿದರೆ.. ಓದುವಾಗ ನಮಗೇ ಘಮ.. ಘಮಾ ಬರುತ್ತದೆ. ಅಷ್ಟೇ ಆಮೇಲೆ ನೀವು ಕೂಡಾ ನಿಮ್ಮ ಅಜ್ಜಮ್ಮನ ಹತ್ತಿರ ಕೊಬ್ಬರಿ ಮಿಠಾಯಿ ಮಾಡಲು ಹೇಳುತ್ತೀರಿ. 

ಲೇಖಕರು ಮತ್ತು ಚಿತ್ರಗಳು : ರಾಜೀವ್ ಐಪ್
ಅನುವಾದ: ರವಿಕಿರಣ
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.75/-

ಪ್ರಥಮ್ ಪ್ರಕಾರ ಇದು 2ನೇ ಹಂತದ ಪುಸ್ತಕ. ಓದಲು ಕಲಿಯುತ್ತಿರುವ ಮಕ್ಕಳಿಗಾಗಿ; ಪದಗಳನ್ನು ಗುರುತಿಸಿ ಓದುವ, ಇತರರ ಸಹಾಯದಿಂದ ಹೊಸ ಪದಗಳನ್ನು ಓದುವ ಮಕ್ಕಳಿಗಾಗಿ ಇದೆ. 

ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಪ್ರಥಮ್ ಬುಕ್ಸ್ 080 – 42052574/41159009; www.prathambooks.org; www.storyweaver.org.in. 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
*************************************** 








Ads on article

Advertise in articles 1

advertising articles 2

Advertise under the article