-->
ಪ್ರೀತಿಯ ಪುಸ್ತಕ : ಸಂಚಿಕೆ - 201

ಪ್ರೀತಿಯ ಪುಸ್ತಕ : ಸಂಚಿಕೆ - 201

ಪ್ರೀತಿಯ ಪುಸ್ತಕ
ಸಂಚಿಕೆ - 201
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ     

 
                     ಕರಾಮತಿಲಾಲರ ಖಡ್ಗ  
ಪ್ರೀತಿಯ ಮಕ್ಕಳೇ... ಚಿಕ್ಕ ಮಕ್ಕಳಿಗೆ ಕರಾಮತ್ತು ಮಾಡುವುದು ಅಂದರೆ ಬಹಳ ಇಷ್ಟ ಅಲ್ಲವೇ? ಏನೇ ವಸ್ತು ಕೈಗೆ ಸಿಕ್ಕರೂ ಅದನ್ನು ಎತ್ತಿ ಅಲ್ಲಾಡಿಸಿ. ಪರಿಶೀಲಿಸಬೇಕು, ಜೊತೆಗೆ ಏನಾದರೂ ಕರಾಮತ್ತು ಆಗಿ ಹೋಗುತ್ತದೆ. ಇರಲಿ, ಕರಾಮತಿಲಾಲರು ಕೈಗೆ ಸಿಕ್ಕುವ ವಸ್ತುಗಳಿಂದ ಯಾವುದೋ ಕರಾಮತ್ತು ಮಾಡಿ ಅವರ ಕೈಚಳಕದ ಕುರಿತಂತೆ ಸಾವಿರಾರು ಕಥೆಗಳಿವೆ. ಒಮ್ಮೆ ಅವರಿಗೆ ಒಂದು ಹಳೆಯ ಖಡ್ಗ ಸಿಕ್ಕಿತು. ಅವರಿಗೆ ಎತ್ತಲಾರದಷ್ಟು ಭಾರದ ಖಡ್ಗ. ಕರಾಮತಿಲಾಲರು ಹಂಚಿಕಡ್ಡಯಂತಿದ್ದರು. ಆದರೂ ಸಿಕ್ಕ ಮೇಲೆ ಬಿಟ್ಟಾರೇ? ಉಜ್ಜಿ ಉಜ್ಜಿ ತೊಳೆದರು. ಖಡ್ಗ ಫಳ ಫಳ ಹೊಳೆಯಿತು. ಕಷ್ಟಪಟ್ಟು ಎತ್ತಿ ಚಲಾಯಿಸುವ ಪ್ರಯತ್ನ ಮಾಡಿದರು. ಆಮೇಲೆ ಈ ಖಡ್ಗದ ಜೊತೆಗೆ ಅವರು ಮಾಡಿದ ಸಾಹಸಗಳು ಊಹಿಸಲೂ ಸಾಧ್ಯವಿಲ್ಲ. ಅವರು ಖಡ್ಗ ಹಿಡಿದು ಝಳಪಿಸುವ ರೀತಿಗೇ ಶತ್ರುಗಳು ಹೆದರಿ ಓಡಿಹೋಗುವಂತೆ ಆಯಿತು. ತಮಾಷೆಯಾಗಿದೆ. 

ಲೇಖಕರು : ಪ್ರಕಾಶ್ ಮನು (ಹಿಂದಿ)
ಅನುವಾದ – ತಿಪ್ಪೇಸ್ವಾಮಿ
ಚಿತ್ರಗಳು: ಮಿತ್ರರುಣ್ ಹಲಧರ್
ಪ್ರಕಾಶಕರು: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ
ಬೆಲೆ: ರೂ.17/- (ಈಗ ಹೆಚ್ಚಾಗಿರಬಹುದು)

ಇದು 6-7 ತರಗತಿಯ ಮಕ್ಕಳು ಓದುವಂತಿದೆ. ಇತರ ಚಿಕ್ಕ.. ದೊಡ್ಡ ಮಕ್ಕಳಿಗೂ ಇಷ್ಟವಾಗ ನಬಹುದು. 
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ www.nbtindia.gov.in
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
*************************************** 


Ads on article

Advertise in articles 1

advertising articles 2

Advertise under the article