-->
ಜೀವನ ಸಂಭ್ರಮ : ಸಂಚಿಕೆ - 226

ಜೀವನ ಸಂಭ್ರಮ : ಸಂಚಿಕೆ - 226

ಜೀವನ ಸಂಭ್ರಮ : ಸಂಚಿಕೆ - 226
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                                     

ಮಕ್ಕಳೇ, ಇಂದು ದುಸ್ಸಂಗ ಎಂದರೇನು..? ನೋಡೋಣ. ಯಾರ ಮನಸ್ಸು ಸತ್ಯಜ್ಞಾನ, ಪ್ರೇಮ ಭಾವ ಇರುತ್ತೋ ಅವರು ಮಹಾನುಭಾವರು. ಇಂತಹವರ ಸಂಘ ಬಹಳ ಮಹತ್ವ. ಅಂತಹವರು ಸಂತರು, ಶರಣರು, ಋಷಿಗಳು ಮತ್ತು ಜ್ಞಾನಿಗಳು. ಇದರ ಅರ್ಥ ಬುದ್ಧಿವಂತರು ಆಗಬೇಕು. ಹೃದಯವಂತರು ಆಗಬೇಕು. ಹೂ ಹೋಗಲಿದೆ ಎಂದು ಭಾವಿಸಿ. ಹೂವು ಮುಂದೆ ಬಾಡಿ ಹೋಗುತ್ತದೆ ಅನ್ನುವ ಸತ್ಯ ಜ್ಞಾನದೊಂದಿಗೆ ಅದರ ಸೌಂದರ್ಯ, ಸುಗಂಧ, ಅನುಭವಿಸುವ ಪ್ರೇಮ ಹೃದಯ ಇರಬೇಕು. ಯಾವುದನ್ನು ಅನುಭವಿಸುತ್ತೇವೆ, ಅದರ ಸ್ವರೂಪ ಗೊತ್ತಿರಬೇಕು. ಅದು ಒಂದೇ ಕ್ಷಣ ಇರಬಹುದು. ಆ ಕ್ಷಣ ಸಂತೋಷದ ಕ್ಷಣವಾಗಬೇಕು. ಪ್ರೇಮದ ವ್ಯಕ್ತಿಗಳ ಸಂಘ ಇರಬೇಕು. ಅವರೊಂದಿಗೆ ಬೆರೆತು ಸಂತೋಷ ಪಡಬೇಕು. ಪಕ್ಷಿಗಳನ್ನು, ಸಸ್ಯಗಳನ್ನು, ಜನರನ್ನು ನೋಡಿ ಸಂತೋಷ ಪಡಬೇಕು. ಹೀಗೆ ಸಂತೋಷ ಕೊಡುವ ವ್ಯಕ್ತಿ, ವಸ್ತು, ಗಿಡ, ಪಕ್ಷಿಗಳ ಸಂಘವೇ ಸತ್ಸಂಗ. ಇದನ್ನು ಬಿಟ್ಟು ಯಾರ, ಯಾವ ವಸ್ತುಗಳ ಸಂಘ ಮಾಡಿದರೆ ದುಃಖವಾಗುತ್ತಿದೆಯೋ, ಮತಿಯಲ್ಲಿ ಕತ್ತಲೆ ತುಂಬುತ್ತದೆಯೋ, ಮಧುರತೆ ನಾಶವಾಗುತ್ತದೆಯೋ, ಅಂತಹವರ ಸಂಗ ಮಾಡಬೇಡ. ಯಾರ ಸಂಘದಿಂದ ರಾಗ ಶುರುವಾಗುತ್ತದೊ, ದ್ವೇಷ ಶುರುವಾಗುತ್ತದೊ, ಮೋಹ ಶುರುವಾಗುತ್ತದೊ, ಅಂಥವರ ಸಂಘ ಮಾಡಬಾರದು. ಮನಸ್ಸು ಕಲಕಿ ಹಾಳು ಮಾಡುವವರ ಸಂಗಡ ಬೇಡ. ಈಗ ನೀವು ಬಾಲಕರು ಬಲಿಷ್ಠರಾದ ಮೇಲೆ ತೊಂದರೆ ಇಲ್ಲ. ಈಗ ಸಾಧನೆ ಮಾಡುವಾಗ ಇವುಗಳಿಂದ ದೂರವಿರಬೇಕು. 

ಉದಾಹರಣೆ ಒಂದು ಬೀಜ ಭೂಮಿಯಲ್ಲಿ ಹಾಕಿರುತ್ತೇವೆ. ಅದಕ್ಕೆ ಸ್ವಲ್ಪ ನೀರು ಹಾಕುತ್ತೇವೆ .
ಆ ಬೀಜ ಮೊಳೆತು, ಬೆಳೆದು ಸಸಿಯಾಗುತ್ತದೆ .ಆ ಸಸಿ ಗಾಳಿ ಬೀಸಿದರು ಬಾಗುತ್ತದೆ. ಆ ಸಸಿ ಪ್ರಾಣಿಗಳ ಸಂಗವನ್ನು ಎಲ್ಲಿಯವರೆಗೆ ಮಾಡಬಾರದು ಅಂದರೆ, ಅದು ಬೆಳೆದು ಎತ್ತರದ ಮರ ಆಗುವವರೆಗೆ.. ಅದು ಎತ್ತರವಾದ ಮೇಲೆ ಅದರ ಬಳಿ ಯಾವ ಪ್ರಾಣಿ ಬಂದರೂ ಸಮಸ್ಯೆ ಇಲ್ಲ. ಗಿಡ ಸಣ್ಣದು ಇದ್ದಾಗ ಪೋಷಣೆ ಮಾಡಿ ರಕ್ಷಿಸಬೇಕು. ಅದು ಯಾವುದರ ಸಂಘ ಮಾಡಿದರೆ ನಾಶವಾಗುತ್ತೋ, ಅದರ ಸಂಗ ಮಾಡಬಾರದು. ಕಿತ್ತು ಹಾಕುವ ಹುಡುಗರ ಸಂಘ, ತಿಂದು ಹಾಕುವ ಪ್ರಾಣಿಗಳ ಸಂಘ ಮಾಡಬಾರದು. ಎಲ್ಲಿಯವರೆಗೆ ಸಂಘ ಮಾಡಬಾರದು ಎಂದರೆ, ಅದು ಬೆಳೆಯುವವರೆಗೂ ಮಾಡಬಾರದು. ಆ ಸಮಯದಲ್ಲಿ ಸಂಗ ಮಾಡಿದರೆ ನಾಶವಾಗುತ್ತದೆ. ಸಂಗ ಮಾಡದಿದ್ದರೆ ಎತ್ತರಕ್ಕೆ ಬೆಳೆಯುತ್ತದೆ. ಆಳವಾಗಿ ಬೇರು ಬಿಡುತ್ತದೆ. ರಂಬೆ, ಕೊಂಬೆ ಎಲ್ಲಾ ದಿಕ್ಕಿಗೂ ಹರಡುತ್ತದೆ. ಕಾಂಡ ದಪ್ಪವಾಗುತ್ತದೆ. ಆಮೇಲೆ ಮರ ಹೇಳುತ್ತದೆ, ಈಗ ಬನ್ನಿ ನನ್ನ ಬಳಿ. ನಾನು ನೆರಳು ಕೊಡುತ್ತೇನೆ. ಹಣ್ಣು ಕೊಡುತ್ತೇನೆ. ಹೂ ಸೌಂದರ್ಯ ಮತ್ತು ಸುವಾಸನೆಯಿಂದ ಸುತ್ತಮುತ್ತ ಸೌಂದರ್ಯ ಮಾಧುರ್ಯ ಹರಡುತ್ತೇನೆ. ನೂರಾರು ಪಕ್ಷಿ ಬಂದರು ನಾನು ಹೆದರುವುದಿಲ್ಲ ಅನ್ನುತ್ತದೆ. ಕೆಳಗೆ ಬಂದವರಿಗೆ ನೆರಳು ಮತ್ತು ಹಣ್ಣು ನೀಡುತ್ತೇನೆ. ಆಶ್ರಯ ನೀಡುತ್ತೇನೆ ಎನ್ನುತ್ತದೆ. ಮಕ್ಕಳೇ ನೀವು ಸಸಿಗಳು ಆಗಿರುವುದರಿಂದ ದುಸ್ಸಂಗ ಮಾಡಬಾರದು. ಬೆಳೆಯುವವರೆಗೆ ಯಾವ ಸಂಘ ಮಾಡಬೇಕು ಅವರ ಸಂಗಡ ಇರಬೇಕು. ನೀವೇನಾದರೂ ದುಸ್ಸಂಗ ಮಾಡಿದರೆ ನೀವೇ ಇರುವುದಿಲ್ಲ ನಾಶವಾಗುತ್ತಿರಿ. ಮೊದಲು ನೀನು ಬೆಳಿ, ಕಲಿ. ನಿನ್ನ ಕಾಲ ಮೇಲೆ ನೀನು ನಿಂತುಕೋ. ನಿನ್ನ ಮನಸ್ಸು ಒಯ್ದಾಡದಂತೆ ಮಾಡಿಕೊ. ನೋಡಿದರೆ ಮನಸ್ಸು ಒಯ್ದಾಡುತ್ತದೆ. ಹೇಳಿದರೆ ಮನಸ್ಸು ಹೊಯ್ದಾಡುತ್ತದೆ. ಮುಟ್ಟಿದರೆ ಮನಸ್ಸು ಹೊಯ್ದಾಡುತ್ತದೆ. ನಾಲಿಗೆ ಮೇಲೆ ಒಂದಿಷ್ಟು ರಸ ಬಿದ್ದರೆ ಮನಸ್ಸು ಹೊಯ್ದಾಡುತ್ತದೆ. ಇಂತಹ ಹೊಯ್ದಾಡುವ ಮನಸ್ಸು ಬಲಿಷ್ಠ ಆಗಬೇಕಾದರೆ, ಬೆಳೆದು ದೊಡ್ಡವನಾಗಬೇಕಾದರೆ, ದುಸ್ಸಂಗದಿಂದ ದೂರ ಇರಬೇಕು. ಸಂಘ ಸಣ್ಣದಿದ್ದರೂ ಮುಂದೆ ಅದು ದೊಡ್ಡದಾಗುತ್ತದೆ. ಅದಕ್ಕಾಗಿ ದೂರ ಇರು. ಅವಕಾಶ ಸಿಕ್ಕರೆ ಕಾಮ ಬೆಳೆಯುತ್ತದೆ. ದ್ವೇಷ ಜಗತ್ತನ್ನೇ ಸುಡುತ್ತದೆ. ಮೋಹ ಜಗತ್ತನ್ನ ಮುಳುಗಿಸುತ್ತದೆ. ಬೆಳೆಯುವುದಕ್ಕಿಂತ ಮೊದಲೇ ಬೆಳೆಯದಂತೆ ನೋಡಿಕೋ. ಅಂತಹ ಸಂಗ ಬೇಡ.

ಒಂದು ಅಧ್ಯಾಪಕರ ಕುಟುಂಬ. ಬೇರೆ ಊರಿಂದ ಬಂದು ಕಟುಕರ ಅಂಗಡಿಗಳ ಸಮೀಪ ಮನೆ ಮಾಡಿದ್ದರು. ಆ ಅಧ್ಯಾಪಕನಿಗೆ ಏನಾಗುತ್ತೋ ಅಂತ ಗೊತ್ತಿರಲಿಲ್ಲ. ಅವರಿಗೆ ಒಂದು ಸುಂದರ ಮಗುವಿತ್ತು. ಅಧ್ಯಾಪಕ ಕವಿ, ಸಾಹಿತಿ ಮತ್ತು ಸಹೃದಯ ಆಗಿದ್ದರು. ಮಗುವಿಗೆ ಕೆಟ್ಟ ಸಂಸ್ಕಾರ ಆಗಬಾರದು ಅಂತ ಬಹಳ ಮುತುವರ್ಜಿ ವಹಿಸುತ್ತಿದ್ದರು. ಶಿಕ್ಷಕ ಒಮ್ಮೆ ತನ್ನ ಹೆಂಡತಿಯನ್ನು ಊರಿಗೆ ಕಳುಹಿಸಿದನು. ಮಗು ಮನೆಯಲ್ಲಿ ಇತ್ತು. ಆ ಮಗು ನೋಡಿಕೊಳ್ಳಲು ಒಬ್ಬ ಹೆಣ್ಣು ಮಗಳು ಇದ್ದಳು. ಶಿಕ್ಷಕ ಶಾಲೆಗೆ ಹೋಗಿದ್ದ. ಆಗ ಮಗು ನೋಡಿಕೊಳ್ಳುತ್ತಿದ್ದ ಹೆಣ್ಣುಮಗಳು, ಮಗುವನ್ನು ಆಡಿಸುತ್ತಿದ್ದಳು. ಆಗ ಆಕೆ ಕೆಲಸಕ್ಕೆ ಒಳಹೋದಳು. ಆಗ ಮಗು ಆಡುತ್ತಾ ಆಡುತ್ತಾ ಹೊರಗೆ ಬಂದು ಕಟುಕರ ಮಕ್ಕಳೊಂದಿಗೆ ಆಡುತ್ತಿತ್ತು. ಇದು ಶಿಕ್ಷಕನಿಗೆ ಗೊತ್ತಿಲ್ಲ. ಹೆಂಡತಿ ಊರಿಂದ ಬಂದಿದ್ದಾಳೆ. ಶಿಕ್ಷಕನ ಮನೆಗೆ ಬಂದಿದ್ದಾನೆ. ಮಗು ಎಲ್ಲಿ? ಎಂದು ಕೇಳಿದರು. ಆ ಹೆಣ್ಣು ಮಗಳು ,ಮಗು ಆಡೋದಿಕ್ಕೆ ಹೋಗಿದೆ. ದಿನಾ ಹೋಗಿ ಆಟ ಆಡಿಕೊಂಡು ಬರುತ್ತದೆ. ಏನು ತೊಂದರೆ ಇಲ್ಲ ಅಂದಳು. ಅಷ್ಟರಲ್ಲಿ ಮಗು ಬಂದಿತ್ತು, ಕೈಯಲ್ಲಿ ಎಲಬು ಇತ್ತು. ಶಿಕ್ಷಕ ಗಾಬರಿಯಾದ. ಇದೇನು ಅಂದ. ಆಗ ಹೆಣ್ಣು ಮಗಳು ಹೇಳಿದಳು "ಮಗು ದಿನ ಆಟ ಆಡಲು ಹೊರಗೆ ಹೋಗುತ್ತಿತ್ತು. ಸುತ್ತಮುತ್ತ ಇರುವ ಹುಡುಗರು ಹೀಗೆ ಎಲುಬು ಹಿಡಿದುಕೊಂಡೆ ಆಟ ಆಡುತ್ತಾರೆ" ಎಂದಳು. ಹಾಗಾಗಿ ಅದನ್ನೇ ಹಿಡಿದು ತಂದಿದ್ದಾನೆ ಎಂದಳು. ನೀನು ಏನು ಮಾಡುತ್ತಿದ್ದೆ ಅಂದ ಶಿಕ್ಷಕ. ಆಗ ಹೆಣ್ಣು ಮಗಳು ಹೇಳಿದಳು, "ನಾನು ನೋಡುತ್ತಿದ್ದೇನೆ, ಹುಡುಗ ಸುರಕ್ಷಿತವಾಗಿರಬೇಕು ಅಷ್ಟೇ" , ನಾನು ಸುರಕ್ಷಿತವಾಗಿರುವುದನ್ನು ನೋಡುತ್ತಿದ್ದೇನೆ." ಅಂದಳು. ಏನು ಕಲಿಸಬೇಕೆನ್ನುವುದು ನಿಮ್ಮ ಕೆಲಸ ಅಂದಳು. ಕೆಲವೇ ದಿನದಲ್ಲಿ ಶಿಕ್ಷಕ ದಂಪತಿ ಊರು ಬಿಟ್ಟಿದ್ದರು. ಸ್ವಲ್ಪ ಅವಕಾಶ ಸಿಕ್ಕರೆ ಮಗು ಹೀಗಾಗುತ್ತೆ ಅಂತ. ದುಸಂಗ ಬೇಡ. ಬೆಳೆದ ನಂತರ ಕೆಟ್ಟವರು ಬಳಿ ಬಂದರು ಅಪಾಯವಾಗುವುದಿಲ್ಲ. ಈಗ ದುಸ್ಸಂಗ ಬೇಡ, ಅಲ್ಲವೇ ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*****************************************


Ads on article

Advertise in articles 1

advertising articles 2

Advertise under the article