ಪ್ರೀತಿಯ ಪುಸ್ತಕ : ಸಂಚಿಕೆ - 199
Saturday, January 31, 2026
Edit
ಪ್ರೀತಿಯ ಪುಸ್ತಕ
ಸಂಚಿಕೆ - 199
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.. ವಿಜ್ಞಾನದ ಅದ್ಭುತಗಳನ್ನು ಸರಳವಾಗಿ ಪರಿಚಯಿಸುವ ಪುಸ್ತಕವಿದು. ನೀರು, ಗಾಳಿ ಎಲ್ಲವೂ ನಮಗೆ ಸಾಮಾನ್ಯ ವಿಷಯಗಳು. ಆದರೆ ಅವುಗಳ ಬಗ್ಗೆ ವೈಜ್ಞಾನಿಕ ಪರಿಚಯ ಬಹಳ ಮುಖ್ಯ. ಧರಣಿ ನಾವು ವಾಸಿಸುವ ಭೂಮಿಯು, ಬ್ರಹ್ಮಾಂಡದ ಒಂದು ಭಾಗವಾಗಿದ್ದಾಳೆ. ಧರಣಿಯ ಕುಟುಂಬಕ್ಕೆ ಸೇರಿದ ಇತರ ಗ್ರಹಗಳೂ ಕೂಡಾ ಇವೆ. ಈ ಗ್ರಹಗಳ ಚಲನೆ, ಅದರಿಂದಾಗುವ ಪರಿಣಾಮಗಳನ್ನು ಇಲ್ಲಿ ಚಿತ್ರ ಸಹಿತವಾಗಿ ಕಾಣಬಹುದು. ಧರಣಿಯ ಸ್ನೇಹಿತೆ ಚಂದ್ರ. ಧರಣಿ ಮತ್ತು ಚಂದ್ರ ಅಂತರಿಕ್ಷದಲ್ಲಿ ಆಡುವ ಆಟ ನೀವು ಕಂಡಿರಬಹುದು. ಆ ಆಟವನ್ನು ಪುಸ್ತಕದಲ್ಲೂ ನೀವು ಕಾಣಬಹುದು, ದಿನಾ ರಾತ್ರಿ ಆಕಾಶ ನೋಡುತ್ತಿದ್ದರೆ ಅಲ್ಲಿಯೂ ಕಾಣಬಹುದು. ಅಂತರಿಕ್ಷದಲ್ಲಿ ಇನ್ನೂ ಏನೇನೋ ಕಾಣಬಹುದು. ಓದಿ ಅರ್ಥಮಾಡಿಕೊಂಡರೆ ನೋಡಿ ನೋಡಿ ಹೆಚ್ಚು ಕಲಿಯಬಹುದು. ಪುಸ್ತಕವನ್ನೂ ಓದಿ, ಆಕಾಶವನ್ನೂ ನೋಡಿ.
ಲೇಖಕರು : ಅನುಷ್ಕಾ ಕಾರ್ಲೋ, ರಾಜಸೀ ರಾಯ್, ಶಂಖಾಲಿನಾ ನಾಥ್, ಶುಭಾಂಗಿ ಗೋಯಲ್,
ಅನುವಾದ: ಶಾಲಿನಿ ಜೈಕುಮಾರ್
ಪ್ರಕಾಶಕರು: ತುಲಿಕಾ
ಬೆಲೆ: ರೂ.120/-
ಇದು 6+ ವಯಸ್ಸಿನ ಮಕ್ಕಳಿಗಾಗಿ ಇದೆ. ಇತರ ಚಿಕ್ಕ ದೊಡ್ಡ ಮಕ್ಕಳಿಗೂ ಇಷ್ಟವಾಗಬಹುದು.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ತುಲಿಕಾ ಬುಕ್ಸ್ www.tulikabooks.com email: tulikabooks@vsnl.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
***************************************