ಪ್ರೀತಿಯ ಪುಸ್ತಕ : ಸಂಚಿಕೆ - 197
Saturday, January 17, 2026
Edit
ಪ್ರೀತಿಯ ಪುಸ್ತಕ
ಸಂಚಿಕೆ - 197
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಗಾಳಿಪಟ ಎಂದರೆ ತುಂಬಾ ಇಷ್ಟ ಪಡುವ ಹಳ್ಳಿಯ ಬಡ ಹುಡುಗ ಕುಂಜನ ಕಥೆ ಇದು. ಬಡತನದ ನಡುವೆಯೂ ಹೇಗೆ ಹೇಗೋ ಮಾಡಿ ದೊಡ್ಡದೊಂದು ಗಾಳಿಪಟ ತಯಾರಿಸಿ ಖುಶಿ ಪಡುತ್ತಿದ್ದಾಗ.. ಗಾಳಿಪಟ ಹಾರಿ ಹೋಗಿ ಸಾಹುಕಾರನ ತೋಟದಲ್ಲಿ ಎತ್ತರದ ಮರಕ್ಕೆ ಸಿಲುಕಿಕೊಂಡಿತು. ಅದನ್ನು ತೆಗೆಯುವ ಪ್ರಯತ್ನದಲ್ಲಿ ಸಾಹುಕಾರನಿಂದ ತೊಂದರೆಗೆ ಒಳಗಾದ. ಕೂಲಿ ನಾಲಿ ಮಾಡಿ ಬದುಕುತ್ತಿದ್ದ ಕುಂಜ ಜೈಲು ಸೇರುತ್ತಾನೆ. ಏನೂ ಅರಿಯದ ಮುಗ್ಧ ಕುಂಜ ಜೈಲು ಹೇಗೆ ಸೇರಿದ? ಪ್ರಶ್ನೆಗೆ ಉತ್ತರ ಸಿಗುವುದು ಪುಸ್ತಕದಲ್ಲಿ. ಜೈಲಿನಲ್ಲೂ ಅವನೊಬ್ಬ ಒಳ್ಳೆಯ ಕೈದಿಯಾಗಿದ್ದ. ಅಲ್ಲೂ ಅವನನ್ನು ಆಕರ್ಷಿಸಿದ್ದು ಎತ್ತರದ ಮರದ ಮೇಲೆ ಸಿಲುಕಿಕೊಂಡ ಗಾಳಿಪಟ. ಅವನ ಬದುಕಿನ ಮೊದಲ ತಿರುವು ಸಿಗುವುದು ಗಾಳಿಪಟದಿಂದಲೇ, ಕೊನೆಗೊಳ್ಳುವುದೂ ಗಾಳಿಪಟದಿಂದಲೇ...
ಲೇಖಕರು : ಮನೋಜ್ ದಾಸ್
ಅನುವಾದ: ಡಿ.ಎನ್.ಶ್ರೀನಾಥ್
ಚಿತ್ರಗಳು: ಕಲ್ಲೋಲ್ ಮಜುಮದಾರ
ಪ್ರಕಾಶಕರು: ನ್ಯಾಶನಲ್ ಬುಕ್ ಟ್ರಸ್ಟ್ ಇಂಡಿಯಾ
ಬೆಲೆ: ರೂ.18/-
ಇದು 6-7 ತರಗತಿಯ ಮಕ್ಕಳು ಓದುವಂತಿದೆ.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ www.nbtindia.gov.in
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
***************************************