ಪ್ರೀತಿಯ ಪುಸ್ತಕ : ಸಂಚಿಕೆ - 196
Saturday, January 10, 2026
Edit
ಪ್ರೀತಿಯ ಪುಸ್ತಕ
ಸಂಚಿಕೆ - 196
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
“ಒಂದು ಪ್ರಶ್ನೆ, ಚಂದ ಪ್ರಶ್ನೆ ನಾನು ಕೇಳುವೆ,
ಉತ್ತರಿಸು, ಉತ್ತರವು ನಿನಗೆ ಸಾಧ್ಯವೇ?
ಅಲ್ಲಿ ಇಲ್ಲಿ ಉತ್ತರವ ಹುಡುಕಬೇಡವೋ
ಬುದ್ಧಿಯೋಡಿಸಿದ್ರೆ ಸಾಕು, ನೀನು ಗೆಲ್ಲುವೆ….”
ಎಂದು ಶುರುವಾಗುತ್ತಾ, ಅಣ್ಣ-ತಂಗಿಯರ ನಡುವಿನಲ್ಲಿ ಈ ಒಗಟುಗಳು ರೂಪುತಾಳುತ್ತವೆ. ಇಂತಹ ನೂರು ಒಗಟುಗಳು ಇಲ್ಲಿವೆ. ತಲೆಗೆ ಸ್ವಲ್ಪ ಕೆಲಸ ಕೊಡುತ್ತವೆ, ಹಾಗೆಯೇ ಮಜಾ ಅನಿಸಿ ಹಗುರಾಗಿಸುತ್ತವೆ ಕೂಡಾ. ನೀವು ಕೂಡಾ ಹೀಗೆ ಒಗಟುಗಳನ್ನು ಕಟ್ಟಬಹುದು. ಈಗ ಇದೊಂದು ನೋಡಿ-
“ತಂಗಿ: ಕಪ್ಪು ಕಮಾನಿನಡಿ ಪೆಟ್ಟಿಗೆಗಳೆರಡು
ನೀರುಂಟು ಅವುಗಳಲಿ, ಕೊಳಗಳಲ್ಲ ಬಿಡು
ರೆಕ್ಕೆಗಳು ಇವೆಯಂತೆ, ಹಕ್ಕಿಗಳೆ? ಅಲ್ಲ
ಕಪ್ಪು ಒಳಗುಂಟಂತೆ ಬಣ್ಣ ಬಳಿದಿಲ್ಲ..
ಉತ್ತರ ಗೊತ್ತಾಯಿತೇ? – ‘ಕಣ್ಣು’. ಗೆಳತಿ.. ಗೆಳೆಯರ ಜೊತೆಗೆ ಕುಳಿತು ಓದಿ.. ಮೊದಲು ಉತ್ತರವ ನೀವೇ ಯೋಚಿಸಿ, ಆಮೇಲೆ ಪುಸ್ತಕದಲ್ಲಿ ನೋಡಿ.
ಲೇಖಕರು : ನಿರ್ಮಲಾ ಸುರತ್ಕಲ್
ಪ್ರಕಾಶಕರು: ಎಸ್.ಎಲ್.ಎನ್. ಪಬ್ಲಿಕೇಶನ್, ಬೆಂಗಳೂರು
ಬೆಲೆ: ರೂ.175/-
ಇದು 6-7 ತರಗತಿಯ ಮಕ್ಕಳು ಓದುವಂತಿದೆ. ಇತರ ಚಿಕ್ಕ ದೊಡ್ಡ ಮಕ್ಕಳಿಗೂ ಇಷ್ಟವಾಗಬಹುದು.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಎಸ್.ಎಲ್.ಎನ್. ಪಬ್ಲಿಕೇಶನ್, ಬೆಂಗಳೂರು, 9972129376
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
***************************************