ಪ್ರೀತಿಯ ಪುಸ್ತಕ : ಸಂಚಿಕೆ - 194
Saturday, December 20, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 194
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... “ನನಗೆ ಇನ್ನೂ ಓದಲು ಬರೆಯಲು ಬರುವುದಿಲ್ಲ. ಏಕೆಂದರೆ ನಾನು ಬುದ್ಧಿ ಮಾಂದ್ಯಳು. ಹಾಗಂದರೆ ನನಗೆ ನಿಮ್ಮಷ್ಟು ಚೆನ್ನಾಗಿ ಯೋಚಿಸಲು ಆಗುವುದಿಲ್ಲ, ವಿಷಯಗಳನ್ನು ಅರ್ಥಮಾಡಿಕೊಳ್ಳಲು ನನಗೆ ಬಹಳ ಸಮಯ ಹಿಡಿಯುತ್ತದೆ. ಕೆಲ ಸಂಗತಿಗಳು ನನಗೆ ಅರ್ಥವೇ ಆಗುವುದಿಲ್ಲ. ನಿನ್ನೆ ಶಾಲೆಯಲ್ಲಿ ನಡೆದ ಮೂರು ಸಂಗತಿಗಳ ಬಗ್ಗೆ ಹೇಳುತ್ತೇನೆ, ನನಗೆ ಅರ್ಥವಾಗಲಿಲ್ಲ, ನಿಮಗೆ ತಿಳಿಯಬಹುದೇನೋ..” ಅಂತ ಮನ್ನಾ ಕಥೆ ಶುರು ಮಾಡುತ್ತಾಳೆ. ಇದು ವಿಶೇಷ ಅಗತ್ಯವುಳ್ಳ ಮಗುವಿನ ಕಥೆ. ಶಾಲೆಯಲ್ಲಿ ಮನ್ನಾ ವಿಶೇಷ ಕೋಣೆಗೆ ಹೋಗಬೇಕಾಗಿತ್ತು.. ಶ್ವೇತಾ ಕಾಲು ಮೇಜಿನಿಂದ ಆಚೆ ಚಾಚಿದ್ದಳು.. ಅದಕ್ಕಾಗಿ ಹೋಗುತ್ತಲೇ ಬಿದ್ದುಬಿಟ್ಟಳು. ಶ್ವೇತಾ ನಕ್ಕಳು. ಮನ್ನಾಗೆ ಇದು ಯಾಕೆಂದು ಅರ್ಥವಾಗಲಿಲ್ಲ. ನಿಮಗೆ ಅರ್ಥವಾಯಿತೇ? ಇಂತಹ ಇನ್ನೂ ಕೆಲವು ಸಂಗತಿಗಳನ್ನು ಮನ್ನಾ ಹೇಳುತ್ತಾಳೆ. ಅರ್ಥಮಾಡಿಕೊಳ್ಳುವುದು ನಮ್ಮ ಜವಾಬ್ದಾರಿ ಅಲ್ಲವೇ?
ಲೇಖಕರು : ಮಿನಿ ಶ್ರೀನಿವಾಸನ್
ಅನುವಾದ: ನಯನಾ ಕಶ್ಯಪ್
ಚಿತ್ರಗಳು: ಶುಭಂ ಲಖೇರಾ
ಪ್ರಕಾಶಕರು: ತುಲಿಕಾ
ಬೆಲೆ: ರೂ.135/-
ತುಲಿಕಾ ಪ್ರಕಾರ ಇದು 5+ ವಯಸ್ಸಿನ ಮಕ್ಕಳಿಗಾಗಿ ಇದೆ. ಇತರ ಚಿಕ್ಕ.. ದೊಡ್ಡ ಮಕ್ಕಳಿಗೂ ಇಷ್ಟವಾಗಬಹುದು.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ತುಲಿಕಾ ಬುಕ್ಸ್ www.tulikabooks.com email: tulikabooks@vsnl.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
***************************************