ಪ್ರೀತಿಯ ಪುಸ್ತಕ : ಸಂಚಿಕೆ - 192
Friday, December 5, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 192
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.. ಅಜ್ಜ ಅಜ್ಜಿ ಹೇಳಿದ ಕಥೆಗಳನ್ನು ಕೇಳುತ್ತಾ ಬೆಳೆದ ಡಾ.ನಾಗಾ ಅವರಿಗೆ ದೊಡ್ಡವರಾದ ಮೇಲೆ ಇಂದಿನ ಮಕ್ಕಳಿಗೆ ಉತ್ತಮ ಕಥೆಗಳನ್ನು ಒದಗಿಸಬೇಕು ಎಂಬ ಮನಸ್ಸಾಯಿತು. ಅದಕ್ಕಾಗಿ 14 ಮಕ್ಕಳ ಸಾಹಿತಿಗಳ ಚಂದದ ಕತೆಗಳನ್ನು ನಿಮಗಾಗಿ ಒಟ್ಟು ಹಾಕಿದ್ದಾರೆ. ಈ ಪುಸ್ತಕದ ಮಹತ್ವ ಏನೆಂದರೆ ಈ 14 ಲೇಖಕರ ಕಥೆಗಳು ಮಾತ್ರವಲ್ಲದೆ, ಅವರ ಕಿರುಪರಿಚಯ ನಿಮಗೆ ಸಿಗುತ್ತದೆ. ಗಾಂಧೀಜಿಯವರ ಎಂತೆಂತಹ ಕಥೆಗಳನ್ನು ನೀವು ಕೇಳಿರಬಹುದು. ಆದರೆ ಉಡುಪಿಯ ಸಮುದ್ರ ಕಿನಾರೆಯ ಕಾಗೆಗಳು ದೂರು ಕೊಟ್ಟು ನ್ಯಾಯ ಪಡೆದ ಕತೆ ಕೇಳಿದ್ದೀರೇ. ಬಹಳ ಸ್ವಾರಸ್ಯಕರವಾಗಿದೆ. ಚಮ್ಮಾರನೊಬ್ಬ ಜೋಯಿಸನಾಗಿ ಅವನ ಅದೃಷ್ಟ ಖುಲಾಯಿಸಿದ ಕತೆಯೂ ಮಜವಾಗಿದೆ. ಪ್ರೀತಿಸುವ ನಾಯಿಯ ಕಥೆ, ಪರಿಸರದ ಕಥೆ, ಕಾಲ್ಪನಿಕ ಕಥೆಗಳನ್ನು ನೀವು ಇಲ್ಲಿ ಓದಬಹುದು.
ಸಂಪಾದಕರು : ಡಾ. ನಾಗ ಎಚ್ ಹುಬ್ಳಿ
ಚಿತ್ರಗಳು : ಸತೀಶ್ ಯಲ್ಲಾಪುರ
ಪ್ರಕಾಶಕರು : ಸುಪ್ರ ಪುಸ್ತಕ, ಶಿವಮೊಗ್ಗ
ಬೆಲೆ: ರೂ.140/-
ಇದು 6-7 ತರಗತಿಯ ಮಕ್ಕಳು ಓದುವಂತಿದೆ. ಇತರ ಚಿಕ್ಕ.. ದೊಡ್ಡ ಮಕ್ಕಳಿಗೂ ಇಷ್ಟವಾಗಬಹುದು.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಸುಪ್ರ ಪುಸ್ತಕ, ಶಿಕಾರಿಪುರ ಶಿವಮೊಗ್ಗ, ಮೊ.7091488490
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
***************************************